ಇನ್ನೂ ಎರಡು ಸಲ ಅವಕಾಶ
ಯುಪಿಎಸ್‌ಸಿ ಪರೀಕ್ಷೆಯ ನಿಯಮಾವಳಿಗಳಲ್ಲಿ ಗಮನಾರ್ಹ ಬದಲಾವಣೆ ಮಾಡಲಾಗಿದೆ.
6 ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ಅವಕಾಶ
7 ಸಲ ಒಬಿಸಿ ಅಭ್ಯರ್ಥಿಗಳು ಇನ್ನು ಪರೀಕ್ಷೆ ಬರೆಯಬಹುದು
ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಅಭ್ಯರ್ಥಿಗಳ ವಯೋವುತಿ ಸಡಿಲಿಕೆ
ನವದೆಹಲಿ: ಯುಪಿಎಸ್‌ಸಿ ಪರೀಕ್ಷೆಯ ನಿಯಮಾವಳಿಗಳಲ್ಲಿ ಗಮನಾರ್ಹ ಬದಲಾವಣೆ ಮಾಡಲಾಗಿದೆ. ಹೊಸ ನಿಯಮಗಳಿಂದಾಗಿ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆಯಲು ಅವಕಾಶ ಹೆಚ್ಚಳವಾಗಲಿದ್ದು, ವಯೋವುತಿಯಲ್ಲೂ ವಿನಾಯಿತಿ ಸಿಗಲಿದೆ. ಪ್ರಸಕ್ತ ವರ್ಷದಿಂದಲೇ ಹೊಸ ನಿಯಮಗಳು ಜಾರಿಗೆ ಬರಲಿವೆ.
ಅವಕಾಶ ಹೆಚ್ಚಳ: ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೂರಲು ಒಟ್ಟು ನಾಲ್ಕು ಬಾರಿ ಅವಕಾಶಗಳಿದ್ದವು. ಅದನ್ನು 6ಕ್ಕೆ ಏರಿಸಲಾಗಿದೆ. ಇತರೆ ಹಿಂದುಳಿದ ವರ್ಗದ (ಒಬಿಸಿ) ಅಭ್ಯರ್ಥಿಗಳು ಇನ್ನು 7 ಬಾರಿ ಪರೀಕ್ಷೆಗೆ ಕೂರಲು ಅವಕಾಶ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಭ್ಯರ್ಥಿಗಳಿಗೆ ಪರೀಕ್ಷೆ ಅವಕಾಶಗಳಲ್ಲಿ ಯಾವುದೇ ಮಿತಿ ಇಲ್ಲ.
ವಯೋವುತಿ ಸಡಿಲ: ಎಸ್‌ಸಿ, ಎಸ್‌ಟಿ ವಯೋವುತಿಯ ನಿಯಮಗಳಲ್ಲೂ ಬದಲಾವಣೆ ಮಾಡಲಾಗಿದೆ. ಅವರ ಗರಿಷ್ಠ ವಯೋವುತಿ 32ರಿಂದ 37ಕ್ಕೆ, ಒಬಿಸಿ ಅಭ್ಯರ್ಥಿಗಳ ವಯೋವುತಿ 32ರಿಂದ 35ಕ್ಕೆ ಏರಿಸಲಾಗಿದೆ.
ಯುಪಿಎಸ್‌ಸಿ ನಡೆಸುವ ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಹಾಗೂ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಪರೀಕ್ಷೆಗಳು ಸೇರಿದಂತೆ ಎಲ್ಲಾ ಪರೀಕ್ಷೆಗಳಿಗೂ ಹೊಸ ನಿಯಾಮಾವಳಿ ಅನ್ವಯವಾಗಲಿದೆ.
ಆ.24ರಂದು ಪೂರ್ವಭಾವಿ ಪರೀಕ್ಷೆ
ಈ ವರ್ಷದ ನಾಗರಿಕ ಸೇವಾ ಪರೀಕ್ಷೆಗಳು (ಪೂರ್ವಭಾವಿ) ಆ. 24ರಂದು ನಡೆಯಲಿದ್ದು, ಎಂದಿನಂತೆ ಈ ಬಾರಿಯೂ ಪೂರ್ವಭಾವಿ, ಮುಖ್ಯ ಹಾಗೂ ಸಂದರ್ಶನ- ಈ ಮೂರು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ. 1, 291 ಹುದ್ದೆಗಳಿಗಾಗಿ ಈ ಬಾರಿಯ ಪರೀಕ್ಷೆಗಳು ನಡೆಯಲಿದ್ದು, 26 ಹುದ್ದೆಗಳು ವಿಕಲಚೇತನರಿಗಾಗಿ ಮೀಸಲಿವೆ.
ಪಠ್ಯಕ್ರಮದಲ್ಲಿ ಬದಲಾವಣೆಯಿಲ್ಲ
ಪರೀಕ್ಷೆಗೆ ಕೂರುವ ಅವಕಾಶ, ವಯೋವುತಿಯಲ್ಲಿ ಬದಲಾವಣೆ ಮಾಡಿರುವ ಯುಪಿಎಸ್‌ಸಿ, ಪರೀಕ್ಷೆಯ ಹಂತಗಳು, ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.