ಸಬ್ಸಿಡಿರಹಿತ ಸಿಲಿಂಡರ್ ರು. 23 ಇಳಿಕೆ
ಮೋದಿ ಸರ್ಕಾರ ಬಂದ ಬಳಿಕ ಡಾಲರ್ ಎದುರು ರುಪಾಯಿ ಮೌಲ್ಯ ಏರುತ್ತಿರುವುದರ ಮೊದಲ ಲಾಭ ಸಿಕ್ಕಿದೆ.
ನವದೆಹಲಿ: ಮೋದಿ ಸರ್ಕಾರ ಬಂದ ಬಳಿಕ ಡಾಲರ್ ಎದುರು ರುಪಾಯಿ ಮೌಲ್ಯ ಏರುತ್ತಿರುವುದರ ಮೊದಲ ಲಾಭ ಸಿಕ್ಕಿದೆ. ರುಪಾಯಿ ಮೌಲ್ಯ ವೃದ್ಧಿಯಾದ ಹಿನ್ನೆಲೆಯಲ್ಲಿ ತೈಲ ಆಮದು ವೆಚ್ಚ ಇಳಿದಿದೆ. ಪರಿಣಾಮ ತೈಲ ಮಾರಾಟ ಕಂಪನಿಗಳು ಸಬ್ಸಿಡಿ ರಹಿತ ಸಿಲಿಂಡರ್ಗಳ ಬೆಲೆಯನ್ನು ಪ್ರತಿ ಸಿಲಿಂಡರ್ಗೆ ಸೋಮವಾರ ರು. 23.50ರಷ್ಟು ಇಳಿಕೆ ಮಾಡಿವೆ. ಸಬ್ಸಿಡಿ ದರದಲ್ಲಿ ಗ್ರಾಹಕರು ವರ್ಷಕ್ಕೆ 12 ಸಿಲಿಂಡರ್ ಪಡೆಯಬಹುದು. ಆ ಮಿತಿ ದಾಟಿದವರು ಮಾರುಕಟ್ಟೆ ದರದಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಖರೀದಿಸಬೇಕು. ನಿಗದಿತ ಮಿತಿಗಿಂತ ಹೆಚ್ಚು ಸಿಲಿಂಡರ್ ಬಳಸುವ ಗ್ರಾಹಕರಿಗೆ ಬೆಲೆ ಇಳಿಕೆ ಸಂತಸ ತಂದಿದೆ.
14.2 ಕೆ.ಜಿ ಸಿಲಿಂಡರ್ನ ಸಬ್ಸಿಡಿ ರಹಿತ ಬೆಲೆ ದೆಹಲಿಯಲ್ಲಿ ಕಳೆದ ಫೆಬ್ರುವರಿಯಲ್ಲಿ 1241 ರುಪಾಯಿ ತಲುಪಿತ್ತು. ಮೋದಿ ಅಲೆ ಪರಿಣಾಮ ಆರ್ಥಿಕ ಪುನಶ್ಚೇತನದ ಲಕ್ಷಣಗಳು ಕಾಣಿಸುತ್ತಿದ್ದಂತೆ ಏಪ್ರಿಲ್, ಮೇ ತಿಂಗಳುಗಳಲ್ಲಿ ಬೆಲೆ ಕಡಿಮೆಯಾಗಿತ್ತು. ಈಗ ಸಬ್ಸಿಡಿರಹಿತ ಸಿಲಿಂಡರ್ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ 905 ರುಪಾಯಿ.