ಐಟಿ: ಮೊಬೈಲ್ ಸಂಖ್ಯೆ, ಇಮೇಲ್ ಮರೆಯದಿರಿ
ಇನ್ನು ಮುಂದೆ ಐಟಿ ರಿಟರ್ನ್ಸ್ ಸಲ್ಲಿಸುವವರು ಕಡ್ಡಾಯವಾಗಿ ತಮ್ಮ ಮೊಬೈಲ್ ಸಂಖ್ಯೆ, ಇಮೇಲ್..
ನವದೆಹಲಿ: ಇನ್ನು ಮುಂದೆ ಐಟಿ ರಿಟರ್ನ್ಸ್ ಸಲ್ಲಿಸುವವರು ಕಡ್ಡಾಯವಾಗಿ ತಮ್ಮ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ವಿಳಾಸಗಳನ್ನು ತೆರಿಗೆ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು. ಇದಕ್ಕಾಗಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(ಸಿಬಿಡಿಟಿ)ಯು ಪ್ರಸಕ್ತ ವರ್ಷ ಐಟಿ ರಿಟರ್ನ್ಸ್ ಅರ್ಜಿಗಳಲ್ಲಿ ಹೊಸ ಕಾಲಂಗಳನ್ನು ಪರಿಚಯಿಸಿದೆ. ಈ ಕಾಲಂಗಳಲ್ಲಿ ತೆರಿಗೆದಾರರು ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಗಳನ್ನು ತುಂಬಬೇಕು. ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಸೂಕ್ತ ವಿಳಾಸ ಮತ್ತು ದೂರವಾಣಿ ಸಂಖ್ಯೆ ನೀಡುವುದರಿಂದ ತೆರಿಗೆದಾರರೊಂದಿಗೆ ನೇರ ಸಂಪರ್ಕ ಹೊಂದಲು ಸಾಧ್ಯ ಎಂದು ಸಿಬಿಡಿಟಿ ತಿಳಿಸಿದೆ.
- ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಇ-ಮೇಲ್ ವಿಳಾಸ, ಮೊಬೈಲ್ ಸಂಖ್ಯೆ ನೋಂದಾಯಿಸಿಕೊಳ್ಳಬೇಕು
- ಮೊಬೈಲ್ ಅಥವಾ ಇ-ಮೇಲ್ ಐಡಿ ಇಲ್ಲದಿದ್ದಲ್ಲಿ ಪರಿಚಿತರ ಇ-ಮೇಲ್, ಮೊಬೈಲ್ ಸಂಖ್ಯೆ ನೀಡಬಹುದು.
- ಒಂದು ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸವನ್ನು ಗರಿಷ್ಠ 10 ತೆರಿಗೆದಾರರ ಖಾತೆಯಲ್ಲಿ ಬಳಕೆ ಮಾಡಬಹುದು
- ತೆರಿಗೆದಾರರು ತಮ್ಮ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್‌ಐಡಿ ಬದಲಾಯಿಸಿದಲ್ಲಿ ಆ ಬಗ್ಗೆ ಐಟಿ ಇಲಾಖೆಗೆ ಮಾಹಿತಿ ನೀಡಬೇಕು
- ಇ-ಫೈಲಿಂಗ್ ಮಾಡುವವರು ಮಾತ್ರವಲ್ಲದೇ ಖುದ್ದಾಗಿ ರಿಟರ್ನ್ಸ್ ಸಲ್ಲಿಸುವವರಿಗೂ ಈ ನಿಯಮ ಅನ್ವಯಿಸುತ್ತದೆ
- ತುರ್ತು ಸಂದರ್ಭವಿದ್ದಾಗ ತೆರಿಗೆ ಅಧಿಕಾರಿಯೇ ನೇರವಾಗಿ ತೆರಿಗೆದಾರರೊಂದಿಗೆ ಸಂಪರ್ಕ ಸಾಧಿಸುವುದು ಇದರ ಉದ್ದೇಶ