ನವದೆಹಲಿ: ಜಿಹಾದಿ ತತ್ವಗಳನ್ನು ಪಸರಿಸುವ ಮತ್ತು ಭಾರತದ ವಿರೋಧ ನಿಲುವನ್ನು ಹೊಂದಿರುವ 32 ವೆಬ್‌ಸೈಟ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಉಗ್ರ ನಿಗ್ರಹ ದಳದ ಆದೇಶದ ಮೇರೆಗೆ ಈ ವೆಬ್‌ಸೈಟ್‌ಗಳನ್ನು ನಿಷೇಧಿಸಲಾಗಿದೆ. ಕೆಲವೊಂದು ವೆಬ್‌ಸೈಟ್‌ಗಳು ಸಾಮಾಜಿಕ ತಾಣಗಳನ್ನು ತಮ್ಮ ಚಟುವಟಿಕೆಗೆ ಬಳಸುತ್ತಿದ್ದು, ಭಾರತದ ಯುವ ಜನತೆಯನ್ನು ಜಿಹಾದಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿವೆ.
ಈ ರೀತಿ ದೇಶ ವಿರೋಧಿ ನಿಲುವು ಹೊಂದಿರುವ weebly.com, vimeo.com, dailymotion.com and gist.github.com ಮೊದಲಾದ ವೆಬ್ ಸೈಟ್‌ಗಳನ್ನು ನಿಷೇಧಕ್ಕೊಳಪಡಿಸಲಾಗಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿದೆ.