5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ
ನವದೆಹಲಿ: ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ವಂಚಿತರಾಗಿರುವ ಬಿಜೆಪಿಯ ಐವರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಮಾಜಿ ಸಚಿವ ರಾಮ್ ನಾಯ್ಕ್‌ರನ್ನು ಉತ್ತರಪ್ರದೇಶ, ಕೇಸರಿನಾಥ್ ತ್ರಿಪಾಠಿ ಅವರನ್ನು ಪಶ್ಚಿಮ ಬಂಗಾಳ, ಓಮ್ ಪ್ರಕಾಶ್ ಕೋಹ್ಲಿ ಅವರನ್ನು ಗುಜರಾತ್ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಜತೆಗೆ ಬಲರಾಮ್‌ಜಿ ದಾಸ್ ಟಂಡನ್‌ರನ್ನು ಛತ್ತೀಸ್‌ಗಡ ಮತ್ತು ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರನ್ನು ನಾಗಾಲ್ಯಾಂಡ್‌ನ ರಾಜ್ಯಪಾಲರನ್ನಾಗಿ ನೇಮಿಸಿ ಸೋಮವಾರ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಇದರ ಜತೆಗೆ ವಿ.ಕೆ.ಮಲ್ಹೋತ್ರಾ, ಯಶವಂತ ಸಿನ್ಹಾ, ಕಲ್ಯಾಣ್ ಸಿಂಗ್ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಈಗಾಗಲೇ ಹಲವು ಹೆಸರುಗಳನ್ನು ಅಂತಿಮಪಡಿಸಿದ್ದು, ಶೀಘ್ರದಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ.