ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶಿರಾಡಿಘಾಟ್ ರಸ್ತೆಯ ಶಾಶ್ವತ ದುರಸ್ತಿಗೆ ಕೂಡಿಬಂತು ಭಾಗ್ಯ

ಶಿರಾಡಿ ಘಾಟ್ ರಸ್ತೆಯ ಶಾಶ್ವತ ದುರಸ್ತಿ ಹಾಗೂ ಸುರಂಗ ಮಾರ್ಗದ ರಸ್ತೆಗೆ ಪ್ರಾಮುಖ್ಯ ನೀಡಲಾಗಿದ್ದು, ವಿಶ್ವಬ್ಯಾಂಕ್...

Srinivasa Murthy VN
Updated On : 15 Feb 2014, 1:38 am

ಶಿರಾಡಿ ಘಾಟ್ ರಸ್ತೆಯ ಶಾಶ್ವತ ದುರಸ್ತಿ ಹಾಗೂ ಸುರಂಗ ಮಾರ್ಗದ ರಸ್ತೆಗೆ ಪ್ರಾಮುಖ್ಯ ನೀಡಲಾಗಿದ್ದು, ವಿಶ್ವಬ್ಯಾಂಕ್ ಹಾಗೂ ಆರ್ಥಿಕ ಸಂಸ್ಥೆಗಳ ಸಹಯೋಗದಲ್ಲಿ 452 ಕಿಮೀ ಉದ್ದದ 8 ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
2014- 15ನೇ ಸಾಲಿನ ಬಜೆಟ್‌ನಲ್ಲಿ ಲೋಕೋಪಯೋಗಿ ಇಲಾಖೆಗೆ 6634 ಕೋಟಿ ಒದಗಿಸಲಾಗಿದೆ. ಅತೀ ಹಿಂದುಳಿದ ಹಾಗೂ ಹಿಂದುಳಿದ ತಾಲೂಕುಗಳಲ್ಲಿ ಅಭಿವೃದ್ಧಿಯಾಗದಿರುವ ರಸ್ತೆಗಳನ್ನು ಗುರುತಿಸಿ 544 ಕಿಮೀ ರಸ್ತೆಯನ್ನು ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.
ಕೆಶಿಪ್‌ಗೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ನಿಂದ 350 ದಶಲಕ್ಷ ಡಾಲರ್‌ಗಳ ಎರಡನೇ ಆರ್ಥಿಕ ನೆರವಿನ ಪ್ರಸ್ತಾಪಕ್ಕೆ ಸಮ್ಮತಿಸಲಾಗಿದ್ದು, 1200 ಕಿಮೀ ರಸ್ತೆ ಅಭಿವೃದ್ಧಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತದೆ. ವಿಶ್ವಬ್ಯಾಂಕ್ ಹಾಗೂ ಆರ್ಥಿಕ ಸಂಸ್ಥೆಗಳ ಸಹಯೋಗದಲ್ಲಿ 452.70 ಕಿಮೀ ಉದ್ದದ 8 ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳನ್ನು 1203 ಕೋಟಿ ಅಂದಾಜು ಮೊತ್ತದಲ್ಲಿಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ 95 ಕೋಟಿ ಅನುದಾನದಲ್ಲಿ ರಾಷ್ಟ್ರೀಯ ಹೆದ್ದಾರಿ- 48ರಲ್ಲಿ ಶಿರಾಡಿ ಘಾಟ್ ರಸ್ತೆಯನ್ನು 18 ತಿಂಗಳಲ್ಲಿ ಶಾಶ್ವತವಾಗಿ ದುರಸ್ತಿಗೊಳಿಸಲಾಗುತ್ತದೆ. ಶಿರಾಡಿಘಾಟ್ ಭಾಗದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಜೈಕಾ ಸಹಯೋಗದಲ್ಲಿ 2200 ಕೋಟಿ ಮೊತ್ತದಲ್ಲಿ ಸುಮಾರು 18.50 ಕಿಮೀ ಉದ್ದ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ. ಇದರಲ್ಲಿ 7.7 ಕಿಮೀ ಸುರಂಗ, 3.90 ಕಿಮೀ ಉದ್ದ 4 ಸೇತುವೆ ಹಾಗೂ 6.9 ಕಿಮೀ ಉದ್ದದ ರಸ್ತೆ ಸೇರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement