ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸತ್ತ ಮಂಗನ ನೆನಪಲ್ಲಿ ಹನುಮಾನ್ ದೇಗುಲ

Srinivasa Murthy VN
Updated On : 10 Mar 2014, 12:53 pm

ದೇವರಹಿಪ್ಪರಗಿ: 'ಆರಾಧ್ಯ ದೈವ' ಎನಿಸಿಕೊಂಡವರ ದೇಗುಲ ನಿರ್ಮಿಸಿ ಗೌರವ ಸಲ್ಲಿಸುವುದು ವಾಡಿಕೆ. ಆದರೆ, ಮರದಿಂದ ಮರಕ್ಕೆ ಜಿಗಿಯುವಾಗ ಆಯತಪ್ಪಿ ಬಿದ್ದು ಮೃತಪಟ್ಟ ಮಂಗನಿಗೂ ದೇಗುಲ ನಿರ್ಮಿಸಿ ದೇವರಹಿಪ್ಪರಗಿ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ.
ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರಹಿಪ್ಪರಗಿ ಗ್ರಾಮದ ಜನತೆ ಆಕಸ್ಮಿಕವಾಗಿ ಸಾವನ್ನಪ್ಪಿದ ಮಂಗನ ಸವಿನೆನಪಿಗಾಗಿ ತಾವೇ ಹಣ ಸಂಗ್ರಹಿಸಿ 2 ಲಕ್ಷ ವೆಚ್ಚದಲ್ಲಿ ಸುಂದರವಾದ ಹನುಮಾನ ಮಂದಿರ ನಿರ್ಮಿಸಿದ್ದಾರೆ. 2013, ಆ.14ರಂದು ಪಟ್ಟಣದ ತಾಳಿಕೋಟೆ ಮಾರ್ಗದಲ್ಲಿ ಬಜಾರ್ ಹತ್ತಿರ ಮಂಗವೊಂದು ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿವಾಗ ಆಯತಪ್ಪಿ ಬಸ್‌ನ ಮೇಲೆ ಬಿದ್ದು ಪ್ರಾಣ ಕಳೆದುಕೊಂಡಿತು. ಇದನ್ನು ಗಮನಿಸಿದ ಗ್ರಾಮಸ್ಥರು ರಸ್ತೆ ಪಕ್ಕದಲ್ಲಿಯೇ ಬಿದ್ದಿದ್ದ ಮಂಗನಿಗೆ ಬಟ್ಟೆ ತೊಡಿಸಿ ಮನುಷ್ಯನಂತೆ ಸಿದ್ಧಗೊಳಿಸಿ ಶವಸಂಸ್ಕಾರ ಮಾಡಿದ್ದರು.
ಅದೇ ಭಕ್ತರು ಸೇರಿಕೊಂಡು 2 ಲಕ್ಷ ವೆಚ್ಚದಲ್ಲಿ ಭವ್ಯ ಹನುಮಾನ ಮಂದಿರ ನಿರ್ಮಿಸಿ ಹನುಮಾನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement