ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸದನದಲ್ಲೂ ಮರಾಠಿ ಪುಂಡಾಟ

ಮರಾಠಿಗರ ಪುಂಡಾಟ ಲೋಕಸಭೆಯಲ್ಲೂ ಮುಂದುವರಿದಿದೆ. ಶಿವಸೇನೆ ಸದಸ್ಯರು ಲೋಕಸಭೆಯಲ್ಲಿ...

Srinivasa Murthy VN
Updated On : 31 Jul 2014, 3:00 am

-ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಮರಾಠಿಗರ ಪುಂಡಾಟ ಲೋಕಸಭೆಯಲ್ಲೂ ಮುಂದುವರಿದಿದೆ.
ಶಿವಸೇನೆ ಸದಸ್ಯರು ಲೋಕಸಭೆಯಲ್ಲಿ ಬುಧವಾರ, ಗದ್ದಲ ಎಬ್ಬಿಸಿದ್ದರಿಂದ ಕಲಾಪವನ್ನು ಒಂದು ತಾಸು ಮುಂದೂಡಲಾಯಿತು. ಮರಾಠಿಗರಿಗೆ ತಕ್ಕ ಉತ್ತರ ನೀಡಿದ ಕರ್ನಾಟಕದ ಸಂಸದರು ಬೆಳಗಾವಿ ಮತ್ತು ಸುತ್ತಮುತ್ತಲ ಸಾವಿರಾರು ಹಳ್ಳಿಗಳು ಶಾಶ್ವತವಾಗಿ ಕರ್ನಾಟಕದ ಭಾಗವಾಗಿರುತ್ತವೆ ಎಂದು ಒಕ್ಕೊರಲಿನಿಂದ ಘೋಷಿಸಿದ್ದಾರೆ. ಮಾತ್ರವಲ್ಲ ಶಿವಸೇನೆ ಸದಸ್ಯರು ಭಾಷೆ ಮತ್ತು ಗಡಿ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಕ್ಕೆ ಅವಕಾಶ ನೀಡಬಾರದು ಎಂದು ಸಭಾಧ್ಯಕ್ಷರಿಗೆ ಆಗ್ರಹಿಸಿದ್ದಾರೆ.
ಪ್ರಶ್ನೋತ್ತರ ಕಲಾಪ ಆರಂಭವಾಗತ್ತಿದ್ದಂತೆ ಶಿವಸೇನೆ ಸಂಸದರು, ಬೆಳಗಾವಿ ವಿಷಯವನ್ನು ಪ್ರಸ್ತಾಪಿಸಿ ಗದ್ದಲ ಎಬ್ಬಿಸಿದರು. ಇದಕ್ಕೆ ಕರ್ನಾಟಕದ ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದರು. ಅಷ್ಟಕ್ಕೆ ನಿಲ್ಲದ ಮಹಾರಾಷ್ಟ್ರದ ಸದಸ್ಯರು ಸದನದ ಬಾವಿಗೆ ತೆರಳಿ ಘೋಷಣೆಗಳನ್ನು ಕೂಗಿ ಪರಿಸ್ಥಿತಿ ಗೊಂದಲಗೊಳಿಸಿದ್ದರಿಂದ ಕಲಾಪವನ್ನು ಒಂದು ತಾಸು ಮುಂದೂಡಲಾಯಿತು.
ಹನ್ನೆರಡು ಗಂಟೆಗೆ ಕಲಾಪ ಪುನಾರಂಭವಾದಾಗ ಶೂನ್ಯವೇಳೆಯಲ್ಲಿ ಶಿವಸೇನೆ ಸದಸ್ಯ ಪ್ರತಾಪ್‌ರಾವ್ ಜಾಧವ್, ಕರ್ನಾಟಕದ ವಿರುದ್ಧ ಮಿಥ್ಯಾರೋಪಗಳನ್ನು ಮಾಡಿದ್ದಲ್ಲದೆ ಬೆಳಗಾವಿ ಮತ್ತು ಸುತ್ತಮುತ್ತಲ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿದರು. ಪುನಃ ಕರ್ನಾಟಕದ ಸದಸ್ಯರಿಂದ ತೀವ್ರ ಆಕ್ಷೇಪ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement