ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ತೋಟಗಾರಿಕೆ ಚಟುವಟಿಕೆಗಳಿಗೆ ಸೌರ 'ಬೆಳಕು'

Srinivasa Murthy VN
Updated On : 15 Feb 2014, 12:19 pm

ತೋಟಗಾರಿಕೆ ಚಟುವಟಿಕೆಗಳಿಗೆ ಸೌರಶಕ್ತಿಯ ಬಳಕೆ ಮಾಡುವ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಅದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು 2 ಕೋಟಿ ಒದಗಿಸುವುದಾಗಿ ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಲಾಗಿದೆ. ನೀರಾವರಿ ಪಂಪ್‌ಗಳು, ಇತರೆ ಶಕ್ತಿ ಚಾಲಿತಯಂತ್ರಗಳ ಬಳಕೆಗೆ ಸೌರಶಕ್ತಿ ಬಳಕೆ ಪ್ರೋತ್ಸಾಹಿಸುವ ಸಲುವಾಗಿ ಶೇ.75ರಷ್ಟು ಸಹಾಯಧನ ನೀಡಲಾಗುವುದು.
ತೋಟಗಾರಿಕೆ ಇಲಾಖೆಗೆ ಒಟ್ಟು 1,434 ಕೋಟಿ ಅನುದಾನ ನೀಡಿರುವ ಸರ್ಕಾರ, ಹಾನಿಗೊಳಗಾದ ಅಡಿಕೆ ಮತ್ತು ತೆಂಗು ತೋಟಗಳ ಪುನಶ್ಚೇತನಕ್ಕೆ ಕಾರ್ಯಕ್ರಮ ವಿಸ್ತರಣೆ, ಪರಿಶಿಷ್ಟ ಜಾತಿ, ಪಂಗಡದ ರೈತರು ಹೆಚ್ಚು ಪ್ರಮಾಣದಲ್ಲಿ ತೋಟಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸುಧಾರಿತ ತಂತ್ರಜ್ಞಾನ, ಸಸ್ಯ ಸಂರಕ್ಷಣೆ, ಯಾಂತ್ರೀಕರಣ, ಮೌಲ್ಯವರ್ಧನೆ ಚಟುವಟಿಕೆಗಳಿಗೆ ಶೇ.90 ರಷ್ಟು ಸಹಾಯಧನ ಘೋಷಿಸಿದೆ.
ನೋಂದಾಯಿತ ರೈತರಿಗೆ ಹವಾಮಾನ, ಬೇಸಾಯ ಕ್ರಮಗಳು, ಮಾರುಕಟ್ಟೆ ಬೆಲೆಗಳ ವಿವರಗಳನ್ನು ಮೊಬೈಲ್ ಸಂದೇಶಗಳ ಮೂಲಕ ನೇರವಾಗಿ ಮೊಬೈಲ್, ಗಣಕ ಯಂತ್ರ ಮತ್ತು ಮಾಹಿತಿ ಕಿಯೋಸ್ಕ್‌ಗಳ ನಿರಂತರವಾಗಿ ಮಾಹಿತಿ ನೀಡುವ ಯೋಜನೆಯ ಪ್ರಾಯೋಗಿಕ ಜಾರಿಗೆ 2 ಕೋಟಿ, ನಿರುದ್ಯೋಗಿಗಳಿಗೆ ನರ್ಸರಿ ಚಟುವಟಿಕೆಗಳು, ತೆಂಗು ಮತ್ತು ಅಡಕೆ ಮರಗಳ ಫಸಲು ಕಟಾವು, ಅಲಂಕಾರಿಕ ತೋಟಗಳ ನಿರ್ವಹಣೆ ಮತ್ತಿತರ ಕಾರ್ಯಗಳಿಗೆ ರು. 1 ಕೋಟಿ ನಿಗದಿಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement