ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರೈಲು ದುರಂತ ತಡೆಗೆ ಕಾರ್ಯಯೋಜನೆ

ರೈಲು ಹಳಿಗಳಲ್ಲಿನ ಲೋಪದೋಷಗಳಿಂದಾಗಿ ಸಂಭವಿಸುತ್ತಿರುವ ರೈಲು ಅಪಘಾತಗಳನ್ನು ತಪ್ಪಿಸಲು ಅಗತ್ಯ ಕಾರ್ಯಯೋಜನೆ ರೂಪಿಸುವಂತೆ..

Srinivasa Murthy VN
Updated On : 2 Jun 2014, 1:55 am

ನವದೆಹಲಿ: ರೈಲು ಹಳಿಗಳಲ್ಲಿನ ಲೋಪದೋಷಗಳಿಂದಾಗಿ ಸಂಭವಿಸುತ್ತಿರುವ ರೈಲು ಅಪಘಾತಗಳನ್ನು ತಪ್ಪಿಸಲು ಅಗತ್ಯ ಕಾರ್ಯಯೋಜನೆ ರೂಪಿಸುವಂತೆ ಕೇಂದ್ರ ರೇಲ್ವೆ ಸಚಿವ ಸದಾನಂದ ಗೌಡ ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭಾನುವಾರ ನಡೆದ ರೇಲ್ವೆ ಸುರಕ್ಷತಾ ಸಭೆಯಲ್ಲಿ ಅವರು ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಹಳಿಯಲ್ಲಿನ ದೋಷದಿಂದಾಗಿ ಇತ್ತೀಚೆಗೆ ಸಂಭವಿಸಿದ ಗೋರಖ್‌ಧಾಮ್ ರೈಲು ಅಪಘಾತದಲ್ಲಿ 26 ಪ್ರಯಾಣಿಕರು ಸಾವಿಗೀಡಾಗಿದ್ದರು. ಇಂಥ ಪ್ರಕರಣಗಳು ಮರುಕಳಿಸದಂತೆ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ರೇಲ್ವೆ ಸಚಿವರು ಸಭೆಯಲ್ಲಿ ತಾಕೀತು ಮಾಡಿದರು.
ಹಳಿ ತಪಾಸಣೆ: ಹಳಿಗಳ ಸುಸ್ಥಿತಿಯನ್ನು ಕಾಪಾಡಲು, ಲೋಪದೋಷಗಳನ್ನು ಪತ್ತೆ ಹಚ್ಚಲು ಕಾಲಕಾಲಕ್ಕೆ ಹಳಿಗಳ ಕೂಲಂಕಷ ತಪಾಸಣೆ ನಡೆಸಲು ನಿರ್ಧರಿಸಲಾಯಿತು. ಪ್ರಯಾಣಿಕರ ಸಾವುನೋವು ತಪ್ಪಿಸುವ ನಿಟ್ಟಿನಲ್ಲಿ ಯಾವುದೇ ಅವಘಡಗಳಿಗೆ ಆಸ್ಪದವಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸದಾನಂದ ಗೌಡ ಅಧಿಕಾರಿಗಳಿಗೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement