ಸರ್ವರ ಸುಖಕ್ಕೆ ನೀರೆರೆದ ಮುಖ್ಯಮಂತ್ರಿ
ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಸುಧಾರಿತ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆಗೆ ಶೇ.90ರಷ್ಟು ಸಹಾಯಧನ.
ಹಾಲು ಉತ್ಪಾದಕ ಸಂಘಗಳ ಆಡಳಿತಾತ್ಮಕ ವೆಚ್ಚಕ್ಕಾಗಿ ಪ್ರತಿ 1 ಲೀ ಹಾಲು ಸಂಗ್ರಹಣೆಗೆ 20 ಪೈಸೆ ಪ್ರೋತ್ಸಾಹಧನ
ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರ ಸಾಲ ಮನ್ನಾ ಮಾಡುವುದಕ್ಕೆ 5 ಕೋಟಿ ನಿಗದಿ.
ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ರು. 400 ಕೋಟಿ ಅಂದಾಜು ವೆಚ್ಚದ ಯೋಜನೆ ವಿವರ ಕೇಂದ್ರಕ್ಕೆ
ಸಮುದಾಯ ಏತ ನೀರಾವರಿ ಮತ್ತು ಸೌರಶಕ್ತಿ ಅಳವಡಿಕೆಗಾಗಿ ಸೂರ್ಯಜ್ಯೋತಿ- ಪರಂಜ್ಯೋತಿ
ಕೆರೆಗಳ ಅಭಿವೃದ್ಧಿ, ಶ್ರೇಯೋಭಿವೃದ್ಧಿ ಯೋಜನೆ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ 1 ಕೆರೆ ಅಭಿವೃದ್ಧಿ
2-3 ಲಕ್ಷಕ್ಕೆ ಶೂನ್ಯ ಬಡ್ಡಿ ದರದಲ್ಲಿ ರೈತರ ಅಲ್ಪಾವಧಿ ಕೃಷಿ ಸಾಲ ಮಿತಿ ಹೆಚ್ಚಳ
9405 ಪ್ರಾಥಮಿಕ, 1137 ಪ್ರೌಢ ಶಾಲೆ ಶಿಕ್ಷಕರು, 1130 ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕ
ರಸ್ತೆ ಅಪಘಾತಕ್ಕೊಳಗಾದವರಿಗೆ ತುರ್ತು ಚಿಕಿತ್ಸೆಗೆ ರು. 25 ಸಾವಿರದ ಸಾಂತ್ವನ ಯೋಜನೆ. ಇದಕ್ಕೆ 5 ಕೋಟಿ ನಿಗದಿ.
50 ತಾಲೂಕುಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕಾ ಘಟಕ ಸ್ಥಾಪನೆಗೆ 3 ಕೋಟಿ ನಿಗದಿ
ಬಡತನ ರೇಖೆಗಿಂತ ಕೆಳಗಿರುವ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ದಂತಪಂಕ್ತಿ ವಿತರಣೆಗೆ 2 ಕೋಟಿ
ಜಲಸಂಪನ್ಮೂಲ ಯೋಜನೆಯಲ್ಲಿ ಪ್ರಗತಿಯಲ್ಲಿರುವ ಎಲ್ಲ ಯೋಜನೆ 5 ವರ್ಷಗಳಲ್ಲಿ ಪೂರ್ಣಗೊಳಿಸುವುದು
ನಾಲ್ಕು ಹಿಂದುಳಿದ ಜಿಲ್ಲೆಗಳಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಪ್ರಾಯೋಗಿಕವಾಗಿ ಪುಷ್ಟಿ ಬಿಸ್ಕತ್ ವಿತರಣೆ
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ವಿವಿಧ ಯೋಜನೆ
1 ಕೋಟಿ ಷೇರುಧನ ವಿಕಲ ಚೇತನರಿಗಾಗಿ ಆಶಾಕಿರಣ ಯೋಜನೆ
ರು. 2 ಕೋಟಿ ಎಸ್ಎಂಎಸ್, ಕಿಯೊಸ್ಕ್ ಮೂಲಕ ಹವಾಮಾನ, ಬೇಸಾಯಕ್ರಮ, ಮಾರುಕಟ್ಟೆ ಬೆಲೆ, ಇತ್ಯಾದಿ
ಆಹಾರ ಉತ್ಪಾದನೆ ಪ್ರಮಾಣ 135 ಲಕ್ಷ ಮೆ. ಟನ್ಗೆ ಹೆಚ್ಚಿಸುವ ಗುರಿ. ಬೀಜ ಸಂಸ್ಕರಣೆ, ಗೋದಾಮು ನಿರ್ಮಾಣ
1.5 ಕೋಟಿ.ವೃದ್ಧಾಶ್ರಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೆಚ್ಚ
ಅಂಗನವಾಡಿ ಕಾರ್ಯಕರ್ತರಿಗೆ ರು. 500 ಸಹಾಯಕರಿಗೆ 250 ಪ್ರೋತ್ಸಾಹ ಧನ ಹೆಚ್ಚಳ
ಅನುದಾನಿತ ಕಾಲೇಜುಗಳ 1.15 ಲಕ್ಷ ವಿದ್ಯಾರ್ಥಿನಿಯರ ವ್ಯಾಸಂಗ ಮತ್ತು ಪ್ರಯೋಗಾಲಯ ಶುಲ್ಕ ಮನ್ನಾ
1 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹೊಲಗಾಲುವೆ ನಿರ್ಮಾಣ
6 ಹೊಸ ವೈದ್ಯ ಕಾಲೇಜು ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಹಾವೇರಿ, ಯಾದಗಿರಿಯಲ್ಲಿ
ನಾರಾಯಣಪುರ ಎಡದಂಡೆ ಕಾಲುವೆ ಆಧುನೀಕರಣಕ್ಕಾಗಿ ರು. 3752 ಕೋಟಿ ಅಂದಾಜು ವೆಚ್ಚದ ಯೋಜನಾ ವರದಿ
ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ನಗರ ಪ್ರದೇಶಕ್ಕೆ ವಿಸ್ತರಣೆ
ಮಾಹಿತಿ ಕೇಂದ್ರ ಆಧಾರಿತ ವಿಸ್ತರಣಾ ಸೇವೆಯನ್ನು ಮೀನುಗಾರರಿಗೆ ಒದಗಿಸಲು 1ಕೋಟಿ ನಿಗದಿ.
3000 ಮನೆಗಳು ಮತ್ಸ್ಯಾಶ್ರಯ ಯೋಜನೆಯ ನಿರಾಶ್ರಿತರಿಗೆ ನಿರ್ಮಾಣ
1 ಕೋಟಿ ಕನಕದಾಸರ ಕೃತಿಗಳು 15 ಭಾಷೆಗೆ ಭಾಷಾಂತರ
2 ಕೋಟಿನೀರಾವರಿ ಪಂಪ್ಸೆಟ್, ಇಂಧನ ಚಾಲಿತ ಯಂತ್ರಗಳಲ್ಲಿ ಸೌರಶಕ್ತಿಯ ಬಳಕೆಗೆ ಶೇ.75ರಷ್ಟು ಸಹಾಯಧನ
ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾದ ಸರ್ಕಾರ. ಕೇಂದ್ರ ಲೋಕ್ ಪಾಲ್ ಮಾದರಿಯಲ್ಲಿ ರಾಜ್ಯದಲ್ಲೂ ಹೊಸ ಕಾಯ್ದೆ.
1 ಕೋಟಿ ಮೊತ್ತದಲ್ಲಿ ಕೃಷಿ ಮಾರುಕಟ್ಟೆಯ ಹಮಾಲಿಗಳ ಕಲ್ಯಾಣಕ್ಕಾಗಿ ಕಾಯಕ ನಿಧಿ ಸ್ಥಾಪನೆ
ರು. 50 ಕೋಟಿ. ಗೊಲ್ಲ, ಅಲೆಮಾರಿಸಮುದಾಯಗಳ ಸಮಗ್ರ ಅಭಿವದ್ಧಿ
ಪರಮಶಿವಯ್ಯ ವರದಿಯಂತೆ ಪಶ್ಚಿಮಘಟ್ಟಗಳಿಂದ ನೀರು ಪಡೆವಪರ್ಯಾಯ ಮಾರ್ಗ ಪರಿಶೀಲನೆಗೆ ಕ್ರಮ
ತೀವ್ರ ಅಂಗವೈಕಲ್ಯ ಹೊಂದಿರುವ 20- 60 ವರ್ಷದವರಿಗೆ ತ್ರಿಚಕ್ರ ವಾಹನ ವಿತರಣೆಗೆ ರು. 7 ಕೋಟಿ
212 ಕೋಟಿ ವೆಚ್ಚದಲ್ಲಿ ಮಾನವ- ಪ್ರಾಣಿ ಸಂಘರ್ಷ ತಡೆಗೆ ಬ್ಯಾರಿಕೇಡ್
100 ಹೊಸ ಪಶು ಚಿಕಿತ್ಸಾ ಕೇಂದ್ರಗಳಿಗೆ, ಹಾಲಿ ಇರುವ ಕೇಂದ್ರಗಳ ಮೇಲ್ದರ್ಜೆಗೆ ಏರಿಸುವುದಕ್ಕೆ 10 ಕೋಟಿ
5 ಕೋಟಿ ವೆಚ್ಚದಲ್ಲಿ ಕಸಾಪ ಶತಮಾನೋತ್ಸವ ಸ್ಮಾರಕ ಭವನ ನಿರ್ಮಾಣ
ಸುಧಾರಿತ ಮಿಶ್ರ ತಳಿಗೆ ಕೆಜಿಗೆ 10 ರಿಂದ 30, ಬೈವೋಳ್ವೈನ್ ತಳಿಗೆ ಪ್ರತಿ ಕೆಜಿಗೆ 40ರಿಂದ 50 ಪ್ರೋತ್ಸಾಹಧನ.
2 .50 ಕೋಟಿ ಜಾನುವಾರುಗಳ ರೋಗ ನಿಯಂತ್ರಣಕ್ಕೆ 44 ಚೆಕ್ಪೋಸ್ಟ್ ನಿಗಾ ಘಟಕಗಳ ಸ್ಥಾಪನೆಗೆ ಮೀಸಲು
1.2 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ
ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಪ್ರಕಾರ ರಾಜ್ಯದ ಪಾಲಿನ ನೀರು ಪಡೆಯುವುದಕ್ಕೆ ಎಲ್ಲ ರೀತಿಯ ಕ್ರಮ.
30 ಅತ್ಯುತ್ತಮ ಅಧ್ಯಾಪಕರಿಗೆ ರು. 50 ಸಾವಿರ ಹಾಗೂ 30 ಅತ್ಯುತ್ತಮ ಸಂಶೋಧಕರಿಗೆ ರು. 1 ಲಕ್ಷಮೌಲ್ಯದ ಪ್ರಶಸ್ತಿ
10 ಜಿಲ್ಲೆಗಳಲ್ಲಿ ಪ್ರಸೂತಿ ಆರೈಕೆ, ಮಡಿಲು ಕಿಟ್ ಯೋಜನೆ ವಿಸ್ತರಣೆಗೆ ರು. 52 ಕೋಟಿ, ಆಸ್ಪತ್ರೆ ನೈರ್ಮಲ್ಯ
ಸಾರ್ವಜನಿಕರ ಮತ್ತು ಪ್ರವಾಸಿಗರ ಆಕರ್ಷಣೆಗೆ ಬೆಂಗಳೂರಿನ ಹೆಣ್ಣೂರು ಕೆರೆ ಪ್ರದೇಶದಲ್ಲಿ ಸಸ್ಯೋದ್ಯಾನ
1 ಲಕ್ಷ ಹೆ. ಪ್ರದೇಶಕ್ಕೆ ಬಸಿಗಾಲುವೆ, 30 ಸಾವಿರ ಹೆಕ್ಟೇರ್ ಪ್ರದೇಶದ ಸವಳು-ಜವಳು ಭೂಮಿ ಅಭಿವೃದ್ಧಿ
ಹೊರದೇಶಗಳಲ್ಲಿ ಇರುವ ದೇಶದ ಉತ್ಕೃಷ್ಟ 50 ಸಂಶೋಧಕರು, 50 ಉಪನ್ಯಾಸಕರನ್ನು 'ಸ್ವದೇಶಕ್ಕೆ ಸ್ವಾಗತ' ದಡಿ ವಾಪಸ್
ರು. 2.5 ಕೋಟಿ ರಿಮ್ಯಾಂಡ್ ಹೋಂನಲ್ಲಿರುವ ಅನಾಥ, ನಿರ್ಗತಿಕ ಮಕ್ಕಳಿಗೆ ವಿಮಾ ಸೌಲಭ್ಯ
ಉತ್ತರ ಕನ್ನಡದ ಕಾರವಾರದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ
ಮಹಿಳಾ ಸಹಕಾರ ಸಂಘಗಳ ನೋಂದಣಿ ಮತ್ತು ಪ್ರೋತ್ಸಾಹಕ್ಕಾಗಿ ಪ್ರಿಯದರ್ಶಿನಿ ಯೋಜನೆ ಜಾರಿ. ಹೊಸ ಷೇರು ಬಂಡವಾಳಕ್ಕಾಗಿ 1 ಕೋಟಿ ನಿಗದಿ.
ಸ್ಮಾರಕಗಳ ಅಧ್ಯಯನಕ್ಕೆ ಪ್ರಾಚ್ಯ ಪ್ರಜ್ಞೆ ಯೋಜನೆ
ಕರ್ತವ್ಯ ನಿರತರಾಗಿದ್ದಾಗ ಮೃತಪಟ್ಟ ಪೊಲೀಸರಿಗೆ ರು. 30 ಲಕ್ಷ ಪರಿಹಾರ
ಕಾನೂನು ಸುವ್ಯವಸ್ಥೆಯಲ್ಲಿ ಮಹತ್ತರ ಪಾತ್ರ ವಹಿಸುವ ಪೊಲೀಸ್ ಇಲಾಖೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅತಿ ಹೆಚ್ಚಿನ ಆಸಕ್ತಿ ವಹಿಸಿದ್ದು, ಕರ್ತವ್ಯ ನಿರತರಾಗಿದ್ದಾಗ ಮರಣ ಹೊಂದಿದರೆ 30 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ವಿಮಾ ಸೌಲಭ್ಯವನ್ನು ಎಲ್ಲ ಸಿಬ್ಬಂದಿಗೂ ವಿಸ್ತರಿಸಿದ್ದಾರೆ.
ಆಂತರಿಕ ಭದ್ರತಾ ವಿಭಾಗದ ಎಲ್ಲಾ ಶಾಖೆಯ ಸಿಬ್ಬಂದಿ ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮತ್ತು ಅಪರಾಧವನ್ನು ತಡೆಗಟ್ಟುವ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸ್ ಸಿಬ್ಬಂದಿ ಮರಣ ಹೊಂದಿದ ಸಂದರ್ಭದಲ್ಲಿ ನೀಡಲಾಗುವ ಪರಿಹಾರ ಮೊತ್ತವನ್ನು ರು. 5 ಲಕ್ಷದಿಂದ ರು. 30 ಲಕ್ಷಕ್ಕೆ ಏರಿಸಲಾಗಿದೆ. ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುವ ಸಿಬ್ಬಂದಿಗೆ ರು. 10 ಲಕ್ಷ ಹಾಗೂ ಗಂಭೀರ ಸ್ವರೂಪದ ಗಾಯಗಳಿಗೀಡಾಗುವ ಸಿಬ್ಬಂದಿಗೆ ರು. 2 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ. ಪೊಲೀಸ್ ಸಿಬ್ಬಂದಿ ಕಲ್ಯಾಣ ಯೋಜನೆಯಲ್ಲಿ ಹೆಡ್ ಕಾನ್ಸ್ಟೇಬಲ್ಗಳು, ಪೇದೆಗಳು ಮತ್ತು ಹಿಂಬಾಲಕರ ಸಮೂಹ ವಿಮಾ ಮೊಬಲಗನ್ನು 10 ಲಕ್ಷದಿಂದ ರು. 20 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ವಾರ್ತಾ ಇಲಾಖೆಗೆ 92 ಕೋಟಿ ಪತ್ರಕರ್ತರಿಗೆ ವಿಮಾ ಯೋಜನೆ
ಕಾರ್ಯನಿರತ ಪತ್ರಕರ್ತರು ಮತ್ತು ಅವರ ಕುಟುಂಬವರಿಗೆ ಆರೋಗ್ಯ ವಿಮಾ ಯೋಜನೆ ರೂಪಿಸುವುದು. ನಿವೃತ್ತ ಪತ್ರಕರ್ತರ ಪಿಂಚಣಿ ಹಣವನ್ನು 3 ಸಾವಿರದಿಂದ 6ಸಾವಿರಗಳಿಗೆ ಹೆಚ್ಚಿಸಲಿದೆ. ಒಟ್ಟಾರೆ ವಾರ್ತಾ ಇಲಾಖೆಗೆ 92 ಕೋಟಿ ಅನುದಾನ ಒದಗಿಸಲಾಗಿದೆ.
ಮೀನುಗಾರರಿಗೆ ಸಿಮ್ಕಾರ್ಡ್
ಮೀನುಗಾರರಿಗೆ ಈಗ ಸಿಮ್ ಕಾರ್ಡ್ ಭಾಗ್ಯ! ಮೀನುಗಾರರಿಗೆ ಸರ್ಕಾರದ ವಿವಿಧ ಹಂತದಲ್ಲಿರುವ ಮಾಹಿತಿಗಳನ್ನು ಕೇಂದ್ರೀಕರಿಸಿ ತಲುಪಿಸುವ ಕರೆ ಕೇಂದ್ರ ಆಧಾರಿತ ವಿಸ್ತರಣಾ ಸೇವೆಯಾಗಿ ಮೀನುಗಾರರಿಗೆ ಸಿಮ್ ಕಾರ್ಡ್ ವಿತರಿಸಲು ಸರ್ಕಾರ ಮುಂದಾಗಿದೆ. ಮೀನುಗಾರರಿಗೆ ಸಿಮ್ ಕಾರ್ಡ್ ವಿತರಿಸಿ, ಆ ಮೂಲಕ ಸರ್ಕಾರದ ಯೋಜನೆಗಳ ವಿವರ, ಮಾರುಕಟ್ಟೆ ದರ, ಮೀನುಗಾರಿಕೆಗೆ ಸಾಮರ್ಥ್ಯವುಳ್ಳ ವಲಯ, ಹವಾಮಾನ ವರದಿಗಳ ಕುರಿತು ಉಚಿತ ಧ್ವನಿ ಸಂದೇಶಗಳನ್ನು ಕನ್ನಡದಲ್ಲಿ ನೀಡಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ರು. 1 ಕೋಟಿ ಒದಗಿಸಲಾಗಿದೆ.
10 ತ್ವರಿತಗತಿ ನ್ಯಾಯಾಲಯ
ಮಹಿಳೆಯರ ಮೇಲಿನ ದೌರ್ಜನ್ಯಗಳ ಪ್ರಕರಣಗಳ ವಿಚಾರಣೆಗೆ 10 ತ್ವರಿತಗತಿ ನ್ಯಾಯಾಲಯಗಳನ್ನು ಆರಂಭಿಸುವುದಾಗಿ ಕಳೆದ ಬಜೆಟ್ನಲ್ಲಿ ತಿಳಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅತ್ಯಾಚಾರದಂತಹ ಅಪರಾಧಗಳನ್ನು ವಿಚಾರಣೆ ನಡೆಸುವ ಸಲುವಾಗಿ 10 ಹೆಚ್ಚುವರಿ ತ್ವರಿತಗತಿ ನ್ಯಾಯಾಲಯ ಮಂಜೂರು ಮಾಡಲಾಗಿದೆ ಎಂದಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಕಾನೂನು ಮತ್ತು ನ್ಯಾಯಾಲಯಗಳ ಇಲಾಖೆಗೆ 636 ಕೋಟಿ ನಿಗದಿಪಡಿಸಿದ್ದು, ಅಧೀನ ನ್ಯಾಯಾಲಯಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು 458 ಕೋಟಿ ಅನುದಾನ ಒದಗಿಸಲಾಗಿದೆ. ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಆವರಣದಲ್ಲಿನ ವಕೀಲರ ಭವನದ 3ನೇ ಹಂತದ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ. ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಆಡಳಿತ ಕಟ್ಟಡ, ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯದ ಕಟ್ಟಡ, ಸಿಬ್ಬಂದಿಯ ವಸತಿ ನಿಲಯ ಕಟ್ಟಡ, ಒಳಾಂಗಣ ಕ್ರೀಡಾಂಗಣಗಳ ಕಾಮಗಾರಿಗೆ ಪ್ರಸಕ್ತ ಸಾಲಿನಲ್ಲಿ 10 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ.
ಸಣ್ಣ ಕೈಗಾರಿಕೋದ್ಯಮಕ್ಕೆ ನಿರಾಶಾದಾಯಕ
ಸಣ್ಣ ಕೈಗಾರಿಕೆಗಳ ಬಗ್ಗೆ ಯಾವುದೇ ರೀತಿಯ ಪ್ರಸ್ತಾಪ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಯಮಕ್ಕೆ ಆಘಾತ ಮತ್ತು ನಿರಾಶೆ ಉಂಟು ಮಾಡಿದ್ದಾರೆ. ಕೈಗಾರಿಕೆಗಳಿಗೆ ಭೂಮಿ, ಲೈಸೆನ್ಸ್, ವ್ಯಾಟ್ ಸಂಬಂಧಿತ ವಿಷಯಗಳು, ಇ-ಸುಗಮ, ಪ್ರವೇಶ ತೆರಿಗೆ ಸೇರಿದಂತೆ ಸಣ್ಣ ಕೈಗಾರಿಕೆಗೆ ಉತ್ತೇಜನ ನೀಡುವ ಯೋಜನೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೆವು. ಆದರೆ, ಮುಖ್ಯಮಂತ್ರಿಯವರು ನಮ್ಮ ಯಾವುದೇ ಮನವಿಯನ್ನು ಬಜೆಟ್ನಲ್ಲಿ ಪುರಸ್ಕರಿಸಿಲ್ಲ.
-ಬಿ.ಪಿ. ಶಶಿಧರ್, ಅಧ್ಯಕ್ಷ, ಕಾಸಿಯಾ
ಚುನಾವಣಾ ಬಜೆಟಲ್ಲ...
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಈಡೇರಿಸುವ ಪ್ರಯತ್ನ ನಡೆಸಿದ್ದಾರೆ. ಪ್ರತಿಪಕ್ಷಗಳು ಬಣ್ಣಿಸಿದ ರೀತಿ ಇದು ಚುನಾವಣಾ ಬಜೆಟ್ ಅಲ್ಲ. ಇದು ಹೊಸ ತೆರಿಗೆ ವಿಧಿಸದೇ ಎಲ್ಲ ವರ್ಗಗಳಿಗೆ ನ್ಯಾಯ ಒದಗಿಸುವ ದೂರದೃಷ್ಟಿಯುಳ್ಳ ಜನಪರ ಬಜೆಟ್.
- ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷರು
ಆರ್ಥಿಕವಾಗಿ ಹಿಂದುಳಿದಿರುವ ಎಲ್ಲ ವರ್ಗದವರಿಗೆ ಶಾದಿಭಾಗ್ಯ ವಿಸ್ತರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿಯೇ ಇಲ್ಲ. ರೈತರ ಹಿತದೃಷ್ಟಿ, ಶಿಕ್ಷಣದ ಗುಣಮಟ್ಟ ಹೆಚ್ಚಳ, ಆರ್ಥಿಕ ಅಭಿವೃದ್ಧಿ ಕಡೆಗೆ ಸಿದ್ದರಾಮಯ್ಯ ಗಮನಹರಿಸಿಲ್ಲ.
- ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ
ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿಗೆ ಈ ಬಜೆಟ್ನಲ್ಲಿ ಪ್ರಾಮುಖ್ಯ ನೀಡಲಾಗಿಲ್ಲ. ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಎಂದು ಹೇಳಿದ್ದಾರೆ. ಆದರೆ, ಏನು ಮಾಡುತ್ತೇವೆ ಎಂದು ತಿಳಿಸಿಲ್ಲ. ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಿಲ್ಲ.
- ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ