ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಟೋ-ಬಸ್ ಡಿಕ್ಕಿ: 8 ಸಾವು

ಟಂಟಂ ಆಟೋ ಹಾಗೂ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು 2 ಕುಟುಂಬದ 8 ಮಂದಿ ಮೃತಪಟ್ಟಿರುವ ಘಟನೆ ಗುಲ್ಬರ್ಗ- ಜೇವರ್ಗಿ- ಬಿಜಾಪುರ ರಾಷ್ಟ್ರೀಯ ಹೆದ್ದಾರಿ 218ರ ಮಂದೇವಾಲ್ ಗ್ರಾಮದಲ್ಲಿ..

Srinivasa Murthy VN
Updated On : 8 Feb 2014, 1:09 am

ಗುಲ್ಬರ್ಗ: ಟಂಟಂ ಆಟೋ ಹಾಗೂ ಸಾರಿಗೆ ಸಂಸ್ಥೆ ಬಸ್  ಡಿಕ್ಕಿ ಹೊಡೆದು 2 ಕುಟುಂಬದ 8 ಮಂದಿ ಮೃತಪಟ್ಟಿರುವ ಘಟನೆ ಗುಲ್ಬರ್ಗ- ಜೇವರ್ಗಿ- ಬಿಜಾಪುರ ರಾಷ್ಟ್ರೀಯ ಹೆದ್ದಾರಿ 218ರ ಮಂದೇವಾಲ್ ಗ್ರಾಮದಲ್ಲಿ ಶುಕ್ರವಾರ  ಸಂಭವಿಸಿದೆ.
ಯಾದಗಿರಿಯ ಅಂಬೇಡ್ಕರ್ ಸರ್ಕಲ್‌ನ ವೆಂಕಟೇಶ್, ಶಾಂತಮ್ಮ, ಮಕ್ಕಳಾದ ರೆಡ್ಡಿ, ರೂಪಾ, ರಮೇಶ್, ಮಲ್ಲಪ್ಪ, ನಾಗಪ್ಪ ದಂಪತಿ, ಮಲ್ಲಿಕಾರ್ಜುನ ಮೃತರು. ಅವರು ಆಟೋದಲ್ಲಿ ಯಾದಗಿರಿಯಿಂದ  ಘತ್ತರ್ಗಾಕ್ಕೆ ಹೊರಟಿದ್ದರು. ಆಗ ಪೆಟ್ರೋಲ್ ಖಾಲಿಯಾಗಿದ್ದರಿಂದ ಮಂದೇವಾಲ್ ಬಳಿಯ ಬಂಕ್‌ಗೆ ಟಂಟಂ ಅನ್ನು ತಿರುಗಿಸುತ್ತಿದ್ದಾಗ ಎದುರುಗಡೆ ಬಿಜಾಪುರದಿಂದ ಗುಲ್ಬರ್ಗಕ್ಕೆ ಹೊರಟಿದ್ದ ಬಸ್ಸು ಟಂಟಂಗೆ ಡಿಕ್ಕಿ ಹೊಡೆದಿದೆ.  ಅಪಘಾತದ ರಭಸಕ್ಕೆ ಆಟೋ  ನಜ್ಜುಗುಜ್ಜಾಗಿದ್ದು, ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement