ಉ.ಪ್ರ.ದಲ್ಲಿ ನಿಲ್ಲದ ಕುಕೃತ್ಯ
ಬದೌನ್ ಹತ್ಯಾಚಾರ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದರೂ ಉತ್ತರಪ್ರದೇಶದಲ್ಲಿ ಕರಾಳ ಕೃತ್ಯಗಳ ಸರಣಿ ಮಾತ್ರ ನಿಂತಿಲ್ಲ.
ಬದೌನ್/ಲಖನೌ: ಬದೌನ್ ಹತ್ಯಾಚಾರ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದರೂ ಉತ್ತರಪ್ರದೇಶದಲ್ಲಿ ಕರಾಳ ಕೃತ್ಯಗಳ ಸರಣಿ ಮಾತ್ರ ನಿಂತಿಲ್ಲ. ಪ್ರತಿ ದಿನ ಒಂದಿಲ್ಲೊಂದು ಹೀನಕೃತ್ಯಗಳು ಬೆಳಕಿಗೆ ಬರುತ್ತಲೇ ಇವೆ. ಬದೌನ್ ಪ್ರಕರಣ ಸುದ್ದಿಯಾಗಿರುವುದರ ನಡುವೆಯೇ ಸೋಮವಾರ ಮತ್ತೊಂದು ಮಹಿಳೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ. ಮತ್ತೊಂದೆಡೆ, ಮೀರತ್‌ನಲ್ಲಿ ಅಪ್ರಾಪ್ತ ವಯಸ್ಸಿನ ಅತ್ಯಾಚಾರ ಸಂತ್ರಸ್ತೆ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ.