ಹೊಯ್ಕಳೋ ಸರದಿ ವೈಕೋದು
ತಮಿಳುನಾಡಿನಿಂದ ಕಾವೇರಿ ಕ್ಯಾತೆ ಮುಂದುವರಿದಿದೆ. ಮೊನ್ನೆ ಮೊನ್ನೆಯಷ್ಟೇ ಪ್ರಧಾನಿ ಮೋದಿ ಜತೆ ಮುಖ್ಯಮಂತ್ರಿ ಜಯಲಲಿತಾ ಚರ್ಜಿಸಿದ್ದರು. ಇದೀಗ ಎಂಡಿಎಂಕೆ ಪತ್ರ ಬರೆದಿದೆ.
ಚೆನ್ನೈ: ತಮಿಳುನಾಡಿನಿಂದ ಕಾವೇರಿ ಕ್ಯಾತೆ ಮುಂದುವರಿದಿದೆ. ಮೊನ್ನೆ ಮೊನ್ನೆಯಷ್ಟೇ ಪ್ರಧಾನಿ ಮೋದಿ ಜತೆ ಮುಖ್ಯಮಂತ್ರಿ ಜಯಲಲಿತಾ ಚರ್ಜಿಸಿದ್ದರು. ಇದೀಗ ಎಂಡಿಎಂಕೆ ಪತ್ರ ಬರೆದಿದೆ.
ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪಿಸಬೇಕು ಎಂದು ಬಿಜೆಪಿ ಮೈತ್ರಿ ಪಕ್ಷವಾದ ಎಂಡಿಎಂಕೆ ಅಧ್ಯಕ್ಷ ವೈಕೋ ಪತ್ರ ಬರೆದಿದ್ದು, ಇದು ಕೇಂದ್ರದ ಆದ್ಯ ಕರ್ತವ್ಯ ಎಂದೂ ಉಲ್ಲೇಖಿಸಿದ್ದಾರೆ. ಮಂಡಳಿಯನ್ನು ವಿರೋಧಿಸುವ ಕರ್ನಾಟಕದ ವಾದ ನ್ಯಾಯಸಮ್ಮತ ಅಲ್ಲ ಎಂದು ವೈಕೋ ಹೇಳಿದ್ದಾರೆ. ಮಂಡಳಿ ಸ್ಥಾಪನೆ ಬಹುಮುಖ್ಯ ಎಂದು ನ್ಯಾಯಾಧಿಕರಣ ಅಂತಿಮ ತೀರ್ಪಲ್ಲಿ ಉಲ್ಲೇಖಿಸಿರುವುದನ್ನು ಜಯಲಲಿತಾ ಸಹ ಶುಕ್ರವಾರ ಪ್ರಧಾನಿಗೆ ಪತ್ರ ಬರೆದು ಮತ್ತೆ ನೆನಪು ಮಾಡಿದ್ದರು.
ಸಕಾಲಕ್ಕೆ ನೀರಿಲ್ಲ: ಕಾವೇರಿ ಪಾತ್ರದ ರೈತರು ಕಳೆದ ಎರಡು ವರ್ಷಗಳಿಂದ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಕರ್ನಾಟಕ ಸರ್ಕಾರ ಕಾವೇರಿಯಿಂದ ಸಕಾಲದಲ್ಲಿ ನೀರು ಬಿಡದ ಕಾರಣ ಕೃಷಿಗೆ ತೀವ್ರ ಅನಾನುಕೂಲವಾಗಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ತಮಿಳುನಾಡಿನ ಸಾರ್ವಜನಿಕ ಹಿತದೃಷ್ಟಿ ಹಾಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅತ್ಯಂತ ಅವಶ್ಯವಾಗಿ ಬೇಕಿರುವ ಮಂಡಳಿಯನ್ನು ರಚಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.