ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪಿಯುಸೀಲಿ ರಾಜ್ಯ ಫಸ್ಟ್ ಕ್ಲಾಸ್

ದ್ವಿತೀಯ ಪಿಯುಸಿ ಪರೀಕ್ಷಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ 'ಫಸ್ಟ್ ಕ್ಲಾಸ್‌' ಫಲಿತಾಂಶ ಪ್ರಕಟವಾಗಿದೆ. ಆದರೆ ಹೊಸ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಕೊಂಚ ಇಳಿಕೆಯಾಗಿದ್ದು..

Srinivasa Murthy VN
Updated On : 9 May 2014, 1:23 am

ಕಳೆದ ಸಾಲಿಗಿಂತ ಶೇ.1.11 ರಷ್ಟು ಫಲಿತಾಂಶ ಏರಿಕೆ
ಶೇ. 66.81 ಬಾಲಕಿಯರು ಉತ್ತೀರ್ಣ
ಶೇ.61.51 ಗ್ರಾಮೀಣರು ಉತ್ತೀರ್ಣ
ಶೇ.59.31 ವಿದ್ಯಾರ್ಥಿಗಳು ಉನ್ನತ, ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ


ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು 5 ಮೊದಲ ಸ್ಥಾನ
ಬೀದರ್, ರಾಯಚೂರು, ಗುಲ್ಬರ್ಗ, ಚಿತ್ರದುರ್ಗ, ಕೊಪ್ಪಳಕ್ಕೆ ಕೊನೆಯಿಂದ ಮೊದಲ ಸ್ಥಾನ
ತಾಲೂಕು, ಜಿಲ್ಲಾ ಮಟ್ಟದಲ್ಲಿ ಮೊದಲ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ನೀಡಿಕೆ ಬಗ್ಗೆ ಸ್ಪಷ್ಟತೆಯಿಲ್ಲ

ದ್ವಿತೀಯ ಪಿಯುಸಿ ಪರೀಕ್ಷಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ 'ಫಸ್ಟ್ ಕ್ಲಾಸ್‌' ಫಲಿತಾಂಶ ಪ್ರಕಟವಾಗಿದೆ. ಆದರೆ ಹೊಸ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಕೊಂಚ ಇಳಿಕೆಯಾಗಿದ್ದು, ಯಾದಗಿರಿಯೊಂದನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಫಲಿತಾಂಶ ಗಣನೀಯವಾಗಿ ಕುಸಿತ ಕಂಡಿದೆ. ರಾಜ್ಯದ ಒಟ್ಟಾರೆ ಫಲಿತಾಂಶ ಹಿಂದಿನ ಸಾಲಿಗಿಂತ ಶೇ.1.11ರಷ್ಟು ಏರಿಕೆಯಾಗಿ ಶೇ.60.47ಕ್ಕೆ ತಲುಪಿದೆ. ಇದೇ ಮೊದಲ ಬಾರಿಗೆ ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶ ಶೇ.60ರ ಗಡಿ ದಾಟಿದಂತಾಗಿದೆ.

ರಮ್ಯಶ್ರೀ: ಬೆಂಗಳೂರಿನ ವಿಜಯಾ ಪಿಯು ಕಾಲೇಜಿನ ವಿದ್ಯಾರ್ಥಿ. ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ, ಮೂಲ ಗಣಿತ, ಸಂಸ್ಕೃತದಲ್ಲಿ 100, ಇಂಗ್ಲಿಷ್‌ನಲ್ಲಿ 96.  ದೆಹಲಿಯಲ್ಲಿ ಬೆಮೆಲ್‌ನಲ್ಲಿ ಎಂಜಿನಿಯರ್ ಆಗಿರುವ ಅನಂತಕುಮಾರ್ ಕೆ.ಎಲ್ ಹಾಗೂ ಗೌರಿ ಎಂ.ಟಿ. ದಂಪತಿ ಪುತ್ರಿ. ಚಾರ್ಟಡ್ ಅಕೌಂಟಂಟ್ ಆಗುವ ಬಯಕೆ.

ಪ್ರಿಯತೋಷ್: ತುಮಕೂರು ಸರ್ವೋದಯ ಕಾಲೇಜಿನ ವಿದ್ಯಾರ್ಥಿ. ಕನ್ನಡದಲ್ಲಿ 99, ಇಂಗ್ಲಿಷ್ 97, ಭೌತಶಾಸ್ತ್ರ 99, ರಸಾಯನಶಾಸ್ತ್ರದಲ್ಲಿ 100, ಗಣಿತದಲ್ಲಿ 100 ಹಾಗೂ ಜೀವಶಾಸ್ತ್ರದಲ್ಲಿ 99 ಅಂಕ. ಕೊರಟಗೆರೆ ಕಂಬದಹಳ್ಳಿಯವರಾದ, ಪುರವರದಲ್ಲಿ ಇತಿಹಾಸ ಉಪನ್ಯಾಸಕ ಲೋಕೇಶ್-ಕವಿತಾ ದಂಪತಿ ಪುತ್ರ. ಎಂಬಿಬಿಎಸ್ ಓದುವ ಬಯಕೆ.

ವಸುಧಾ: ಮೈಸೂರಿನ ಸದ್ವಿದ್ಯಾ ಸಂಯುಕ್ತ ಪಿಯು ಕಾಲೇಜಿನ ವಿದ್ಯಾರ್ಥಿನಿ. ಮೈಸೂರು ವೈದ್ಯ ಕಾಲೇಜಿನ ಪ್ರಾಧ್ಯಾಪಕ ಡಾ.ದಿನೇಶ್, ಲತಾ ದಿನೇಶ್ ದಂಪತಿ ಪುತ್ರಿ. ಇಂಗ್ಲಿಷ್ 95, ಸಂಸ್ಕೃತ 100, ಭೌತಶಾಸ್ತ್ರ 99, ರಸಾಯನಶಾಸ್ತ್ರ 100, ಗಣಿತ 100 ಮತ್ತು ಜೀವಶಾಸ್ತ್ರದಲ್ಲಿ 100 ಅಂಕ. ಎಂಬಿಬಿಎಸ್ ಓದುವ ಬಯಕೆ.

ವೆಂಕಟೇಶ : ಮಂಗಳೂರು ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿ. ಭೌತಶಾಸ್ತ್ರ 99, ಎಲೆಕ್ಟ್ರಾನಿಕ್ಸ್, ಗಣಿತ, ರಸಾಯನಶಾಸ್ತ್ರದಲ್ಲಿ ತಲಾ 100, ಸಂಸ್ಕೃತ 98, ಇಂಗ್ಲಿಷ್‌ನಲ್ಲಿ 97 ಅಂಕ. ಪದವಿನಂಗಡಿಯ ಉದ್ಯಮಿ ಜಿ.ಸುರೇಶ್ ಕಾಮತ್ ಮತ್ತು ಸುಧಾ ಕಾಮತ್ ಪುತ್ರ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.96 ಅಂಕ ಪಡೆದಿದ್ದ. ಎಂಜಿನಿಯರಿಂಗ್ ಕಲಿಯುವ ಆಸೆ.

ನವೀನ್: ರಾಯಚೂರಿನ ಇನ್ಫೆಂಟ್ ಜೀಸಸ್ ಕಾಲೇಜು ವಿದ್ಯಾರ್ಥಿ.  ತಲಮಾರಿ ಗ್ರಾಮದ ಕಡುಬಡತನದ ನವೀನ್ ತಂದೆ ವೆಂಕಟೇಶ್ ಹಾಗೂ ತಾಯಿ ದಿವ್ಯಾ ಇಬ್ಬರೂ ಅನಕ್ಷರಸ್ಥರು. ಕೂಲಿ ಮಾಡಿ ಜೀವನ ಸಾಗಿಸುವವರು. ಕನ್ನಡ ಮಾಧ್ಯಮದಲ್ಲೇ ಪಿಯುಸಿ ಮುಗಿಸಿದ್ದಾನೆ. ಹುಟ್ಟೂರಲ್ಲೇ ಇಂಗ್ಲಿಷ್ ಶಿಕ್ಷಕನಾಗಿ ಸೇವೆ ಸಲ್ಲಿಸುವ ಅಭಿಲಾಷೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement