ವಿದ್ಯುತ್ ಸ್ಪರ್ಶ ಮಕ್ಕಳಿಬ್ಬರ ಸಾವು
ಹೊಳಲ್ಕೆರೆ: ತೋಟದ ತಂತಿ ಬೇಲಿ ದಾಟುವಾಗ ವಿದ್ಯುತ್ ಸ್ಪರ್ಶದಿಂದ ಮಕ್ಕಳಿಬ್ಬರು ಮೃತಪಟ್ಟ ಘಟನೆ ಶನಿವಾರ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ
ತಾಲೂಕಿನ ಬೋರನಹಳ್ಳಿಯಲ್ಲಿ ನಡೆದಿದೆ. ತಿಪ್ಪೇಸ್ವಾಮಿ (7), ಪ್ರವೀಣ್ ಕುಮಾರ್ (8) ಮೃತ ಮಕ್ಕಳು. ಶಾಲೆ ಮುಗಿಸಿಕೊಂಡು ರಸ್ತೆ ಬದಲು ಅಡಕೆ ತೋಟದ ಮೂಲಕ ಹೊಲಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೆಳೆ ರಕ್ಷಣೆಗಾಗಿ ಬೇಲಿಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು.