ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಮ್ಮನೆಂಬ ಅಮೃತ ಪಥ

ದಿನವೂ ಹೊಸತನ, ನವೋಲ್ಲಾಸ ಚೈತನ್ಯವನ್ನ್ನು ಅಮ್ಮಂದಿರ ಕಣ್ಣಗಳು..

Srinivasa Murthy VN
Updated On : 11 May 2014, 3:01 am

-ವಿನುತಾ ಹೆಗಡೆ
ಇರುವೆಯು ಗುಲ್‌ಮೊಹರ್ ಹೂವಿನ ಎಸಳನ್ನ್ನು ಹೊತ್ತೊಯ್ಯುವಾಗ ಆ ಸಂದರ್ಭದಲ್ಲಿ ಬರೀ ಗುಲ್ ಮೊಹರ್ ಎಲೆಯೊಂದೇ ಸುಂದರವಾಗಿ ಚಲಿಸುವಂತೆ ಕಾಣುತ್ತದೆ. ಅದೇ ಚಲಿಸುವ ಜೀವನ ಅಂದುಕೊಳ್ಳುವ ಮೊಗ್ಗಿನ ಮನಸ್ಸು ಅದರ ಹಿಂದಿನ ಇರುವೆಯ ಶ್ರಮ ಹಾಗೂ ಜೀವನದ ಜಂಜಾಟವನ್ನ್ನೂ ಅರಿಯಬೇಕಿದೆ.
ದಿನವೂ ಹೊಸತನ, ನವೋಲ್ಲಾಸ ಚೈತನ್ಯವನ್ನ್ನು ಅಮ್ಮಂದಿರ ಕಣ್ಣಗಳು ನೀಡುತ್ತವೆ. ಒಮ್ಮೆ ಆಕೆಯ ಮುಖ ದರ್ಶನವಾದರೆ ಸಾಕು, ಇಡೀ ಜಗವೇ ಹೊಸತಾಗಿ ಕಾಣುತ್ತದೆ. ಎಷ್ಟೊಂದು ಮಧುರವಾದ ಕಲ್ಪನೆಯ ವಾಸ್ತವ ಅಲ್ಲವೇ? ಮೊಗ್ಗಿನ ಮನಸ್ಸಿನ ಜೀವನ, ಬದುಕು ಕಟ್ಟಿಕೊಡಲು ಕೊನೆಯವರೆಗೆ ಹೋರಾಡುವವಳು, ಅವರನ್ನು ಅರ್ಥೈಸಿಕೊಂಡು ಸಮಾಧಾನಿಸುವವಳು ಅಮ್ಮ.  ಬದುಕ ಕಟ್ಟಿಕೊಳ್ಳಲು ಬೇಕಿರುವುದು ಬರೀ ಆತ್ಮವಿಶ್ವಾಸ, ಅದೊಂದಿದ್ದರೆ ಏನ್ನು ಬೇಕಾದರೂ ಸಾಧಿಸಬಹುದು. ಅದು ಯುವಜನತೆ ಅರ್ಥಮಾಡಿಕೊಂಡರೆ ಬದುಕಿಗೊಂದು ಹೊಸ ಅರ್ಥವೇ ಸಿಗುತ್ತದೆ. ಆ ಆತ್ಮವಿಶ್ವಾಸವನ್ನು ನಮ್ಮಲ್ಲಿ ತುಂಬಿ, ಜೀವದ ಉತ್ತುಂಗಕ್ಕೆ ್ನಕರೆದೊಯ್ದ ಅಮ್ಮ ಎಂಬ ಎರಡಕ್ಷರದ ಪ್ರೀತಿ ತುಂಬಿದ ಆತ್ಮವಿಶ್ವಾಸದ ಸ್ನೇಹ. ನಾವು ಬೆಳೆದಿದ್ದೇವೆ, ಪ್ರಬುದ್ಧರಾಗಿದ್ದೇವೆ ಎಂದು ಕೊಂಡು ಬದುಕಿನ ಕೆಲ ಕ್ಷಣಗಳನ್ನ್ನು ಕಳಚಿಕೊಂಡು ಎತ್ತಲೋ ಓಡಬೇಕೆಂಬ ಹಂಬಲದ ನಿರ್ಧಾರ ಎಷ್ಟು ಸರಿ ಎಂದು ಯೋಚನೆಗೆ ಹತ್ತಿಕೊಂಡಾಗಲೇ, ಪರೀಕ್ಷೆಯಲ್ಲಿ ಉತ್ತೀರ್ಣವಾಗಿಲ್ಲ ಎಂಬ ಕಾರಣಕ್ಕಾಗಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಅಮ್ಮನ ಮುಖವನ್ನು ನೆಪಿಸಿಕೊಳ್ಳಿ. ಅಮ್ಮನ ಯಾತನೆಯಲ್ಲಿ ಹುಟ್ಟಿದ ಕ್ಷಣ, ಅಮ್ಮನಿಗೆ ಕುಡಿಯಲು ನೀರಿರದಿದ್ದರೂ, ಹಿಂಡಿ ನಿಮಗಿಕ್ಕಿದ ಎದೆ ಹಾಲು.

ಒಮ್ಮೆ ಹಿಂತಿರುಗಿ ಅಮ್ಮ ಎಂದು ನೆನಪು ಮಾಡಿಕೊಂಡರೆ ಬದುಕಿಗೆ ಹೊಸ ಹುಟ್ಟು ಕಟ್ಟಿ, ನಮ್ಮ ಸಾಧನೆ ಎಲ್ಲಿಗೆ ಸಾಗಬೇಕು ಎಂಬುದು ಅರ್ಥವಾಗುತ್ತದೆ. ಕೇವಲ ಆಕರ್ಷಣೆಯೊಂದೇ ಜೀವನವಾಗಬಾರದು. ನಿರಾಸೆಯೊಂದೇ ಬದುಕಿನ ಕೊನೆಯಾಗಬಾಗದು. ಕ್ಷಣಿಕ ಸುಖದ ಆಸೆಯೇ ಬದುಕಿನ ಮುಳ್ಳಾಗಬಾರದು. ಜೀವನ ಪರ್ಯಂತ ಅಮ್ಮನ ಋಣ ತೀರಿಸುವ ಸುಖದ ಮಾರ್ಗದಲ್ಲಿಯೇ ನಡೆಯುವ ಸಚ್ಚಾರಿತ್ರ್ಯವಂತ ಮಕ್ಕಳಾಗಲು ಪ್ರಯತ್ನಿಸಬೇಕು. ಇದು ಸಾಧ್ಯ ಎನಿಸಿಕೊಳ್ಳುವುದು ಹದಿಹರಯದ ಬಿಸಿಯನ್ನು,್ನ ಆಕರ್ಷಣೆ, ಕ್ಷಣಿಕ ಸುಖ ಹಾಗೂ ಬಾಂಧವ್ಯವನ್ನು, ನಿರಾಸೆ ಭೂತವನ್ನು ಕಳಚುವ ಮನಸ್ಸು ಬದಿಗಿಟ್ಟಾಗ. ಯಾವುದೋ ಮೋಹಕ್ಕೆ ಒಳಗಾಗಿ ಅವರ ಬಿಸಿ ಅಪ್ಪುಗೆಯಲ್ಲಿ ಮೈ ಮರೆಯುವ ಹಂಬಲ ನಿಮಗಾದರೆ, ಒಮ್ಮೆ ಅಮ್ಮನ ಪ್ರೀತಿ ತುಂಬಿದ ಕೈಗಳಿಂದ ಅಪ್ಪಿಕೊಂಡಿದ್ದನ್ನ್ನು ನೆನಪಿಸಿಕೊಳ್ಳಿ ಅಥವಾ ಅಪ್ಪನ ಕಣ್ಣಲ್ಲಿ ಮಿಂಚಿ ಮಾಯವಾಗುವ ಆ ಅತ್ಯದ್ಭುತ ಪ್ರೀತಿಯ ನೋಟವನ್ನ್ನು ನೆನಪಿಸಿಕೊಳ್ಳಿ. ಅಮ್ಮನ ಮನದ ಜೀವನದ ಪ್ರತಿ ಹೆಜ್ಜೆಯ ಗುರುತೂ ಅಲ್ಲಿ ನೆರಳಾಗಿ ನಿಮ್ಮನ್ನ್ನು ಕಾಯುತ್ತಿರುತ್ತದೆ. ಆಕೆ ನೀವಿಲ್ಲದೆ ಹೇಗೆ ಬದುಕಬಲ್ಲಳು ಎಂಬ ಯೋಚನೆಗೆ ಅವಕಾಶ ನೀಡಿ. ಅಮ್ಮ ನಮ್ಮನ್ನು ಸದಾ ಕಾಯುತ್ತಾಳೆ. ಅವಳ ಜೀವ ಒತ್ತೆ ಇಟ್ಟು ಸಾಕಿ, ಸಲಹಿದ್ದಾಳೆ. ಆಕೆ ನಮಗಾಗಿ ತನ್ನ್ನ ಜೀವನವನ್ನೇ ಪಣಕ್ಕಿಟ್ಟು ಹಿಂಬಾಲಿಸಿದ್ದಾಳೆ. ಅವಳ ಮಾತನ್ನ್ನೊಮ್ಮೆ ಕೇಳೋಣ. ಆಗ ಬದುಕಿನ ಪಯಣ ಎತ್ತ ಸಾಗಬೇಕು? ಈ ಆಕರ್ಷಣೆಯ ಪ್ರೀತಿಯ ಮಾಯೆಗೋ? ನಿರಾಸೆ ಭಾವನೆಯ ಸಾವಿಗೊ? ಅಮ್ಮನ ಅಮೃತ ಸಮಾನ ಮಡಿಲಿಗೋ ಎನ್ನ್ನುವುದು.
ನೆನಪಿಸಿಕೊಳ್ಳಿ ಅಮ್ಮನ ಆ ಪ್ರೀತಿಯ ಮಾತು ಇಂದು ಬಿದ್ದ ಮಳೆಯ ಹನಿಯಲ್ಲೂ ಜಿನುಗುತ್ತಾ ನಮ್ಮ ನೋಡಿ ನಕ್ಕಂತೆ ಪ್ರೀತಿಯ ಸ್ಪರ್ಶವೆಲ್ಲ ಮೀರಿನಿಂತ ಸುಮಧುರ ಅನುಭವ. ಆಗ ನಮ್ಮನ್ನ್ನು ತಟ್ಟಿ ಅಮ್ಮನತ್ತಲೇ ಎತ್ತಿ ಎಸೆಯುತ್ತದೆ. ನಾವಿಡುವ ಪ್ರತಿ ಹೆಜ್ಜೆಗೂ ನಿನ್ನ ಮೃದು ಮಾತಿನ ಧ್ವನಿಯೇ ನಮ್ಮನ್ನ್ನು ಆವರಿಸಿ, ಮಾರ್ಗ ಸೂಚಿಸುತ್ತಲೇ ಮುಂದೊಂದು ದಿನ ಉತ್ತುಂಗದ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ. ಅಮ್ಮನ ಋಣ ತೀರಿಸಲು ಈ ಜನ್ಮದಲ್ಲಲ್ಲ, ಇನ್ನ್ನೊಂದು ಜನ್ಮ ಎತ್ತಿ ಬಂದರೂ ಸಾಧ್ಯವಾಗದು.
ಕಲ್ಪನೆಯ ಚಿತ್ತಾರದ ಬಾಂಧವ್ಯಕ್ಕೆ ಬೆಸುಗೆ ಬೆಸೆದು ಮುರಿಯದ ಹಾಗೆ ನಮ್ಮ ಜೀವನವನ್ನ್ನು ಕಟ್ಟಿಕೊಡುವ ಅಮ್ಮ ಮಕ್ಕಳಿಗಾಗಿ ಎಷ್ಟೊಂದು ಮಾಡಿದರೂ ಅದನ್ನ್ನು ಎಂದಿಗೂ ತಾನು ಮಾಡಿದ್ದು ಎಂದು ಹೇಳಿಕೊಳ್ಳುತ್ತಿಲ್ಲ. ಅದು ಅಮ್ಮಂದಿರ ದೊಡ್ಡಗುಣ. ಸಾಗುವ ಮೌನದ ಪಯಣಕ್ಕೆ ಬೆಳಕ ಚೆಲ್ಲಿ, ಮಾತೆಂಬ ಬಣ್ಣಗಳ ಹಚ್ಚಿ ಮನಸ್ಸನ್ನ್ನು ಬಿಚ್ಚಿ ಜೀವನದ ಸುಂದರ ದಾರಿಯನ್ನ್ನು ತೋರಿಸಿ, ಮುನ್ನೆಡೆಸುವ ಮಾರ್ಗದರ್ಶಿಗಳ ಅವಶ್ಯಕತೆಯೇ ಅಮ್ಮ. ಕತ್ತಲು ಎಂಬುದು ಬೆಳಕಿನ ಹಿಂದಿನ ಜೀವಂತ ಜೀವ. ಅದನ್ನ್ನು ಮೀರಿಸಿ ಮುನ್ನ್ನೆಡೆದು ಬೆಳಕಿನ ಪಯಣಕ್ಕೆ ನಾವು ಸಾಗಬೇಕು. ಅದಾಗಲೇ ಜೀವನ ಎಂಬುದು ಸುಂದರವಾಗಲು ಸಾಧ್ಯ ಎಂಬುದನ್ನ್ನು ತೋರಿಸಿಕೊಡುವುದು ಅಮ್ಮಂದಿರ ಕರ್ತವ್ಯ.
ಆಕರ್ಷಣೆಯ ಕೊಳಚೆ ಮಾರ್ಗವನ್ನ್ನು ಸಾಗಿ ಮನೆಯವರನ್ನೆಲ್ಲ ತೊರೆದು, ಅಮ್ಮನಾಗುವ ಸಮಯಕ್ಕೆ ಅಮ್ಮಾ... ಅಮ್ಮಾ ಎಂದು ಅಲವತ್ತರೆ ಅಮ್ಮ ಸಿಕ್ಕಾಳೆಯೇ? ಒಮ್ಮೆ ಯೋಚಿಸಿ, ನಿಮ್ಮ ಅಮ್ಮಂದಿರ ಬಗ್ಗೆ ಅವರು ನಿಮಗೆ ಮಾಡಿದ ತ್ಯಾಗದ ಬಗ್ಗೆ, ನೀಡಿದ ಅಮೃತ ಸಮಾನ ಪ್ರೀತಿಯ ಬಗ್ಗೆ, ಅಕ್ಕರೆಯ ಬೆಚ್ಚಗಿನ ಆ ಮಡಿಲ ಬಗ್ಗೆ. ಅಮ್ಮನಿಲ್ಲದೇ... ಅಮ್ಮನನ್ನ್ನು ತೊರೆದು ಸಾಗಿದವರ ಮನದಲ್ಲಿ ಮೂಡುವ, ಸುಡು ಉಸಿರಿನ ಬಗ್ಗೆ. ಅಮ್ಮ ಇರುವಾಗಲೇ ಅಮ್ಮನನ್ನ್ನು ತೊರೆದು ಅನಾಥರಾಗದಿರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement