ಅಮೆರಿಕದಲ್ಲಿ ವಿಶ್ವದ ಅತಿ ಎತ್ತರದ ವಸತಿ ಸಮುಚ್ಚಯ
ಬುರ್ಜ್ ಖಲೀಫಾ, ದುಬೈ
2,717
ಶಾಂಘೈ ಟವರ್ ಚೀನಾ
2,073
ಮಕ್ಕಾ ರಾಯಲ್‌ಕ್ಲಾಕ್ ಟವರ್ ಹೋಟೆಲ್, ಮೆಕ್ಕಾ
(ಸೌದಿ ಅರೇಬಿಯಾ)
1,971
ಒನ್ ವರ್ಲ್ಡ್ ಟ್ರೇಡ್ ಸೆಂಟರ್
1,776
ತೈಪಿ, ತೈವಾನ್
1,670
ತುಸು ಅಂತರದಲ್ಲಿ ನಮಗೆ ತಪ್ಪಿತು ಇನ್ನೊಂದು ಶ್ರೇಯ
ನ್ಯೂಯಾರ್ಕ್: ನಿರ್ಮಾಣ ಕ್ಷೇತ್ರದಲ್ಲಿ ಭಾರತಕ್ಕೆ ದಕ್ಕಲಿದ್ದ ಇನ್ನೊಂದು ಶ್ರೇಯ ಸ್ವಲ್ಪದರಲ್ಲಿಯೇ ಅಮೆರಿಕ ಪಾಲಾಗುತ್ತಿದೆ. ವಿಶ್ವದ ಅತಿ ಎತ್ತರದ ವಸತಿ ಸಮುಚ್ಛಯ ಎನ್ನುವ ಹಿರಿಮೆ ಮುಂಬೈನ 117 ಅಂತಸ್ತುಗಳ 'ವರ್ಲ್ಡ್ ಒನ್' ಬದಲಿಗೆ ನ್ಯೂಯಾರ್ಕ್‌ನ 'ನಾಸ್ಟರ್‌ಡಾಮ್ ಟವರ್'ಗೆ ದಕ್ಕಲಿದೆ. ಎರಡೂ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳೇ. ವಿಶ್ವದ ಅತಿ ಎತ್ತರದ ಕಟ್ಟಡವಾಗಿರುವ ದುಬೈನ ಬುರ್ಜ್ ಖಲೀಫಾದ ವಿನ್ಯಾಸಗಾರರಾದ ಅಡ್ರಿನ್ ಸ್ಮಿತ್ ಮತ್ತು ಗೊರ್ಡಾನ್ ಗಿಲ್ ಅವರೇ ನ್ಯೂಯಾರ್ಕ್ ಕಟ್ಟಡದ ವಾಸ್ತುಶಿಲ್ಪಿಗಳು.
1,475
ಅಡಿ. ನಾಸ್ಟರ್‌ಡಾಮ್ ಟವರ್ ಎತ್ತರ. ಇದು ನ್ಯೂಯಾರ್ಕ್‌ನ ಒನ್ ವರ್ಲ್ಡ್ ಟ್ರೇಡ್ ಸೆಂಟರ್ ಎತ್ತರಕ್ಕಿಂತ ಒಂದು ಅಡಿ ಕಡಿಮೆ. ಮುಂಬೈನ ವರ್ಲ್ಡ್ ಒನ್ 1,450 ಅಡಿ ಎತ್ತರದ ಕಟ್ಟಡವಾಗಲಿದೆ.
1,479
ಅಡಿ. ನಾಸ್ಟರ್‌ಡಾಮ್ ಟವರ್ ಮೇಲ್ಛಾವಣಿ ಎತ್ತರ. ಇದೂ ವಿಶ್ವದ ಅತಿ ಎತ್ತರದ ಮೇಲ್ಛಾವಣಿ ಎಂಬ ಹಿರಿಮೆಗೆ ಪಾತ್ರವಾಗಲಿದೆ.
2018
ರಲ್ಲಿ ನಾಸ್ಟರ್‌ಡಾಮ್ ಟವರ್ ಕಾಮಗಾರಿ ಪೂರ್ಣವಾಗಲಿದ್ದರೆ, ಮುಂಬೈ ಕಟ್ಟಡ 2015ರಲ್ಲಿ ಪೂರ್ಣಗೊಳ್ಳಲಿದೆ.
1.2
ದಶಲಕ್ಷ ಚದರ ಅಡಿ
ವಿಸ್ತೀರ್ಣದ ಕಟ್ಟಡ.