ಹಿಂದುಳಿದ ಪ್ರದೇಶ ಅನುದಾನ ನಿಧಿ ದುಪ್ಪಟ್ಟು
-ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಕೇಂದ್ರ ಸರ್ಕಾರವು ಹಿಂದುಳಿದ ಪ್ರದೇಶ ಅನುದಾನ ನಿಧಿಯನ್ನು ದುಪ್ಪಟ್ಟುಗೊಳಿಸಿದೆ. ಪ್ರಸಕ್ತ ಸಾಲಿನಲ್ಲಿ 2900 ಕೋಟಿ ಇದ್ದ ನಿಧಿ 2014-15ನೇ ಸಾಲಿಗೆ 5900 ಕೋಟಿಗೆ ಏರಿಸಿದೆ. ಕರ್ನಾಟಕದ ಗುಲ್ಬರ್ಗ, ಯಾದಗಿರಿ, ರಾಯಚೂರು, ಬೀದರ್, ಕೊಪ್ಪಳ ಮತ್ತು ಬಳ್ಳಾರಿ ಸೇರಿದಂತೆ ದೇಶದ 272 ಜಿಲ್ಲೆಗಳ ಮೂಲಭೂತ ಸೌಲಭ್ಯ ವೃದ್ಧಿಗಾಗಿ ಈ ನಿಧಿಯನ್ನು ಕೇಂದ್ರ ನೀಡುತ್ತದೆ. ಪ್ರಸಕ್ತ ಸಾಲಿನಲ್ಲಿ ಈಗಾಗಲೇ 2689 ಕೋಟಿ ಬಿಡುಗಡೆ ಮಾಡಿದೆ. ಪ್ರಾದೇಶಿಕ ಅಸಮತೋಲನ ನಿವಾರಿಸುವ ಸಲುವಾಗಿ ಈ ಅನುದಾನವನ್ನು ಕೇಂದ್ರ ಒದಗಿಸುತ್ತದೆ.