ಗೆಲ್ಲೋದು ಮೋದಿನೇ
ಆಂಗ್ಲ ಪತ್ರಿಕೆ ಇಂಡಿಯಾ ಟುಡೆ - ಸಿಸೆರೋ ಅಸೋಸಿಯೇಟ್ಸ್ ನಡೆಸಿರುವ ಕ್ಷೇತ್ರ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಎಲ್ಲ...
ವಾರಾಣಸಿ ಕ್ಷೇತ್ರದ ಕುತೂಹಲ ಬಿಚ್ಚಿಟ್ಟ ಇಂಡಿಯಾ ಟುಡೆ ಸಮೀಕ್ಷೆ
ವಾರಾಣಸಿ: ವಾರಾಣಸಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರೇ ಕಿಂಗ್...!
ಆಂಗ್ಲ ಪತ್ರಿಕೆ ಇಂಡಿಯಾ ಟುಡೆ - ಸಿಸೆರೋ ಅಸೋಸಿಯೇಟ್ಸ್ ನಡೆಸಿರುವ ಕ್ಷೇತ್ರ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಎಲ್ಲರಿಗಿಂತ ತುಂಬಾನೇ ಮುಂದಿದ್ದಾರೆ.
ಏ.30 ರಿಂದ ಮೇ 3 ರವರೆಗೆ ವಾರಾಣಸಿಯ ಉದ್ದಗಲಕ್ಕೂ ಸಂಚಾರ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಎಲ್ಲ ವರ್ಗದ, ವಯೋವಾನದ, ಜಾತಿಯವರ ನೆಚ್ಚಿನ ನಾಯಕರಾಗಿ ಮೋದಿ ಅವರು ಹೊರಹೊಮ್ಮಿದ್ದಾರೆ. ಹೀಗಾಗಿ, ಈ ಸಮೀಕ್ಷೆ ಪ್ರಕಾರ, ವಾರಾಣಸಿ ನರೇಂದ್ರ ಮೋದಿಗೆ ವರ ತರಲಿದೆ ಎಂದೇ ಭವಿಷ್ಯ ನುಡಿಯಲಾಗುತ್ತಿದೆ. ಸೋಮವಾರ ಈ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.
ಧರ್ಮಾಧಾರಿತ ಮತ
ಜಾತಿ ಕಾಂಗ್ರೆಸ್ ಬಿಜೆಪಿ ಬಿಎಸ್ಪಿ ಎಎಪಿ ಎಸ್ಪಿ ಇತರೆ
ಬ್ರಾಹ್ಮಣ 9 77 4 6 4 0
ರಜಪೂತ 5 80 2 3 7 3
ವೈಶ್ಯ 2 81 2 7 2 5
ಭುಮಿಹರ್ 17 67 4 7 2 3
ಇತರೆ ಮೇಲ್ಜಾತಿ 7 76 2 7 0 8
ಯಾದವ 7 41 3 7 40 2
ಕುಮ್ರಿ-ಕೊಹಿ 8 65 8 13 4 2
ಇತರೆ ಒಬಿಸಿ 8 78 2 2 4 6
ಜಾಟವ 8 33 44 9 3 3
ಇತರೆ ದಲಿತ 6 53 26 4 2 9
ಮುಸ್ಲಿಂ 40 17 2 21 15 5
ವಾರಾಣಸಿಯಲ್ಲಿ ರಾಹುಲ್ ಸ್ಪರ್ಧಿಸಬೇಕಿತ್ತೇ?
ಹೌದು ಶೇ.33
ಇಲ್ಲ ಶೇ.45
ಏನನ್ನೂ ಹೇಳಲ್ಲ 22
ಪ್ರಧಾನಿ ಯಾರಾಗಬೇಕು?
ಮೋದಿ ಶೇ.57
ಮಾಯಾವತಿ ಶೇ.7
ಮುಲಾಯಂ ಶೇ.9
ರಾಹುಲ್ಶೇ.12
ಕೇಜ್ರಿವಾಲ್ ಶೇ.10
ಇತರೆ ಶೇ.3