ಮುಂಬೈ ನ ತಾಜ್ ಹೋಟೆಲ್ ಮೇಲಿನ ಉಗ್ರರ ದಾಳಿ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಮುಂಬೈ ದಾಳಿ: ೬೮೮ ಮಿಲಿಯನ್ ಡಾಲರ್ ಪರಿಹಾರ ಕೇಳಿದ ಸಂತ್ರಸ್ತರು

೨೦೦೮ ರಲ್ಲಿ ಮುಂಬೈ ನ ತಾಜ್ ಹೋಟೆಲ್ ದಾಳಿಯಲ್ಲಿ ಹಾನಿಗೊಳಗಾದ ೯ ಅಮೇರಿಕನ್ ಮತ್ತು ಇಸ್ರೇಲಿ ಸಂತ್ರಸ್ತರು,...

ವಾಶಿಂಗ್ಟನ್: ೨೦೦೮ ರಲ್ಲಿ ಮುಂಬೈ ನ ತಾಜ್ ಹೋಟೆಲ್ ದಾಳಿಯಲ್ಲಿ ಹಾನಿಗೊಳಗಾದ ೯ ಅಮೇರಿಕನ್ ಮತ್ತು ಇಸ್ರೇಲಿ ಸಂತ್ರಸ್ತರು, ನಿಷೇಧಿತ ಜೆ ಯು ಡಿ ಮುಖಸ್ಥ ಹಪೀಜ್ ಅವರನ್ನು ಒಳಗೊಂಡಂತೆ ದಾಳಿ ನಡೆಸಿದ ಪಾಕಿಸ್ತಾನಿ ಉಗ್ರಗಾಮಿ ಸಂಘಟನೆಗಳಿಂದ ೬೮೮ ಮಿಲಿಯನ್ ಯು ಎಸ್ ಡಾಲರ್ ಗಳ ಪರಿಹಾರ ಕೇಳಿದ್ದರೆ.

ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಅಕ್ಟೋಬರ್ ೩೦ ಮತ್ತು ೩೧ ರಂದು ನಡೆದ ಮರು ವಿಚಾರಣೆಯಲ್ಲಿ, ಜಮಾತ್ ಉದ್ ದಾವಾ(ಜೆ ಯು ಡಿ) / ಲಷ್ಕರ್ ಎ ತೈಬಾ (ಎಲ್ ಇ ಟಿ) ಉಗ್ರ ಸಂಸ್ಥೆಗಳ ವಿರುದ್ಧ ಗೈರುಹಾಜರಿ ತೀರ್ಪು ನೀಡುವಂತೆ ವಾದ ಮಾಡಿದ್ದಾರೆ.

೨೬/೧೧ ಎಲ್ ಇ ಟಿ ದಾಳಿಯಲ್ಲಿ ಮೃತಗೊಂಡ ಹಾಗೂ ಗಾಯಗೊಂಡವರ ಕುಟುಂಬ ಸದಸ್ಯರು ಈ ಪರಿಹಾರಕ್ಕೆ ಬೇಡಿಕೆಯಿಟ್ಟಿದ್ದಾರೆ. ಪಾಕಿಸ್ತಾನಿ ಗುಪ್ತಚರ ಇಲಾಖೆ ಐ ಎಸ್ ಐ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯಕ್ಕೆ ಇವರು ಬೇಡಿಕೆಯಿಟ್ಟಿದ್ದರು. ಆದರೆ ಅಮೇರಿಕಾ ಸರ್ಕಾರ ಪಾಕಿಸ್ತಾನಕ್ಕೆ ರಾಜತಾಂತ್ರಿಕ ವಿನಾಯಿತಿ ಇದೆ ಎಂದು ವಾದ ಮಾಡಿದ ನಂತರ ನ್ಯಾಯಾಲಯ ಈ ಮನವಿಯನ್ನು ತಳ್ಳಿ ಹಾಕಿತ್ತು.

ಮುಂಬೈನ ವಿವಿಧ ಪ್ರದೇಶಗಳಲ್ಲಿ ೧೦ ಎಲ್ ಇ ಟಿ ಉಗ್ರಗಾಮಿಗಳು ನಡೆಸಿದ್ದ  ಈ ದಾಳಿಯಲ್ಲಿ ಸುಮಾರು ೧೬೬ ಜನ ಮೃತಪಟ್ಟು ೩೦೦ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ವಾಯು ಗುಣಮಟ್ಟದಲ್ಲಿ ಕೊಂಚ ಸುಧಾರಣೆ: 307ಕ್ಕೆ ಇಳಿದ AQI; ಆದರೂ 'ಅತ್ಯಂತ ಕಳಪೆ' ಸ್ಥಿತಿ ಮುಂದುವರಿಕೆ, ಧೂಳು ನಿಯಂತ್ರಣಕ್ಕೆ ರಸ್ತೆಗಳಲ್ಲಿ ನೀರು ಸಿಂಪಡಣೆ..!

ದೀಪಾವಳಿಯನ್ನು 'ಖುಷಿಯೋಂ ಕಾ ಈದ್' ಎಂದ ಖರ್ಗೆ: 'ಈದ್' ಎಂದರೆ ಹಬ್ಬವಷ್ಟೇ, ಧರ್ಮವಲ್ಲ: ತಂದೆ ಹೇಳಿಕೆ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

Sting operation ಸುಳಿಯಲ್ಲಿ 'ಕೈ' ಪಾಳಯ: ಡ್ಯಾಮೇಜ್ ಕಂಟ್ರೋಲ್‌ಗೆ ಮುಂದು; ದಿಢೀರ್ ಸಿದ್ದು ಭೇಟಿಯಾದ ಡಿಕೆಶಿ, ಒಂದೂವರೆ ಗಂಟೆ ರಹಸ್ಯ ಮಾತುಕತೆ..!

BDA ನಿವೇಶನ ಮಾಲೀಕರಿಗೆ ಸಿಹಿಸುದ್ದಿ: ಮಾರ್ಗಸೂಚಿ ದರದಲ್ಲಿ ಶೇ.50 ರಿಯಾಯಿತಿ ಘೋಷಣೆ; 1 ಲಕ್ಷ ಮಂದಿಗೆ ಲಾಭ..!

UP ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂ ಮತದಾರರು ಕಣ್ಮರೆ; ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದೇನೆ: CM ಯೋಗಿ ಆದಿತ್ಯನಾಥ್