ಅಲ್ಪಸಂಖ್ಯಾತರಿಗೆ ಐಎಎಸ್, ಕೆಎಎಸ್ ತರಬೇತಿ
ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ, ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ, ನವೋದಯ ವಿದ್ಯಾಲಯ ಮಾದರಿಯಲ್ಲಿ ಪ್ರತಿ ಜಿಲ್ಲೆಗಳಲ್ಲಿ ಶಾಲೆ ಸೇರಿದಂತೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಗೆ ಈ ಬಾರಿ ಬಜೆಟ್ನಲ್ಲಿ ಭರಪೂರ ಕೊಡುಗೆ ನೀಡಲಾಗಿದೆ. ಅಲ್ಪಸಂಖ್ಯಾತರಿಗಾಗಿ 800 ಕೋಟಿ ಯೋಜನೆಗಳನ್ನು ಪ್ರಕಟಿಸಲಾಗಿದೆ. ಪ್ರತಿ ತಾಲೂಕುಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗಾಗಿ ಪ್ರತ್ಯೇಕ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶ ತರಬೇತಿ ಹಾಗೂ ಮೂಲಸೌಲಭ್ಯಕ್ಕಾಗಿ 2 ಕೋಟಿ ಮೀಸಲಿಡಲಾಗಿದೆ. ಅಲ್ಪಸಂಖ್ಯಾತರ 100 ಶಾಲೆಗಳಿಗೆ 1.5 ಕೋಟಿ ವೆಚ್ಚದಲ್ಲಿ ಇ- ಕಲಿಕೆ ಮತ್ತು ಬೋಧನಾ ಸಾಮಗ್ರಿ, ಗಣಕಯಂತ್ರಗಳ ವಿತರಣೆ, ಪ್ರತಿಷ್ಠಿತ ತರಬೇತಿ ಕೇಂದ್ರಗಳಲ್ಲಿ ಯುವಕರಿಗೆ ಐಎಎಸ್/ಕೆಎಎಸ್, ಸಿಇಟಿ ಪರೀಕ್ಷೆ ಮತ್ತು ಪೊಲೀಸ್ ನೇಮಕ ತರಬೇತಿ ನೀಡಲು ನಿರ್ಧರಿಸಲಾಗಿದೆ. ಎಸ್ಡಿಪಿ ಯೋಜನೆಯಲ್ಲಿ ಮೆಟ್ರಿಕ್ ನಂತರದ 50 ವಿದ್ಯಾರ್ಥಿ ನಿಲಯ ಸ್ಥಾಪಿಸಲು ಉದ್ದೇಶಿಲಾಗಿದೆ. ಅಲ್ಪಸಂಖ್ಯಾತರ 30 ಹಾಸ್ಟೆಲ್ಗಳು ಸದ್ಯ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 24.65 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶನ ಖರೀದಿ, ಹೆಚ್ಚುವರಿ ಕಾಮಗಾರಿ ಹಾಗೂ ದುರಸ್ತಿಗೆ ಉದ್ದೇಶಿಸಲಾಗಿದೆ.