ಭಾರತ ಸ್ವಚ್ಛ, ಅಂದದ ದೇಶ ಸ್ವಚ್ಛಂದ ದೇಶವಲ್ಲ
ಗುಲಾಮಗಿರಿಯಿಂದ ಗಾಂಧೀಜಿ ಸ್ವಾತಂತ್ರ..
ಬೆಂಗಳೂರು: ಗುಲಾಮಗಿರಿಯಿಂದ ಗಾಂಧೀಜಿ ಸ್ವಾತಂತ್ರತ್ಯ ದೊಕಿಸಿಕೊಟ್ಟರು, ಆದರೆ ಅವರಿಗೆ ಇಷ್ಟವಾದ ಸ್ವಚ್ಛತೆ ಸಾಧಿಸಲು ನಮ್ಮಿಂದ ಸಾಧ್ಯವಾಗಲಿಲ್ಲ. ವರ್ಷದಲ್ಲಿ ನನಗೆ 100 ಗಂಟೆ ದಾನ ಮಾಡಿ, ಸ್ವಚ್ಛ ಭಾರತ ನಿರ್ಮಾಣ ಮಾಡೋಣ ಎಂಬ ನರೇಂದ್ರ ಮೋದಿ ಹೇಳಿಕೆ ನಿಜವಾಗಬೇಕೆಂದರೆ ಪ್ರಧಾನಿ ಜನ ಪ್ರತಿಯೊಬ್ಬ ನಾಗರೀಕರು ಪೊರಕೆ ಹಿಡಿದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.
ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಅಥವಾ ಯಾವುದೇ ಅಧಿಕಾರಿಗಳಿಂದ ಮಾತ್ರ ಪರಿಸರವನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಪ್ರಧಾನಿಯಿಂದ ಇಂತಹದೊಂದು ಘೋಷಣೆ ಕೆಂಪುಕೋಟೆಯಿಂದ ಕೇಳಿಬಂದಾಗ ಅದು ಅಸಾಧ್ಯ ಎಂದು ಹೇಳಿದವರಿದ್ದಾರೆ. ಆದರೆ ಸ್ವಚ್ಛ ಭಾರತ ನಿರ್ಮಾಣ ಕಷ್ಟ ಸಾಧ್ಯ ಎಂದು ಆ ಕ್ಷಣಕ್ಕೆ ಅನ್ನಿಸಿದರೂ ಪ್ರತಿಯೊಬ್ಬ ಪ್ರಜೆ ಜವಾಬ್ದಾರಿ ಮತ್ತು ಆಸಕ್ತಿ ತೆಗೆದುಕೊಂಡರೆ ಪ್ರಧಾನಿ ಕನಸಿನಂತೆ ಗಾಂಧೀಜಿಯ 150ನೇ ಹುಟ್ಟುಹಬ್ಬಕ್ಕೆ ಸ್ವಚ್ಛಭಾರತವನ್ನು ಅರ್ಪಿಸಬಹುದು.
ಸ್ವಚ್ಛಭಾರತ ಎಂಬ ಯೋಜನೆಯ ಪರಿಕಲ್ಪನೆ ಆರಂಭವಾಗುವುದು ದೇಶದ ಪ್ರತಿಯೊಂದು ಮನೆಯ ಹೊಸ್ತಿಲಿನಿಂದ. ದೇಶದ ಪರಿಸರ ಸ್ವಚ್ಛವಾಗಿಡಲು ಪ್ರಧಾನಿ, ಸಚಿವರಾದಿಯಾಗಿ ಪೊರಕೆ ಹಿಡಿದು ಕಸ ಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ ತೋಡುತ್ತಿದ್ದಾರೆ. ಇದೇ ಕಾರಣದಿಂದ ಕೇಂದ್ರ ಸರ್ಕಾರದ ಎಲ್ಲ ಅಧಿಕಾರಿಗಳ ಗಾಂಧಿ ಜಯಂತಿ ರಜೆಗೂ ಕತ್ತರಿ ಬಿದ್ದಿದೆ. ದೇಶದ ಪ್ರಧಾನಿಯೇ ತಮ್ಮ ಎಲ್ಲ ಕೆಲಸ ಬಿಟ್ಟು ದೇಶಕ್ಕೆ ಬಡಿದಿರುವ ಕಸ ಶಾಪಕ್ಕೆ ವಿಮುಕ್ತಿ ನೀಡಲು ಪೊರಕೆ ಹಿಡಿಯುತ್ತಿರುವಾಗ ಸಾಮಾನ್ಯ ಜನರು ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎನ್ನುವುದು 'ಕನ್ನಡಪ್ರಭ' ಕಾಳಜಿ.