ಪ್ರಧಾನ ಸುದ್ದಿ

ಜಾತ್ಯತೀತತೆ ದೇಶಕ್ಕೆ ಇಂದು ಅತ್ಯಗತ್ಯ: ಸೋನಿಯಾ ಗಾಂಧಿ

Guruprasad Narayana

ನವದೆಹಲಿ: ಪಂಡಿತ್ ಜವಹಾರ್ ಲಾಲ್ ನೆಹರು ಆವರ ದಂತಕಥೆಯನ್ನು ಮರುಕಳಿಸುವ ನಿಟ್ಟಿನಲ್ಲಿ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಜಾತ್ಯತೀತತೆ ಅತ್ಯಗತ್ಯ ಎಂದು ಸೋನಿಯಾ ಗಾಂಧಿ ಸೋಮವಾರ ಹೇಳಿದ್ದಾರೆ.

ನಹರೂ ಅವರ ೧೨೫ ನೆ ಜನ್ಮ ಶತಾಬ್ಧಿ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸೋನಿಯಾ ಗಾಂಧಿ ದೇಶದ ಮೊದಲ ಪ್ರಧಾನ ಮಂತ್ರಿಗೆ ಜಾತ್ಯತೀತಯೇ ನಂಬಿಕೆಯ ವಸ್ತುವಾಗಿತ್ತು ಎಂದಿದ್ದಾರೆ.  

"ಜಾತ್ಯತೀತತೆಯ ಹೊರತು ಭಾರತೀಯತೆ ಎಂಬುದಿಲ್ಲ, ಜಾತ್ಯತೀತತೆ ಸಿದ್ಧಾಂತಕ್ಕಿಂತಲೂ ದೊಡ್ಡದಾಗಿತ್ತು ಮತ್ತು ಹಾಗೆಯೇ ಉಳಿಯಲಿದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಜಾತ್ಯತೀತತೆ ಅತ್ಯಗತ್ಯ" ಎಂದಿದ್ದಾರೆ ಸೋನಿಯಾ ಗಾಂಧಿ.

ಜಾತ್ಯತೀತತೆ ಹಲ್ಲೆಗೊಳಗಾದರೆ ಅದನ್ನು ಉಳಿಸಲು ನನ್ನ ಕೊನೆಯ ಉಸಿರಿರುವರೆಗೂ ಹೋರಾಡುತ್ತೇನೆ ಎಂದಿದ್ದರು ನೆಹರೂ ಎಂದು ಸೋನಿಯಾ ಸ್ಮರಿಸಿದ್ದಾರೆ.

ಬಿಜೆಪಿ ಪಕ್ಷದ ಹೆಸರು ಹೇಳದೆ, ಇತ್ತೀಚಿನ ದಿನಗಳಲ್ಲಿ ತಪ್ಪು ಮಾಹಿತಿಗಳಿಂದಾಗಿ ನೆಹರೂ ಅವರ ಜೀವನ ಮತ್ತು ಕೆಲಸದ ಅಗಾಧತೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಆಳುವ ಪಕ್ಷದ ಬಗ್ಗೆ ದೂರಿದ್ದಾರೆ.

ದೇಶಕ್ಕೆ ನೆಹರೂ ಅವರ ಕೊಡುಗೆಗಳನ್ನು ಸ್ಮರಿಸಿದ ಸೋನಿಯಾ ಗಾಂಧಿ, ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೆಹರೂ ಅಗಾಧವಾದ ಕೆಲಸ ಮಾಡಿದ್ದರೆ ಎಂದು ನೆನಪಿಸಿಕೊಂಡರು.

SCROLL FOR NEXT