ಹುಲಿ ಸಂಖ್ಯೆ ರಾಜ್ಯದಲ್ಲೇ ಹೆಚ್ಚು
ಇಂದು ವಿಶ್ವ ವ್ಯಾಘ್ರ ದಿನ. ದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಎಷ್ಟೋ ಹುಲಿಗಳು ಬೇಟೆಗಾರರಿಗೆ ಬಲಿಯಾಗುತ್ತಿವೆ.
ಇಂದು ವಿಶ್ವ ವ್ಯಾಘ್ರ ದಿನ. ದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಎಷ್ಟೋ ಹುಲಿಗಳು ಬೇಟೆಗಾರರಿಗೆ ಬಲಿಯಾಗುತ್ತಿವೆ. ನಮ್ಮ ರಾಷ್ಟ್ರೀಯ ಪ್ರಾಣಿಯನ್ನೇ ಸಂರಕ್ಷಿಸಲು ಸಾಧ್ಯವಾಗದೆ ನಾವು ಅಸಹಾಯಕರಾಗಿದ್ದೇವೆ. ಒಂದೊಂದು ಹುಲಿಯ ಸಾವೂ ನಮ್ಮ ಮೇಲೆ ನಷ್ಟದ ಹೊರೆ ಹೊರಿಸುತ್ತಿದೆ. ವ್ಯಾಘ್ರ ಸಾಯುವುದರಿಂದ ನಮಗಾಗುವ ನಷ್ಟವೆಷ್ಟು, ಹುಲಿಗಳ ಅಧಃಪತನ ಹೇಗಾಗುತ್ತಿದೆ ಎಂಬ ಬಗ್ಗೆ ಒಂದಿಷ್ಟು ವಿವರ.
2010ರಲ್ಲಿ ಹುಲಿಗಳ ಸಂಖ್ಯೆ
ರಾಜ್ಯ ಅಂದಾಜು ಕನಿಷ್ಠ ಗರಿಷ್ಠ
ಮಿತಿ ಮಿತಿ
ಕರ್ನಾಟಕ 300 280 320
ಮಧ್ಯಪ್ರದೇಶ 257 213 301
ಉತ್ತರಾಖಂಡ 227 199 256
ಮಹಾರಾಷ್ಟ್ರ 169 155 183
ತಮಿಳುನಾಡು 163 153 173
ಅಸ್ಸಾಂ 143 113 173
ಉತ್ತರಪ್ರದೇಶ 118 113 124
ಆಂಧ್ರಪ್ರದೇಶ 72 65 79
ಕೇರಳ 71 67 75
ಪಶ್ಚಿಮ ಬಂಗಾಳ 70 64 90
ರಾಜಸ್ಥಾನ 36 35 37
ಒಡಿಶಾ 32 20 44
ಛತ್ತೀಸ್‌ಗಡ 26 24 27
ಜಾರ್ಖಂಡ್ 10 6 14
ಬಿಹಾರ 8 - -
ಮಿಜೋರಾಂ 5 - -
ಒಟ್ಟು 1,706 1,520 1,909
46 ಭಾರತದ 18 ರಾಜ್ಯಗಳಲ್ಲಿ ಒಟ್ಟು ಹುಲಿ ರಕ್ಷಿತಾರಣ್ಯಗಳು
ಸೆರೆ-ಬೇಟೆ-59 2012ರಲ್ಲಿ, 16 2011ರಲ್ಲಿ, 28 2010ರಲ್ಲಿ
35-88 ಲಕ್ಷಹುಲಿಯ ವಯಸ್ಸಿನ ಆಧಾರದಲ್ಲಿ ಹೇಳುವುದಾದರೆ, ಬೇಟೆಗಾರರು ಒಂದು ಹುಲಿಯನ್ನು ಕೊಂದಾಗ ಸಾರ್ವಜನಿಕರಿಗಾಗುವ ನಷ್ಟ
ನಮ್ಮ ಹುಲಿಗಳ ಸಂಖ್ಯೆಯು 1,520ರಿಂದ 1,909 ರೊಳಗೆ ಇರಬಹುದೆಂದು ಅಂದಾಜಿಸಲಾಗಿದೆ. ಈ ಅಂದಾಜಿನ ಆಧಾರದಲ್ಲಿ ಹೇಳುವುದಾದರೆ ದೇಶದಲ್ಲಿ ಸುಮಾರು
1,706 ಹುಲಿಗಳಿವೆ
150 ಕೋಟಿ ಕಳೆದ 5 ವರ್ಷಗಳಲ್ಲಿ ಹುಲಿಗಳ ರಕ್ಷಣೆ, ನಿರ್ವಹಣೆಗಾಗಿ ಮಾಡಿದ ವಾರ್ಷಿಕ ವೆಚ್ಚ
8.8 ಲಕ್ಷ ಪ್ರತಿ ಹುಲಿಗೆ ವರ್ಷಕ್ಕೆ ಮಾಡಲಾದ ವೆಚ್ಚ
ವ್ಯಾಘ್ರಕ್ಕೆ ಸಿಗದ ರಕ್ಷಣೆ; ಪ್ರಾಧಿಕಾರ ವ್ಯಗ್ರ!
ಕ್ರಮ ಕೈಗೊಳ್ಳಲು ಪತ್ರ ಬರೆದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ
-ಅಂಶಿ ಪ್ರಸನ್ನಕುಮಾರ್
ಕ.ಪ್ರ. ವಾರ್ತೆ ಮೈಸೂರು ಜು.28
ನಮ್ಮ ರಾಜ್ಯದ ಹುಲಿಗಳ ರಕ್ಷಣೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವೇ ಮುತುವರ್ಜಿ ವಹಿಸಬೇಕಾದ ದುರಂತ ಬಂದಿದೆ. ಇಲ್ಲಿ ಹುಲಿ-ಆನೆ ಕಾರಿಡಾರ್‌ಗಳಲ್ಲಿ ಅಕ್ರಮ ರೆಸಾರ್ಟ್‌ಗಳು ತಲೆ ಎತ್ತುತ್ತಿದ್ದರೂ ನಮ್ಮ ರಾಜ್ಯ ಸರ್ಕಾರದ ಕಣ್ಣಿಗೆ ಮಾತ್ರ ಕಾಣುತ್ತಿಲ್ಲ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬರುವ ಎಚ್.ಡಿ. ಕೋಟೆ ತಾಲೂಕು ಕಡೆಗದ್ದೆಯಲ್ಲಿ ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್ ಬಗ್ಗೆ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಸೂಚಿಸಿದೆ. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹೆಚ್ಚುವರಿ ಅರಣ್ಯ ಮಹಾನಿರ್ದೇಶಕ ಡಾ. ರಾಜೇಶ್ ಗೋಪಾಲ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದಾರೆ.
ಎನ್‌ಟಿಸಿಎ ದಕ್ಷಿಣ ವಲಯ ಪ್ರಾದೇಶಿಕ ಕಚೇರಿ ಸಹಾಯಕ ಅರಣ್ಯ ಮಹಾನಿರೀಕ್ಷಕ ಸಿ.ಎಂ. ಶಿವಕುಮಾರ್ ಅವರು ರೆಸಾರ್ಟ್‌ನ ಸ್ಥಳ ಪರಿಶೀಲಿಸಿ, ಸಲ್ಲಿಸಿರುವ ವಾಸ್ತವ ವರದಿಯ ಪ್ರತಿಯನ್ನೂ ಪತ್ರದ ಜತೆ ಲಗತ್ತಿಸಿದ್ದಾರೆ. ಇವರೆಡೂ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ.
-ಆ ರೆಸಾರ್ಟ್ ಮತ್ತು ಮದ್ಯ ಚಿಲ್ಲರೆ ಮಾರಾಟ ಅಂಗಡಿ ಕಡೆಗದ್ದೆಯ ಕಂದಾಯ ಗ್ರಾಮದಲ್ಲಿದ್ದರೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸನಿಹದಲ್ಲಿದೆ. ಇದು ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುತ್ತದೆ.
-ಕಬಿನಿ ಜಲಾಶಯಕ್ಕೆ ಸೇರುವ ಬಾವಲಿ ತೊರೆಯ ನೀರಿನ ಹರಿವಿಗೆ ಅಡ್ಡಲಾಗಿ ಬಲದಂಡೆಯಲ್ಲಿ ರೆಸಾರ್ಟ್ ನಿರ್ಮಿಸಲಾಗಿದೆ. ಜತೆಗೆ ವನ್ಯಪ್ರಾಣಿಗಳ ಮುಕ್ತ ಸಂಚಾರಕ್ಕೆ ಅಡಚಣೆಯಾಗಿದೆ. ಈ ಪ್ರದೇಶಕ್ಕೆ ಹುಲಿ, ಆನೆಗಳು ನೀರು ಕುಡಿಯಲು ಬರುವುದರಿಂದ ಮುಕ್ತ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜತೆಗೆ ಇಲ್ಲಿ ಮಾನವ- ವನ್ಯಜೀವಿಗಳ ಸಂಘರ್ಷ ಹೆಚ್ಚಬಹುದು.
-ರೆಸಾರ್ಟ್ ನಿರ್ಮಾಣ ತಡೆ ಮತ್ತು ಅಬಕಾರಿ ಪರವಾನಗಿ ರದ್ದತಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ನಿರ್ದೇಶಕರು ಅಂದಿನ ಜಿಲ್ಲಾಧಿಕಾರಿಗೆ ಪತ್ರ ಬರೆದರೂ ಲಾಭವಾಗಿಲ್ಲ.
-ಡಿ.ಬಿ. ಕುಪ್ಪೆ ಆರ್‌ಎಫ್‌ಓ ಆ ರೆಸಾರ್ಟ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಅವರು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಪಡೆದಿದ್ದಾರೆ.
- ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಬಾವಲಿ- ದಮ್ಮನಕಟ್ಟೆ ನಡುವೆ ವಾಹನ ಸಂಚಾರಕ್ಕೆ ನಿರ್ಬಂಧ ಇದ್ದರೂ ಅರಣ್ಯಾಧಿಕಾರಿಗಳು ಲಂಚ ಪಡೆದು, ಸಂಚಾರಕ್ಕೆ ಅವಕಾಶ ಕೊಡುತ್ತಾರೆ ಎಂಬ ಆರೋಪಗಳಿವೆ.
-ಈ ರೆಸಾರ್ಟ್ ಹೆದ್ದಾರಿಯಿಂದ 60-70 ಮೀ. ಹಾಗೂ ಶಾಲೆಯಿಂದ 100 ಮೀ. ಅಂತರದಲ್ಲಿದ್ದರೂ ಅಬಕಾರಿ ಪರವಾನಗಿ ಸಿಕ್ಕಿದೆ.
-ಸಂವಿಧಾನದ ಪರಿಚ್ಛೇಧ -48 (ಎ) ಪ್ರಕಾರ, ಪರಿಸರ, ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಬೇಕು. ಆದರೆ ರಾಜ್ಯ ಸರ್ಕಾರದ ಆಡಳಿತ ಯಂತ್ರ ವಿಫಲವಾಗಿದೆ.
ಹುಲಿಗಳು ಹಾಗೂ ಕಾಡು ಉಳಿಯಬೇಕು. ಇದರಲ್ಲಿ ಸ್ವಾರ್ಥ ಬೇಡ. ರಾಜ್ಯ ಸರ್ಕಾರ ಎನ್‌ಟಿಸಿಎ ಸಲಹೆಯಂತೆ ಅಕ್ರಮ ರೆಸಾರ್ಟ್‌ಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು. ಎನ್‌ಟಿಸಿಎ ಸಲಹೆಗಳನ್ನು ಜಾರಿ ಮಾಡುವುದು ರಾಜ್ಯ ಸರ್ಕಾರದ ಕರ್ತವ್ಯವೂ ಹೌದು.
-ಡಾ. ಕೆ. ಉಲ್ಲಾಸ್ ಕಾರಂತ, ಖ್ಯಾತ ವನ್ಯಜೀವಿ ತಜ್ಞ