ಮತ್ತೆ ಗೋವಾ ದೌರ್ಜನ್ಯ ಕನ್ನಡಿಗರ ಮನೆ ಪುಡಿ ಪುಡಿ
ಬೈನಾ ಬೀಚ್ ಪ್ರದೇಶದಲ್ಲಿರುವ ಕನ್ನಡಿಗರ ಮನೆ ತೆರವು ಕಾರ್ಯಕ್ಕೆ ಗೋವಾ ಸರ್ಕಾರ...
ಬೈನಾ ಬೀಚ್ ವ್ಯಾಪ್ತಿಯಲ್ಲಿ ಬೀದಿಗೆ ಬಂದ 75 ಕನ್ನಡಿಗರ ಕುಟುಂಬ
-ಪ್ರಕಾಶ ಭಟ್
ವಾಸ್ಕೊ: ಬೈನಾ ಬೀಚ್ ಪ್ರದೇಶದಲ್ಲಿರುವ ಕನ್ನಡಿಗರ ಮನೆ ತೆರವು ಕಾರ್ಯಕ್ಕೆ ಗೋವಾ ಸರ್ಕಾರ ಮತ್ತೊಮ್ಮೆ ಕೈಹಾಕಿದೆ. ಬೀಚ್‌ನ ಸುರಕ್ಷತೆ ನೆಪ ಮಾಡಿಕೊಂಡು ಜಿಲ್ಲಾಧಿಕಾರಿ ಸಮ್ಮುಖ 75 ಮನೆಗಳನ್ನು ಶುಕ್ರವಾರ ಬೆಳಗ್ಗೆ ನೆಲಸಮ ಮಾಡಲಾಗಿದೆ. ಇದರಿಂದ ನೂರಾರು ಕನ್ನಡಿಗರು ಬೀದಿಪಾಲಾಗಿದ್ದಾರೆ.
ಈ ಮಧ್ಯೆ, ಕನ್ನಡಿಗರೊಬ್ಬರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದು, ತೆರವು ಕಾರ್ಯ ಅರ್ಧಕ್ಕೆ ನಿಂತಿದೆ. ಆದರೆ, ಬೈನಾ ಬೀಚ್‌ನ ಸೌಂದರ್ಯ ಹೆಚ್ಚಿಸುವ ಹಾಗೂ ಸುರಕ್ಷತೆ ನೆಪ ಮುಂದಿಟ್ಟುಕೊಂಡು ಸರ್ಕಾರ ತಡೆಯಾಜ್ಞೆ ತೆರವಿಗೆ ಪ್ರಯತ್ನಿಸಬಹುದು.
ಇದರಿಂದ ಇಲ್ಲಿರುವ ಸುಮಾರು 400 ಮನೆ ತೆರವಿಗೆ ಸರ್ಕಾರ ಮತ್ತೆ ಮುಂದಾಗುವ ಸಾಧ್ಯತೆ ಇದೆ. ಈಗ ತೆರವುಗೊಳಿಸಲಾಗಿರುವ 75 ಮನೆಯಲ್ಲಿ ಬಹುತೇಕರು ಎರಡು ದಶಕದಿಂದ ಅಲ್ಲೇ ವಾಸಿಸುತ್ತಿದ್ದರು.
ಕನ್ನಡಿಗರ ಪ್ರದೇಶ: ಬೈನಾ ಬೀಚ್ ಪ್ರದೇಶದಲ್ಲಿ 20ರಿಂದ 25 ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡಿಗರು ಅದರಲ್ಲೂ ಉತ್ತರ ಕರ್ನಾಟಕದ ಬಿಜಾಪುರ, ಬಾಗಲಕೋಟೆ, ಕೊಪ್ಪಳದ ಜನ ವಾಸಿಸುತ್ತಿದ್ದಾರೆ. ಹತ್ತು ವರ್ಷಗಳ (2004) ಹಿಂದೊಮ್ಮೆ ಸರ್ಕಾರ ಈ ಪ್ರದೇಶದಲ್ಲಿ 400 ಮನೆಗಳನ್ನು ಏಕಾಏಕಿ ತೆರವು ಮಾಡಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವೇಳೆ ಭಾರೀ ಪ್ರತಿಭಟನೆ ಕೂಡ ನಡೆದಿತ್ತು.
ಅಸುರಕ್ಷಿತ ಪ್ರದೇಶ: ಬಳಿಕ ಈ ಪ್ರದೇಶದಲ್ಲಿ ಮತ್ತೆ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಉತ್ತರ ಕರ್ನಾಟಕದ ಬಹುತೇಕರು ಇಲ್ಲಿ ಹಂಚಿನ ಮನೆ ನಿರ್ಮಿಸಿಕೊಂಡಿದ್ದಾರೆ. ಈ ಮನೆಗಳಿಗೆ ಮನೆ ನಂಬರ್, ವಿದ್ಯುತ್ ಸಂಪರ್ಕ, ಕುಡಿಂುವ ನೀರು, ಕುಟುಂಬದ ಸದಸ್ಯರಿಗೆ ಮತದಾನದ ಹಕ್ಕು ಸೇರಿದಂತೆ ಎಲ್ಲ ಅಗತ್ಯ ಕಾಗದ ಪತ್ರಗಳನ್ನು ಹೊಂದಿದ್ದಾರೆ.
ಆದರೆ, ಕೆಲ ದಿನಗಳ ಹಿಂದೆ ಬೈನಾ ಸಮುದ್ರ ತೀರದಂಚಿನಲ್ಲಿರುವ ಮನೆಗಳನ್ನು ಅಸುರಕ್ಷಿತ ಎಂದು ಹೇಳಿ ಖಾಲಿ ಮಾಡುವಂತೆ ಜಿಲ್ಲಾಧಿಕಾರಿ ನೋಟಿಸ್ ಜಾರಿಗೊಳಿಸಿದ್ದರು. ಆದರೆ, ಕನ್ನಡಿಗರ ಮನೆಗಳಿಗೆ ಮಾತ್ರ ಮೊದಲು ಈ ನೋಟಿಸ್ ಜಾರಿಗೊಳಿಸಲಾಗಿತ್ತು.
ಪರ್ಯಾಯ ವ್ಯವಸ್ಥೆ ಇಲ್ಲ
75 ಮನೆಯಲ್ಲಿದ್ದ ಕುಟುಂಬಗಳಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಕೊಟ್ಟಳ್ಳಿ, ಚಿಕಲಿಯ ಗೋದಾಮಿನಲ್ಲಿ ತುರ್ತು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ಇದು ಕೆಲ ದಿನಗಳಿಗಷ್ಟೇ ಸೀಮಿತ. ಈ ಹಿನ್ನೆಲೆಯಲ್ಲಿ ಬಹುತೇಕರು ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.
500 ಕ್ಕೂ ಹೆಚ್ಚು ಸಿಬ್ಬಂದಿ ಬಳಕೆ
ಮನೆ ತೆರವು ಕಾರ್ಯಾಚರಣೆಗೆ ಪ್ರತಿರೋಧದ ನಿರೀಕ್ಷೆಯಲ್ಲಿ 500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಳಸಿಕೊಳ್ಳಲಾಗಿತ್ತು. ಆದರೆ, ಮಧ್ಯಾಹ್ನ 11.30 ಕ್ಕೆ ಹೊತ್ತಿಗೆ ಕನ್ನಡಿಗ ಂುಮನಪ್ಪ ಎಂಬವರು ಕೋರ್ಟಿಂದ ತಡೆಯಾಜ್ಞೆ ತಂದಿದ್ದಾರೆ.
ಸಹಾಯಕ್ಕೆ ಬಾರದ ಸಂಘಟನೆ
ಗೋವಾ ರಾಜ್ಯದಲ್ಲಿ ಹತ್ತಾರು ಕನ್ನಡ ಸಂಘಟನೆಗಳು ಅಸ್ತಿತ್ವದಲ್ಲಿದ್ದು, ಹಲವು ಕಾಂರ್ುಕ್ರಮ ಹಮ್ಮಿಕೊಳ್ಳುತ್ತಿವೆ. ಆದರೆ ಕನ್ನಡಿಗರ ಕುಟುಂಬಗಳಿಗೆ ಕುತ್ತು ಬಂದಾಗ ಅಂಥ ಕುಟುಂಬಗಳಿಗೆ ನೆರವಾಗಲು ಯಾರೂ ಮುಂದೆ ಬಾರದಿರುವುದು ದುರದೃಷ್ಟಕರ.