ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹುಬ್ಬಳ್ಳಿಯೂ ಉ.ಪ್ರಕ್ಕೆ ಕೆಟ್ಟೋಯ್ತು

ಉತ್ತರ ಪ್ರದೇಶದಲ್ಲಿ ದಿನಕ್ಕೊಂದರಂತೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು...

Srinivasa Murthy VN
Updated On : 4 Jun 2014, 12:32 pm

ಹುಬ್ಬಳ್ಳಿ: ಉತ್ತರ ಪ್ರದೇಶದಲ್ಲಿ ದಿನಕ್ಕೊಂದರಂತೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಸುದ್ದಿಯಾಗುತ್ತಿರುವ ನಡುವೆಯೇ ಹುಬ್ಬಳ್ಳಿಯಲ್ಲೂ ಇಂತಹ ಘಟನೆ ನಡೆದಿದೆ. ಸೋಮವಾರ ಮಧ್ಯರಾತ್ರಿ ಮಹಿಳೆಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ.
 ಹಳೇ ಹುಬ್ಬಳ್ಳಿ ಟಿಪ್ಪುನಗರ ನಿವಾಸಿ 24 ವರ್ಷದ ಅವಿವಾಹಿತೆ ಹಾಗೂ ಬಾಣತಿಕಟ್ಟಾದ 26 ವಯಸ್ಸಿನ ವಿಚ್ಛೇದಿತೆ ಮೇಲೆ ಆರು ಜನರು ಪೈಶಾಚಿಕವಾಗಿ ಅತ್ಯಾಚಾರ ಎಸಗಿದ್ದಾರೆ.
ಇಲ್ಲಿನ ಮರಾಠಾ ಗಲ್ಲಿಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ವಿಚ್ಛೇದಿತೆಗೆ ಇಬ್ಬರು ಮಕ್ಕಳಿದ್ದಾರೆ. ಇವರಿಬ್ಬರಿಗೆ ಪರಿಚಿತನಿದ್ದ ಅಯೋಧ್ಯಾನಗರದ ನಿವಾಸಿ ಜಹೀರ್ ಎಂಬಾತ ಸೋಮವಾರ ರಾತ್ರಿ 9.30ಕ್ಕೆ ಮೊಬೈಲ್‌ನಿಂದ ಕರೆ ಮಾಡಿ ಸ್ಟೇಷನ್ ರಸ್ತೆ ಮೂನ್‌ಲೈಟ್ ಹೋಟೆಲ್ ಬಳಿ ಕರೆದಿದ್ದಾನೆ. ಪರಿಚಿತನ ಕರೆ ನಂಬಿ ತೆರಳಿದ್ದ ಇಬ್ಬರೂ ಮಹಿಳೆಯರನ್ನು ಜಹೀರ್‌ನ ಸ್ನೇಹಿತ ಜಾಫರ್ ಹಾಗೂ ಮತ್ತಿಬ್ಬರು ಚಾಕು ತೋರಿಸಿ, ಹೆದರಿಸಿ, ಎರಡು ಬೈಕ್‌ಗಳ ಮೇಲೆ ಕರೆದೊಯ್ದಿದ್ದಾರೆ.
ಆರು ಜನರಿಂದ ಕೃತ್ಯ: ಸಮೀಪದ ರಾಯನಾಳ ಹೊರವಲಯದಲ್ಲಿ ಕರೆದೊಯ್ಯುತ್ತಿದ್ದಂತೆ ಇನ್ನಿಬ್ಬರು ಸ್ನೇಹಿತರು ಜೊತೆಗೂಡಿದ್ದಾರೆ. ಇಬ್ಬರ ಮೇಲೆ ಆರೂ ಜನ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ ಮೇಲೆ, ರಾತ್ರಿ 1 ಗಂಟೆ ಅನಂತರ ತಂದು ಬಿಟ್ಟಿದ್ದಾರೆ. ಪೊಲೀಸರು ಜಹೀರ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಅತ್ಯಾಚಾರ ನಡೆದಾಗ ಚಾನೆಲ್‌ಗಳು ಸುದ್ದಿ ಮಾಡಿದವೇ? ಅಲ್ಲಾದರೆ ಸುಮ್ಮನಿರ್ತೀರಿ, ನಮ್ಮಲ್ಲಾದರೆ ಮಾತ್ರ ಸುದ್ದಿ ಮಾಡ್ತೀರಿ.
-ಅಖಿಲೇಶ್ ಯಾದವ್, ಉತ್ತರಪ್ರದೇಶ ಸಿಎಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement