ಅಧಿವೇಶನ ಜೂ.23ರಿಂದ
ಜೂನ್ 23ರಿಂದ ಜುಲೈ 30ರ ವರೆಗೆ ವಿಧಾನಮಂಡಲದ ಮಹಾ ಅಧಿವೇಶನ ನಡೆಸುವುದಕ್ಕೆ ಬುಧವಾರ ನಡೆದ ರಾಜ್ಯ ಸಚಿವ..
ಬೆಂಗಳೂರು: ಜೂನ್ 23ರಿಂದ ಜುಲೈ 30ರ ವರೆಗೆ ವಿಧಾನಮಂಡಲದ ಮಹಾ ಅಧಿವೇಶನ ನಡೆಸುವುದಕ್ಕೆ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜತೆಗೆ ಕೆರೆ ಪ್ರಾಧಿಕಾರ ರಚನೆ ವಿಧೇಯಕ ಮಂಡನೆಗೂ ಒಪ್ಪಿಗೆ ನೀಡಲಾಗಿದೆ. ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ವಿಷಯ ತಿಳಿಸಿದ್ದಾರೆ.