ಕಯ್ಯಾರ ಕಿಂಞಣ್ಣ ರೈ ಆಸ್ಪತ್ರೆಗೆ
ಗಡಿನಾಡ ಹೋರಾಟಗಾರ ಸಾಹಿತಿ ಶತಾಯುಷಿ ಕಯ್ಯಾರ ಕಿಂಞಣ್ಣ ರೈ ಅವರು ಉಸಿರಾಟ..
ಮಂಗಳೂರು: ಗಡಿನಾಡ ಹೋರಾಟಗಾರ ಸಾಹಿತಿ ಶತಾಯುಷಿ ಕಯ್ಯಾರ ಕಿಂಞಣ್ಣ ರೈ ಅವರು ಉಸಿರಾಟ ತೊಂದರೆಯಿಂದ ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ವಾಸಕೋಶ ಸೋಂಕು ಪರಿಣಾಮ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವಲ್ಪ ಕಫ ಆಗಿದೆ, ಆರೋಗ್ಯ ಸ್ಥಿರವಾಗಿದೆ. ಯಾರೂ ಭಯಪಡುವ ಅಗತ್ಯ ಇಲ್ಲ ಎಂದು ಮಗ ಪ್ರದೀಪ್ ರೈ ತಿಳಿಸಿದ್ದಾರೆ. ಜೂ.8ರಂದು ಶತಾಯುಷಿ ಸಂಭ್ರಮ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭ ಪಂಪ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.