ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೈಗೆ ಮಿಶ್ರಾ ಅಸ್ತ್ರ

ಮೋದಿ ಸರ್ಕಾರವನ್ನು ಹಣಿಯಲು ಅವಕಾಶಕ್ಕೆ ಕಾಯುತ್ತಿರುವ ಕಾಂಗ್ರೆಸ್ ಈಗ ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ...

Srinivasa Murthy VN
Updated On : 12 Jul 2014, 2:13 am

ನವದೆಹಲಿ:  ಮೋದಿ ಸರ್ಕಾರವನ್ನು ಹಣಿಯಲು ಅವಕಾಶಕ್ಕೆ ಕಾಯುತ್ತಿರುವ ಕಾಂಗ್ರೆಸ್ ಈಗ ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ನೇಮಕ ವಿಚಾರದಲ್ಲಿ ಸಂಸತ್‌ನಲ್ಲಿ ಗಲಾಟೆ ಆರಂಭಿಸಿದೆ. ಮಿಶ್ರಾ ಅವರನ್ನು ತಮ್ಮ ತಂಡದಲ್ಲಿ ಉಳಿಸಿಕೊಳ್ಳಲು ಟ್ರಾಯ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದೇ ಅದಕ್ಕೆ ಕಾರಣ.
ಮಿಶ್ರಾ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧ್ಯಕ್ಷರಾಗಿದ್ದರು. ಈಗಿರುವ ಕಾಯ್ದೆಯಂತೆ ಟ್ರಾಯ್ ಮುಖ್ಯಸ್ಥರಾಗಿದ್ದವರು ನಿವೃತ್ತಿ ಬಳಿಕ ಎರಡು ವರ್ಷದೊಳಗೆ ಯಾವುದೇ ಸರ್ಕಾರಿ ಹುದ್ದೆ ವಹಿಸಿಕೊಳ್ಳುವಂತಿಲ್ಲ. ಈ ತೊಡಕು ನಿವಾರಿಸಿಕೊಳ್ಳಲು ಕಾಯ್ದೆಗೆ ಮುಂದಾಗಿರುವ ಸರ್ಕಾರ, ಪ್ರಸಕ್ತ ಅಧಿವೇಶನದಲ್ಲಿಯೇ ಅಂಗೀಕಾರ ಪಡೆದುಕೊಳ್ಳಲು ತೀರ್ಮಾನಿಸಿದೆ. ಒಬ್ಬ ವ್ಯಕ್ತಿಗಾಗಿ ಕಾಯ್ದೆ ತಿದ್ದುಪಡಿ ಏಕೆನ್ನುವುದು ಕಾಂಗ್ರೆಸ್ ಪ್ರಶ್ನೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಎರಡಕ್ಕೂ ಇದು ಪ್ರತಿಷ್ಠೆಯ ವಿಚಾರವಾಗಿ ಪರಿಣಸಿದೆ.
ಲೋಕಸಭೆಯಲ್ಲಿ ಟ್ರಾಯ್ ತಿದ್ದುಪಡಿ ವಿಧೇಯಕವನ್ನು ಶುಕ್ರವಾರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಂಡಿಸಿದರು. ಇದನ್ನು ವಿರೋಧಿಸಿದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್‌ಹಾಗೂ ಎಡಪಕ್ಷಗಳ ಸದಸ್ಯರು ಸರ್ಕಾರದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಟ್ರಾಯ್ ತಿದ್ದುಪಡಿ ವಿಧೇಯಕ ಈ ಬಾರಿಯ ಸಂಸತ್ ಅಧಿವೇಶನ ಮುಗಿಯುವುದರೊಳಗೇ ಲೋಕಸಭೆ ಹಾಗೂ ರಾಜ್ಯಸಭೆಗಳ ಅಂಗೀಕಾರ ಪಡೆಯುವುದು ಅಗತ್ಯ. ಆದರೆ, ಮೋದಿ ಸರ್ಕಾರಕ್ಕೆ ಇದೇ ಸಮಸ್ಯೆ.

ಕೇವಲ ಒಬ್ಬ ವ್ಯಕ್ತಿಯ ನೇಮಕಕ್ಕಾಗಿಯೇ ಟ್ರಾಯ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಸರ್ಕಾರದ ಧೋರಣೆ ಒಪ್ಪುವಂಥದ್ದಲ್ಲ. ಅದನ್ನು ನಾವು ವಿರೋಧಿಸುತ್ತೇವೆ.
-ಆಸ್ಕರ್ ಫರ್ನಾಂಡಿಸ್, ಕಾಂಗ್ರೆಸ್ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement