ಪ್ರಧಾನ ಸುದ್ದಿ

ಕಣಿವೆಯ ಮತದಾನದಲ್ಲಿ ಬಿಜೆಪಿ ಪಾಲು ಶೇ. ೩

Guruprasad Narayana

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ೩೩ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಚಲಾವಣೆಯಾದ ೧೪ ಲಕ್ಷಕ್ಕೂ ಹೆಚ್ಚು ಮತಗಳಲ್ಲಿ ಬಿಜೆಪಿ ಪಕ್ಷ ಗಳಿಸಿರುವುದು ಕೇವಲ ೪೬ ಸಾವಿರ ಮತಗಳು. ಎಲ್ಲ ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಬಿಜೆಪಿ ಗಳಿಸಿರುವ ಮತ ಕೇವಲ ಶೇ. ೩.೧೨.

ಕಣಿವೆಯಲ್ಲಿ ಮೂರರಿಂದ ನಾಲ್ಕು ಸ್ಥಾನ ಗೆಲ್ಲಲಿದ್ದೇವೆ ಎಂದು ಹೇಳಿಕೊಂಡಿದ್ದ ಬಿಜೆಪಿ, ಕಾಶ್ಮೀರದಲ್ಲಿ ಒಂದು ಸ್ಥಾನವನ್ನು ಗೆಲ್ಲಲು ಕೂಡ ವಿಫಲವಾಗಿದೆ. ಹಬಕಡಲ್ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ, ಕಣಿವೆಯ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಕಣಿವೆಯಲ್ಲಿ ದೊರೆತಿರುವ ಮತಗಳಲ್ಲೂ ಹೆಚ್ಚಿನವು ಅಂಚೆ ಮತದಾನ ಮತ್ತು ವಲಸಿಗ ಪಂಡಿತರ ಮತಗಳು. ಆದರೆ ಜಮ್ಮು ಪ್ರಾಂತ್ಯದಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿರುವ ಬಿಜೆಪಿ ೨೫ ಸ್ಥಾನಗಳನ್ನು ಗೆದ್ದು ಕಿಂಗ್ ಮೇಕರ್ ಆಗಿದೆ. ೨೮ ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಿಡಿಪಿ ಸರ್ಕಾರ ರಚನೆ ಮಾಡಲು ಬಿಜೆಪಿ ಪಕ್ಷದ ಸಹಾಯ ಪಡೆಯಲಿದೆಯೆ ಎಂಬುದು ರಾಜಕೀಯ ಪಂಡಿತರ ಕುತೂಹಲ ಕೆರಳಿಸಿದೆ.

SCROLL FOR NEXT