ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪಿಎಂಒ ಟ್ವೀಟರ್ ಕಿತಾಪತಿ

ಹಾಲಿ ಇರುವ ಪ್ರಧಾನಿ ಕಚೇರಿಯ ಟ್ವೀಟರ್ ಖಾತೆಯನ್ನು ಬದಲಾಯಿಸಿದ್ದು ವಿವಾದಕ್ಕೆ ಕಾರಣವಾಗಿದೆ.

Srinivasa Murthy VN
Updated On : 21 May 2014, 1:16 am

ನವದೆಹಲಿ: ಮುಂದಿನ ಸೋಮವಾರದಿಂದ ನರೇಂದ್ರ ಮೋದಿ ಪ್ರಧಾನಿ ಕಚೇರಿಗೆ ಬರಲಿದ್ದಾರೆ. ಅದಕ್ಕೂ ಮುನ್ನ ಹಾಲಿ ಇರುವ ಪ್ರಧಾನಿ ಕಚೇರಿಯ ಟ್ವೀಟರ್ ಖಾತೆಯನ್ನು ಬದಲಾಯಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್‌ನಲ್ಲಿ ಅಪಿಎಂಒಇಂಡಿಯಾ  ಎಂಬ ಖಾತೆ ಹೊಂದಿದ್ದರು. ಆದರೆ ಮಂಗಳವಾರ ಸಂಜೆ ನಡೆದ ಬೆಳವಣಿಯಲ್ಲಿ ಪಿಎಂಒದಲ್ಲಿನ ಕೆಲ ಅಧಿಕಾರಿಗಳು ಅದನ್ನು ಅಪಿಎಂಒ ಇಂಡಿಯಾ ಆರ್ಕೈವ್ ಎಂದು ಬದಲಾಯಿಸಿದ್ದಾರೆ. ಈ ಮೂಲಕ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮಾಡಿದ ಎಲ್ಲ ಟ್ವೀಟ್‌ಗಳನ್ನು ಆಕೈವ್ (ಸಂಗ್ರಹ) ಆಗಿ ಬದಲಾಯಿಸಲಾಗಿದೆ. ಈ ಬಗ್ಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅದಕ್ಕೆ ಟ್ವೀಟ್ ಮಾಡಿರುವ ಬಿಜೆಪಿ ಅಧಿಕಾರ ಬದಲಾಗುತ್ತಿರುವ ಸಂದರ್ಭದಲ್ಲಿ ಅಧಿಕಾರದಿಂದ ಹೊರಹೋಗುತ್ತಿರುವ ಪ್ರಧಾನಿಯವರ ತಂಡ ಟ್ವಿಟರ್ ಖಾತೆಯನ್ನು ಬದಲು ಮಾಡಿದೆ. ಇದು ನಿಜಕ್ಕೂ ಅನೈತಿಕ ಮತ್ತು ಕಾನೂನು ವಿರೋಧಿ. ಅಧಿಕಾರ ಹಸ್ತಾಂತಕ ಮಾಡುತ್ತಿರುವ ವೇಳೆ ರಾಷ್ಟ್ರೀಯ ಡಿಜಿಟಲ್ ಆಸ್ತಿಯಾಗಿರುವ ಟ್ವೀಟ್‌ಗಳನ್ನು ರಕ್ಷಿಸಬಹುದಿತ್ತು. ಡಿಜಿಟಲ್ ಖಾತೆಗಳನ್ನು ಹಸ್ತಾಂತರ ಮಾಡುವಾಗ ಮನಮೋಹನ ಸಿಂಗ್‌ರವರ ತಂಡ ಹಳೇ ಮಾಹಿತಿಯನ್ನು ದಾಖಲೆಯನ್ನಾಗಿ ಮಾಡಿದ್ದು ತಪ್ಪು ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಭಾರಿ ವಿರೋಧ: ಪ್ರಧಾನಿ ಕಚೇರಿ ಸಿಬ್ಬಂದಿಯ ಕ್ರಮಕ್ಕೆ ಟ್ವಿಟರ್‌ನಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಮೋದಿಗೆ ಆರ್ಕೈವ್ ಹ್ಯಾಂಡಲ್‌ನ ಅಗತ್ಯ ಬೀಳುವುದಿಲ್ಲವೇ ಎಂದು ಒಬ್ಬರು ಪ್ರಶ್ನಿಸಿದ್ದಾರೆ. 'ನಮೋ ನಿವೃತ್ತಿ ಹೊಂದಿದಾಗ, ಅವರ ಖಾತೆಯನ್ನು ಅಪಿಎಂಒಇಂಡಿಯಾಆರ್ಕೈವ್-ಆರ್ಕೈವ್ ಎಂದು ಬದಲಾಯಿಸುತ್ತಾರಾ?' ಎಂದು ಮುರಳಿ ಟ್ವಿಟರ್‌ನಲ್ಲೇ ವ್ಯಂಗ್ಯವಾಡಿದ್ದಾರೆ!

3 ಸಾವಿರ ಫಾಲೋವರ್ಸ್
ಹೊಸತಾಗಿ ಸೃಷ್ಟಿಸಿದ ಅ ಪಿಎಂಒ ಇಂಡಿಯಾ 3 ಸಾವಿರ ಪಾಲೋವರ್ಸ್ ಇದ್ದಾರೆ. ಬಿಜೆಪಿ ನೀಡಿದ ಮಾಹಿತಿ ಪ್ರಕಾರ ಪಿಎಂಒದ ಈ ಹಿಂದಿನ ಟ್ವಿಟರ್ ಖಾತೆಗೆ 1.4 ದಶಲಕ್ಷ ಫಾಲೋವರ್ಸ್ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement