ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಫೇಸ್ ಬುಕ್ ಮೂಲಕ ಯುವತಿಯರನ್ನು ಲೈಂಗಿಕ ಜಾಲಕ್ಕೆ ಎಳೆಯಲು ಯತ್ನ

ಯುವತಿಯರನ್ನು ಅಪರಾಧ ಕೃತ್ಯಗಳಿಗೆ ಮತ್ತು ವೇಶ್ಯಾವೃತ್ತಿಗೆ ಬಳಸಿಕೊಳ್ಳಲು ದುಷ್ಟರ ಕೂಟ...

ಲಂಡನ್: ಯುವತಿಯರನ್ನು ಅಪರಾಧ ಕೃತ್ಯಗಳಿಗೆ ಮತ್ತು ವೇಶ್ಯಾವೃತ್ತಿಗೆ ಬಳಸಿಕೊಳ್ಳಲು ದುಷ್ಟರ ಕೂಟ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದೆ ಎಂದು ಯೂರೋಪಿನ ಪೊಲೀಸ್ ಸಂಸ್ಥೆ ಯೂರೋಪಾಲ್ ಮಂಗಳವಾರ ಹೇಳಿದೆ.

ಮಕ್ಕಳನ್ನು ನೋಡಿಕೊಳ್ಳಲು ಮತ್ತು ಮನೆಗೆಲಸ ಖಾಲಿ ಇವೆ ಎಂದು ಜಾಹೀರಾತು ಕೊಟ್ಟು ಯುವತಿಯರನ್ನು ಆಕರ್ಷಿಸಿ ಬಲಿಪಶುಗಳನ್ನಾಗಿ ಮಾಡುತ್ತಾರೆ, ನಂತರ ಈ ಜಾಲದಲ್ಲಿ ಸಿಲುಕಿಸಿ ಅವರ ಚಲನವಲನಗಳನ್ನು ಅಂತರ್ಜಾಲ ಕ್ಯಾಮರ ಮತ್ತು ಅಂತರ್ಜಾಲ ಮಾತುಕತೆಯ ಮೂಲಕ ನಿಯಂತ್ರಣ ಮಾಡುತ್ತಾರೆ ಎಂದಿದ್ದಾರೆ ರಾಬ್ ವೈನ್ ರೈಟ್.

"ಹೆಚ್ಚುತ್ತಿರುವ ಇಂತಹ ಪ್ರಕರಣಗಳಲ್ಲಿ ಬಲಿಪಶುಗಳಾದ ಯುವತಿಯರನ್ನು ವೀಕ್ಷಣೆಯಲ್ಲಿಡಲು ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ" ಎಂದು ಸಾಮಾಜಿಕ ನ್ಯಾಯ ಕೇಂದ್ರದ ಚಿಂತನ-ಮಂಥನದಲ್ಲಿ ಲಂಡನ್ ನಲ್ಲಿ ತಿಳಿಸಿದ್ದಾರೆ.

"ಅವರನ್ನು ಭೇಟಿ ಮಾಡುವ ಬದಲಾಗಿ ಇಂದು ವೆಬ್ ಚಾಟ್ ಮತ್ತು ವೆಬ್ ಕ್ಯಾಮ್ ಗಳ ಮೂಲಕ ಯುವತಿರರು ಎಲ್ಲಿರಬೇಕು ಮತ್ತು ಮುಂದಿನ ಗ್ರಾಹಕನಿಗೆ ಎಲ್ಲಿ ಕಾಯಬೇಕು ಎಂಬುದನ್ನು ತಿಳಿಸುತ್ತಾರೆ" ಎಂದಿದ್ದಾರೆ.

"ಈ ಹಿಂದೆ ಈ ಕಳ್ಳಸಾಗಾಣಿಕೆದಾರರು ಮತ್ತು ಮಧ್ಯವರ್ತಿಗಳು ಈ ಯುವತಿಯರನ್ನು ವೈಯಕ್ತಿಕವಾಗಿ ಭೇಟಿ ಮಾಡಬೇಕಿತ್ತು, ಆದರೆ ಈಗ ಒಂದು ಗುಂಡಿ ಒತ್ತುವ ಮೂಲಕ ೫೦ ಯುವತಿಯರನ್ನು ನಿಯಂತ್ರಿಸಬಹುದು" ಎಂದಿದ್ದಾರೆ.

ಈ ದುಷ್ಟ ಕೂಟಗಳು ಮಾನವ ಕಳ್ಳ ಸಾಗಾಣಿಕೆಯನ್ನು "ಕಡಿಮೆ ಅಪಾಯ ಹೆಚ್ಚು ಲಾಭದ" ಉದ್ಯಮವಾಗಿಸಿಕೊಂಡಿದ್ದಾರೆ ಮತ್ತು ಇದು ಅಪರಾಧಿ ತಂಡಗಳಿಗೆ ಪ್ರತಿ ವರ್ಷ ೧೫೦ ಬಿಲಿಯನ್ ಡಾಲರ್ ವಹಿವಾಟು ನಡೆಸಿಕೊಡುತ್ತದೆ ಎಂದಿದ್ದಾರೆ ಪೋಲೀಸ್ ಮುಖ್ಯಸ್ಥ.

ಯೂರೋಪಿನಲ್ಲಿ ಈ ಜಾಲಕ್ಕೆ ಬಲಿಯಾದವರ ಸಂಖ್ಯೆ ೫೦೦೦೦ ಎಂದು ಅಂದಾಜು ಮಾಡಲಾಗಿದ್ದು, ಇವರು ರೊಮೇನಿಯಾ, ಬಲ್ಗೇರಿಯಾ ಮತ್ತು ಹಂಗೇರಿಯಿಂದ ಹೆಚ್ಚಿನ ಸಂಖೆಯಲ್ಲಿದ್ದು, ಬ್ರಿಟನ್, ಜರ್ಮನಿ, ಬೆಲ್ಜಿಯಂ ಮತ್ತು ನೆದರ್ ಲ್ಯಾಂಡ್ಸ್ ನಲ್ಲಿ ಈ ಯುವತಿಯರು ಈ ಜಾಲಕ್ಕೆ ಬಂದು ಸೇರುತ್ತಾರೆ ಎನ್ನಲಾಗಿದೆ.

ಈ ದುಷ್ಟಕೂಟವನ್ನು ಹಿಮ್ಮೆಟ್ಟಲು ಅಂತರಾಷ್ಟ್ರೀಯ ಸಹಕಾರ ಅಗತ್ಯ ಎಂದಿದ್ದಾರೆ ವೈನ್ ರೈಟ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT