ಸುಷ್ಮಾ, ರಾಜನಾಥ್ ಮನೆಯಲ್ಲೂ ಕಳ್ಳಗಿವಿ?
ನಿತಿನ್ ಗಡ್ಕರಿ ಬಳಿಕ ಇದೀಗ ಕೇಂದ್ರದ ಇತರ ಸಚಿವರ ನಿವಾಸದಲ್ಲಿಯೂ ಕಳ್ಳಗಿವಿ...
ನವದೆಹಲಿ: ನಿತಿನ್ ಗಡ್ಕರಿ ಬಳಿಕ ಇದೀಗ ಕೇಂದ್ರದ ಇತರ ಸಚಿವರ ನಿವಾಸದಲ್ಲಿಯೂ ಕಳ್ಳಗಿವಿ ಪತ್ತೆಯಾಗಿದೆಯೇ? ರಾಜಕೀಯ ವಲಯದಲ್ಲಿ ಇಂಥದ್ದೊಂದು ಅನುಮಾನ ವ್ಯಕ್ತವಾಗಿದೆ. ಗೃಹ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿವಾಸಗಳಲ್ಲೂ ಕಳ್ಳಗಿವಿ ಇರಿಸಲಾಗಿದೆ ಎಂಬ ವದಂತಿ ಹಬ್ಬಿದೆ.
ಆದರೆ ಈ ವಿಚಾರವನ್ನು ಬಿಜೆಪಿ ವಕ್ತಾರ ನಳಿನ್ ಕೋಹ್ಲಿ ತಳ್ಳಿ ಹಾಕಿದ್ದಾರೆ. ವರ್ಷದ ಹಿಂದೆಯೇ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಊಹಿಸಲಾಗಿತ್ತು. ಹೀಗಾಗಿ, ಪಕ್ಷ ಯಾವ ರೀತಿ ಸಿದ್ಧತೆ ನಡೆಸುತ್ತಿದೆ. ಗೆಲುವಿನ ಲೆಕ್ಕಾಚಾರಗಳೇನು ಎಂಬ ಮಾಹಿತಿ ಪಡೆವ ಪ್ರಯತ್ನ ನಡೆದಿರಬಹುದು. ಈ ಬಗ್ಗೆ ಹೆಚ್ಚಿನ ದೇಶಗಳ ನಾಯಕರು ಆಸಕ್ತಿಯಿಂದ ಭಾರತದೆಡೆಗೆ ನೋಡುತ್ತಿದ್ದರು. ಆದರೆ, ಕದ್ದಾಲಿಕೆ ಉಪಕರಣಗಳನ್ನು ಜೋಡಿಸಿ ಮಾಹಿತಿ ಪಡೆಯುವ ಕೆಲಸ ಮಾಡಿರಲು ಸಾಧ್ಯವಿಲ್ಲ ಎಂದು ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ತಿಳಿಸಿದ್ದಾರೆ.