ಎಲ್ಲಕೂ ಮೋದಿ ಉತ್ತರ
ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಎನ್ಡಿಟಿವಿ ಮತ್ತು ಹನ್ಸ ರಿಸರ್ಚ್..
ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಎನ್ಡಿಟಿವಿ ಮತ್ತು ಹನ್ಸ ರಿಸರ್ಚ್ ಗ್ರೂಪ್ನ ಸಮೀಕ್ಷೆ ಹೇಳಿದೆ.
ಉತ್ತರ ಪ್ರದೇಶದಲ್ಲಿ ಸರಿಯಾಗಿ ಅರ್ಧದಷ್ಟು ಸ್ಥಾನಗಳನ್ನು ಪಡೆಯಲಿರುವ ಬಿಜೆಪಿ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್ಗಳಲ್ಲಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
543 ಸ್ಥಾನಗಳಲ್ಲಿ ಎನ್ಡಿಎ ಮೈತ್ರಿಕೂಟ 229 ಸ್ಥಾನಗಳಲ್ಲಿ ಗೆಲ್ಲಲಿದೆ. ಇದರಲ್ಲಿ ಬಿಜೆಪಿಯೇ 195 ಸ್ಥಾನಗಳಲ್ಲಿ ಗೆಲವು ಕಾಣಲಿದೆ. ಯುಪಿಎ ಮೈತ್ರಿಕೂಟ ಕೇವಲ 129 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ. ಪರ್ಯಾಯ ರಂಗಕ್ಕೆ 55 ಸ್ಥಾನ ಸಿಕ್ಕಿದರೆ, ಇತರೆ ಪಕ್ಷಗಳು 130 ಸ್ಥಾನಗಳಲ್ಲಿ ಗೆಲ್ಲಲಿವೆ.
ಉತ್ತರವೇ ಎತ್ತರ: 80 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಪ್ರದೇಶವೇ ನಿರ್ಣಾಯಕ. ಇಲ್ಲಿ ಹೆಚ್ಚು ಸ್ಥಾನ ಗೆಲ್ಲುವವರಿಗೆ ಕೇಂದ್ರದಲ್ಲಿ ಸರ್ಕಾರ ರಚನೆಯಲ್ಲಿ ಪಾಲ್ಗೊಂಡೇ ಪಾಲ್ಗೊಳ್ಳುತ್ತಾರೆ ಎಂಬ ನಂಬಿಕೆ ಕೂಡ ಇದೆ. ಹೀಗಾಗಿ ಅತೀ ಮುಖ್ಯ ಎನ್ನಿಸಿಕೊಂಡಿರುವ ಈ ರಾಜ್ಯದಲ್ಲಿ ಬಿಜೆಪಿ ಭಾರಿ ಬಿರುಗಾಳಿಯನ್ನೇ ಎಬ್ಬಿಸಲಿದೆ ಎಂದು ಸಮೀಕ್ಷೆ ಹೇಳಿದೆ.
ದೇಶವ್ಯಾಪಿ ಬಲಾಬಲ
229 ಬಿಜೆಪಿ
129 ಕಾಂಗ್ರೆಸ್
185 ಇತರೆ
ಉತ್ತರ ಪ್ರದೇಶ
40 (30) ಬಿಜೆಪಿ
15 (-5) ಬಿಎಸ್ಪಿ
13 (-10) ಎಸ್ಪಿ
12 (-14) ಕಾಂಗ್ರೆಸ್