ದೇವೇಂದ್ರ ಫಡ್ನವಿಸ್ ಮತ್ತು ತಂಡ 
ಪ್ರಧಾನ ಸುದ್ದಿ

'ಮಹಾ' ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಸಾಬೀತು

ಮಹಾರಾಷ್ಟ್ರದಲ್ಲಿ ಅಲ್ಪಮತದ ಸರ್ಕಾರ ರಚಿಸಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಬುಧವಾರ ಮಹಾ...

ಮುಂಬೈ: ಮಹಾರಾಷ್ಟ್ರದಲ್ಲಿ ಅಲ್ಪಮತದ ಸರ್ಕಾರ ರಚಿಸಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಬುಧವಾರ ಮಹಾ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

13 ದಿನಗಳ ಹಿಂದೆ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಬಿಜೆಪಿ ಸರ್ಕಾರ ಇಂದು ಬಹುಮತ ಸಾಬೀತುಪಡಿಸಿದೆ. ಫಡ್ನವಿಸ್ ಅವರು ಧ್ವನಿಮತದ ಮೂಲಕ ವಿಶ್ವಾಸಮತ ಸಾಬೀತು ಪಡಿಸಿದರು ಎನ್ನಲಾಗಿದೆ.

ಒಟ್ಟು 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 121 ಸದಸ್ಯರನ್ನು ಹೊಂದಿದ್ದು, ಸರಳ ಬಹುಮತಕ್ಕೆ 148 ಶಾಸಕರ ಬೆಂಬಲ ಬೇಕಾಗಿತ್ತು. ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿದ್ದ ಎನ್ಸಿಪಿ ವಿಶ್ವಾಸಮತಕ್ಕೆ ಗೈರು ಆಗುವ ಮೂಲಕ ಬಿಜೆಪಿ ಸರ್ಕಾರಕ್ಕೆ ಪರೋಕ್ಷ ಬೆಂಬಲ ನೀಡಿದೆ.

ಇದಕ್ಕು ಮುನ್ನ ಬಿಜೆಪಿಯ ಹಿರಿಯ ನಾಯಕ ಹರಿಭಾವು ಬಾಗ್ಡೆ ಅವರು ಮಹಾರಾಷ್ಟ್ರ ವಿಧಾಸಭೆಯ ನೂತನ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಡವರಿಗೆ 5 ಲಕ್ಷ ಉಚಿತ ಸೈಟ್, ರೈತ ಚೈತನ್ಯ: 100 ದಿನಗಳ ಆಡಳಿತ ಪೂರೈಸಿದ ಡಿ ಕೆ ಶಿವಕುಮಾರ್ ಸರ್ಕಾರದಿಂದ ಬಂಪರ್ ಗಿಫ್ಟ್ ಘೋಷಣೆ; Video

‘ಭಾರತ ನಡೆಯುವುದು ಸಂವಿಧಾನದಿಂದಲೇ ಹೊರತು ಬಹಿಷ್ಕಾರದಿಂದಲ್ಲ’: ಹಿಂದು-ಮುಸ್ಲಿಂ ಒಗ್ಗಟ್ಟಿಗೆ ಅಠಾವಳೆ ಕರೆ, ಗರ್ಬಾ ಉತ್ಸವದಲ್ಲಿ ಮುಸ್ಲಿಮರ ನಿಷೇಧಕ್ಕೆ ವಿರೋಧ..!

ಬರದನಾಡು ಚಿತ್ರದುರ್ಗಕ್ಕೆ ಐತಿಹಾಸಿಕ ಕ್ಷಣ; ಗೊನೂರು ಕೆರೆ ತಲುಪಿದ ಭದ್ರಾ ಮೇಲ್ದಂಡೆ ಯೋಜನೆಯ ನೀರು, Video

ರೇಣುಕಾಸ್ವಾಮಿ ಪ್ರಕರಣದ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ; ಫಾರ್ಮ್‌ಹೌಸ್ ಪಕ್ಷಿ ವಿವಾದದಲ್ಲಿ ಕೋರ್ಟ್‌ನಿಂದ ಸಮನ್ಸ್ ಜಾರಿ

BSPಯಲ್ಲಿ ಮಹಾ ಬಿರುಕು: ಅಶೋಕ್ ಸಿದ್ಧಾರ್ಥ್ ನಿವೃತ್ತಿ ಬೆನ್ನಲ್ಲೇ ಸೋದರಳಿಯ ಆಕಾಶ್ ಆನಂದ್‌ನನ್ನು ಪಕ್ಷದ ಜವಾಬ್ದಾರಿಗಳಿಂದ ಕಿತ್ತೊಗೆದ ಮಾಯಾವತಿ..!