ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಒಂದೇ ದಿನ ಸಾವನ್ನು ಅಪ್ಪಿದ 10 ಮಂದಿ

ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ 10 ಮಂದಿ 24 ಗಂಟೆ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Srinivasa Murthy VN
Updated On : 15 Jun 2014, 1:17 am

ಬೆಂಗಳೂರು: ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ 10 ಮಂದಿ 24 ಗಂಟೆ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯ, ಖಿನ್ನತೆ, ಪ್ರೇಮ ವೈಫಲ್ಯ, ಕೌಟುಂಬಿಕ ಕಲಹ  ಆತ್ಮಹತ್ಯೆಗೆ ಕಾರಣ. ಇಂಗ್ಲಿಷ್ ಬಾರದ್ದಕ್ಕೆ ಓಕಳಿಪುರದ ವಿದ್ಯಾರ್ಥಿನಿ ಕೋಕಿಲಾ, ಹೊಟ್ಟೆನೋವು ತಾಳಲಾರದೆ ಶಾಂತಿಪುರದ ಬಾಲಕಿ ರೇವತಿ, ಪ್ರೇಮ ವೈಫಲ್ಯದಿಂದ ಶಿವಾಜಿನಗರದ ಯುವಕ ರಾಜು, ಕೌಟುಂಬಿಕ ಕಲಹದಿಂದ ಭುವನೇಶ್ವರಿ ನಗರದ ಸುನಂದಾ, ತಲೆನೋವು ತಾಳಲಾರದೆ ಲಕ್ಷ್ಮೀನಾರಾಯಣಪುರದ ವಿಜಯಲಕ್ಷ್ಮಿ ಸಾವಿಗೆ ಶರಣಾಗಿದ್ದಾರೆ. ರಾಮಚಂದ್ರಪುರದಲ್ಲಿ ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದ ರತ್ನ, ದಯಾನಂದ ನಗರದಲ್ಲಿ ಹೊಟ್ಟೆನೋವಿನಿಂದ ಬಳಲುತ್ತಿದ್ದ ರಾಜಮಾಣಿಕ್ಯಂ, ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಮಾನಸಿಕ ಖಿನ್ನತೆಯಿಂದ ವಿಜ್ಞಾನಿ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೇಡವೆಂದರೂ ಗಂಡ ಹೊರಗೆ ಹೋಗಿದ್ದಕ್ಕೆ ಕಾಶಿ ವಿಶ್ವನಾಥ ಬಡಾವಣೆಯಲ್ಲಿ ರೇಷ್ಮಾ, ಕೌಟುಂಬಿಕ ಕಲಹದಿಂದ ಕಲಾಸಿಪಾಳ್ಯದಲ್ಲಿ ತರಕಾರಿ ವ್ಯಾಪಾರಿ ಸಂಪಂಗಿ ಸಾವಿಗೆ ಶರಣಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement