ಪರಿಷತ್ ನಾಮನಿರ್ದೇಶನ ಪಟ್ಟಿಗೆ ರಾಜ್ಯಪಾಲರಿಂದಲೇ ಆಕ್ಷೇಪ?
ಮೇಲ್ಮನೆಗೆ ನಾಮನಿರ್ದೇಶನ ಮಾಡಲು ಸಿಎಂ ಸಿದ್ದರಾಮಯ್ಯ...
ಬೆಂಗಳೂರು: ಮೇಲ್ಮನೆಗೆ ನಾಮನಿರ್ದೇಶನ ಮಾಡಲು ಸಿಎಂ ಸಿದ್ದರಾಮಯ್ಯ ಅಂತಿಮಗೊಳಿಸಿರುವ ಪಟ್ಟಿಗೆ ರಾಜ್ಯಪಾಲರಿಂದಲೇ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆ ಇದೆ. ಸಮಾಜಸೇವೆ, ಸಾಹಿತ್ಯ, ಕಲೆ, ಶಿಕ್ಷಣ ಕ್ಷೇತ್ರದವರನ್ನು ನಾಮನಿರ್ದೇಶನ ಮಾಡುವುದು ಸಂಪ್ರದಾಯ. ಆದರೆ ಪಟ್ಟಿಯಲ್ಲಿ ರಾಜಕೀಯ ವ್ಯಕ್ತಿಗಳೇ ಇದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಇಕ್ಬಾಲ್ ಅಹ್ಮದ್ ಸರಡಗಿ, ಉಗ್ರಪ್ಪ, ಐವಾನ್ ಡಿಸೋಜಾ, ಮಹ್ಮದ್ ಜಬ್ಬಾರ್, ಜಯಮಾಲಾ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಇದು ಪಕ್ಷದ ಮುಖಂಡರಿಗೆ ಹಿಂಬಾಗಿಲ ಮೂಲಕ ನೀಡಿದ ಅವಕಾಶ. ಪಟ್ಟಿಯನ್ನು ಇನ್ನೆರಡು ದಿನಗಳಲ್ಲಿ ಅಧಿಕೃತಗೊಳಿಸಿ ರಾಜ್ಯ ಪಾಲರಿಗೆ ಕಳುಹಿಸಿಕೊಡಲು ಸಿದ್ದರಾಮಯ್ಯ ನಿರ್ಧರಿಸಿದ್ದು, ಅಧಿಕಾರಾವಧಿಯ ಕೊನೆಯಲ್ಲಿರುವ ಹಂಸರಾಜ್ ಭಾರದ್ವಾಜ್ ಈ ಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಬಹುದು ಎನ್ನಲಾಗುತ್ತಿದೆ.