ಪ್ರಧಾನ ಸುದ್ದಿ

ಅಮೃತಸರದಲ್ಲಿ ೧೨೮ ಜನ ಸಿಖ್ ಧರ್ಮಕ್ಕೆ ಮರುಮತಾಂತರ

Guruprasad Narayana

ಅಮೃತಸರ: ಧರ್ಮ ಜಾಗರಣ ಮಂಚ ಅಮೃತಸರದಲ್ಲಿ ಮಂಗಳವಾರ ಆಯೋಜಿಸಿದ್ದ 'ಘರ್ ವಾಪಸಿ' ಕಾರ್ಯಕ್ರಮದಲ್ಲಿ ೨೩ ಕ್ರಿಶ್ಚಿಯನ್ ಕುಟುಂಬಗಳ ೧೨೮ ಜನ ಸಿಖ್ ಧರ್ಮಕ್ಕೆ ಮರುಮತಾಂತರಗೊಂಡಿದ್ದಾರೆ. ಪಂಜಾಬಿನ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ "ಒತ್ತಾಯಪೂರ್ವಕ ಮತಾಂತರ"ಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆಇದೆ.

ಧರ್ಮ ಜಾಗರಣ ಮಚ ಪಂಜಾಬ್ ಘಟಕದ ಅಧ್ಯಕ್ಷ ರಾಮ್ ಗೋಪಾಲ್ ಯಾವುದೇ ಒತ್ತಡ ಹೇರಿರುವುದಾಗಲೀ ಅಥವಾ ಆಮಿಷ ಒಡ್ಡಿರುವುದಾಗಲಿ ಮಾಡಿಲ್ಲ ಎಂದಿದ್ದಾರೆ. ಮೂಲ ಮಜ್ಭಿ ಸಿಖ್ ಸಮುದಾಯಕ್ಕೆ ಸೇರಿದ್ದ ೧೨೮ ಜನ ಮತ್ತೆ ಸಿಖ್ ಸಮುದಾಯವನ್ನು ಒಪ್ಪಿಕೊಳ್ಳಲು ಆಸಕ್ತಿ ತೋರಿದ್ದರು. ಆದುದರಿಂದ ಗುರು ಗ್ರಂಥ್ ಸಾಹಿಬ್ ಸಮ್ಮುಖದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದಿದ್ದಾರೆ.

ಎಲ್ಲಾ ಮತಾಂತರಗಳನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಆಗ್ರಹಿಸಿರುವ ಮಂಚ್, ಆದರೆ ಒಬ್ಬ ತನ್ನ ಮೂಲ ಧರ್ಮಕ್ಕೆ ಸೇರಿಕೊಳ್ಳುವುದು ಅವನ ಹಕ್ಕು ಎಂದಿದೆ.

SCROLL FOR NEXT