ಆಸ್ಕರ್ ಬಾಚಿದ ಗ್ರಾವಿಟಿ!
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಐತಿಹಾಸಿಕ '12 ಇಯರ್ಸ್ ಎ ಸ್ಲೇವ್' ಚಿತ್ರದ ಪಾಲಾಗಿದೆ.
ಟ್ವೆಲ್ವ್ ಇಯರ್ ಇನ್ ಸ್ಲೇವ್ ಅತ್ಯುತ್ತಮ ಚಿತ್ರ
ಲಾಸ್‌ಏಂಜಲೀಸ್: ಈ ಬಾರಿಯ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಐತಿಹಾಸಿಕ '12 ಇಯರ್ಸ್ ಎ ಸ್ಲೇವ್' ಚಿತ್ರದ ಪಾಲಾಗಿದೆ. ಲಾಸ್‌ಏಂಜಲೀಸ್‌ನಲ್ಲಿ ಭಾನುವಾರ ರಾತ್ರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ವಿಶೇಷವೆಂದರೆ, ಆಲ್ಫಾನ್ಸೋ ಕಾರನ್ ನಿರ್ದೇಶನದ 'ಗ್ರ್ಯಾವಿಟಿ' ಚಿತ್ರವು ಬರೋಬ್ಬರಿ 7 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಚಿತ್ರವು 10 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಶ್ರೇಷ್ಠ ನಿರ್ದೇಶಕ ಸೇರಿದಂತೆ 7 ಪ್ರಶಸ್ತಿಗಳು ಗ್ರ್ಯಾವಿಟಿ ಮಡಿಲು ಸೇರಿದವು.
ಸ್ಲೇವ್ ಅತ್ಯುತ್ತಮ ಚಿತ್ರ: ಸೋಲೋಮನ್ ನಾರ್ತ್‌ಅಪ್ ಎಂಬವರ ನೈಜ ಕಥೆಯನ್ನು ಆಧರಿಸಿ ನಿರ್ಮಿಸಿದ '12 ಇಯರ್ಸ್ ಎ ಸೇವ್' ಚಿತ್ರವು ಟಾಪ್ ಆಸ್ಕರ್ ಅನ್ನು ತನ್ನದಾಗಿಸಿಕೊಂಡಿತು.
ಅತ್ಯುತ್ತಮ ಚಿತ್ರ 12 ಇಯರ್ಸ್ ಎ ಸ್ಲೇವ್
ಶ್ರೇಷ್ಠ ನಾಯಕ ನಟ ಮ್ಯಾಥ್ಯೂ ಮ್ಯಾಕ್‌ಕೊನಾಗೆ (ದಲ್ಲಾಸ್ ಬೈಯರ್ಸ್ ಕ್ಲಬ್)
ಶ್ರೇಷ್ಠ ನಟಿ ಕೇಟ್ ಬ್ಲಾಂಚೆಟ್ (ಬ್ಲೂಜಾಸ್ಮೀನ್)
ಶ್ರೇಷ್ಠ ಪೋಷಕ ನಟಜೇರಡ್ ಲೆಟೋ (ದಲ್ಲಾಸ್ ಬೈಯರ್ಸ್ ಕ್ಲಬ್)
ಶ್ರೇಷ್ಠ ಪೋಷಕ ನಟಿಲ್ಯುಪಿಟಾ ನ್ಯಾಂಗೋ (12 ಇಯರ್ಸ್ ಎ ಸ್ಲೇವ್)