ಪ್ರತಿಕೂಲದಲ್ಲೂ ಬೆಳವಣಿಗೆ
ಬಜೆಟ್ ಮುನ್ನಾದಿನ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಆರ್ಥಿಕ ಸಮೀಕ್ಷೆಯು ಪ್ರಸಕ್ತ ಸಾಲಿನಲ್ಲಿ ಪ್ರತಿಕೂಲ ಸನ್ನಿವೇಶದ ನಡುವೆಯೂ ಬೆಳವಣಿಗೆ ದರ ಶೇ 5ರ ಗಡಿ ದಾಟುವ ವಿಶ್ವಾಸ..
5.9ಶೇ.- ಪ್ರಸಕ್ತ ಸಾಲಿನಲ್ಲಿ ನಿರೀಕ್ಷಿತ ಆರ್ಥಿಕ ಬೆಳವಣಿಗೆ.
4.7 ಶೇ.- ಕಳೆದ ಸಾಲಿನ ಅಂದಾಜು ಬೆಳವಣಿಗೆ ದರ.
ನವದೆಹಲಿ: ಬಜೆಟ್ ಮುನ್ನಾದಿನ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಆರ್ಥಿಕ ಸಮೀಕ್ಷೆಯು ಪ್ರಸಕ್ತ ಸಾಲಿನಲ್ಲಿ ಪ್ರತಿಕೂಲ ಸನ್ನಿವೇಶದ ನಡುವೆಯೂ ಬೆಳವಣಿಗೆ ದರ ಶೇ 5ರ ಗಡಿ ದಾಟುವ ವಿಶ್ವಾಸ ವ್ಯಕ್ತಪಡಿಸಿದೆ. ಬೆಳವಣಿಗೆ ಪ್ರಮಾಣ ಶೇ. 5.4ರಿಂದ 5.9 ಇರಲಿದೆ ಎಂಬ ಅಂದಾಜು.
ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣಾ ಕಾಯ್ದೆ ಪ್ರಕಾರ 2014-15ರಲ್ಲಿ ವಿತ್ತೀಯ ಕೊರತೆ ಶೇ 3ರಷ್ಟಿರಬೇಕಿತ್ತು. ಆದರೆ ಈ ವರ್ಷ ವಿತ್ತೀಯ ಕೊರತೆ ಶೇ 4.4ರಷ್ಟಿರುವ ಸಾಧ್ಯತೆ.
ಗಣಿಗಾರಿಕೆ, ಕೈಗಾರಿಕೆ ವಲಯ, ಉತ್ಪಾದನಾ ವಲಯಗಳಲ್ಲಿ ಹಿಂದಿನ ಎರಡು ವರ್ಷಗಳಲ್ಲಿ ಗಣನೀಯ ಕುಸಿತ. ಹೀಗಾಗಿ ಆರ್ಥಿಕತೆಯೊಂದಿಗೆ ನೇರ ತಳಕು ಹಾಕಿಕೊಂಡಿರುವ ಈ ಕ್ಷೇತ್ರಗಳ ಪುನಶ್ಚೇತನಕ್ಕೆ ಕ್ರಮ ಅಗತ್ಯ.
ಈಗಿರುವ ಆದಾಯ ತೆರಿಗೆ ಕಾಯ್ದೆಗಳ ಬದಲಾಗಿ ನೇರ ತೆರಿಗೆ ನೀತಿ (ಡಿಟಿಸಿ), ಏಕರೂಪ ದರದೊಂದಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ಒತ್ತು.
ಎಲ್‌ನಿನೋ ಪ್ರಭಾವದಿಂದ ಆಹಾರ ಧಾನ್ಯಗಳ ಉತ್ಪಾದನೆ ಕುಸಿತವಾಗಿ ಬೆಲೆ ಏರಿಕೆ ಸಾಧ್ಯತೆ