ನೇತಾಜಿ ಸುಭಾಷ್ ಚಂದ್ರ ಬೋಸ್ 
ಪ್ರಧಾನ ಸುದ್ದಿ

ನೇತಾಜಿ ಸಂಬಂಧಿತ ಇನ್ನೂ ಹಲವು ದಾಖಲೆಗಳು ರಹಸ್ಯ

ಯುಪಿಎ ಸರ್ಕಾರದ ಹಾದಿಯಲ್ಲೇ ಹೆಜ್ಜೆ ಇಟ್ಟಿರುವ ಎನ್ ಡಿ ಎ ಸರ್ಕಾರ, ನೇತಾಜಿ ...

ನವದೆಹಲಿ: ಯುಪಿಎ ಸರ್ಕಾರದ ಹಾದಿಯಲ್ಲೇ ಹೆಜ್ಜೆ ಇಟ್ಟಿರುವ ಎನ್ ಡಿ ಎ ಸರ್ಕಾರ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿಗೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕಗೊಳಿಸುವುದಕ್ಕೆ  ನಿರಾಕರಿಸಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ, "ಈ ದಾಖಲೆಗಳನ್ನು ಬಿಡುಗಡೆ ಮಾಡಿದರೆ, ವಿದೇಶಗಳ ಜೊತೆ ಭಾರತದ ಸಂಬಂಧಕ್ಕೆ ಧಕ್ಕೆ ಬರುತ್ತದೆ" ಎಂಬ ಕಾರಣ ಕೊಟ್ಟು ದಾಖಲೆಗಳ ಬಿಡುಗಡೆಗೆ ಪ್ರಧಾನ ಮಂತ್ರಿ ಕಾರ್ಯಾಲಯ ನಿರಾಕರಿಸಿದೆ.

ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿರುವ ನಾಲ್ಕು ಪ್ರಮುಖ ರಹಸ್ಯ ಕಡತಗಳು, ನೇತಾಜಿ ಮತ್ತು ಅವರ ಮಗಳ ಜೊತೆ ನಡೆದಿದ್ದ ಮಾತುಕತೆ, ನೇತಾಜಿ ಅವರ ಬೂಧಿಯನ್ನು ಭಾರತಕ್ಕೆ ತಂದದ್ದು ಹಾಗೂ ನ್ಯಾಯಮೂರ್ತಿ ಮುಖರ್ಜೀ ಸಮಿತಿ ನೇತಾಜಿ ಅವರ ಸಾವಿನ ಬಗ್ಗೆ ನಡೆಸಿದ ತನಿಖೆಯ ಎರಡು ಕಡತಗಳು ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಹೇಳಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರ ಸುಭಾಷ್ ಅಗರವಾಲ್ ಅವರು "ರಹಸ್ಯ ಕಾಪಾಡುವುದಕ್ಕಿಂತ ಜನರಿಗೆ ನಿಜಾಂಶ ಗೊತ್ತು ಮಾಡುವುದು ಮುಖ್ಯ" ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel