ನವದೆಹಲಿ: ಭಿನ್ನಮತೀಯರ ನಿರ್ಮೂಲನ ಕಾರ್ಯಾಚರಣೆಯನ್ನು ವಿಸ್ತರಿಸಿರುವ ಎಎಪಿ ಪಕ್ಷ ಪಂಜಾಬಿನ ಹಿರಿಯ ನಾಯಕನೊಬ್ಬನನ್ನು ಪಕ್ಷವಿರೋಧಿ ಚಟುವಟಿಕೆಗಳಿಗೆ ಉಚ್ಛಾಟನೆ ಮಾಡಿದೆ.
"ಪಕ್ಷವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡದ್ದಕ್ಕೆ ಪ್ರೊ. ಮಂಜಿತ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಮಾಧ್ಯಮದಲ್ಲಾಗಲಿ ಅಥವಾ ಹೊರಗಾಗಲೀ ಇನ್ನು ಮುಂದೆ ಅವರು ಪಕ್ಷವನ್ನು ಪ್ರತಿನಿಧಿಸುವುದಿಲ್ಲ" ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
ಮಂಜಿತ್ ಸಿಂಗ್ ಅವರನ್ನು ಸಂಪರ್ಕಿಸಿದಾಗ, ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರನ್ನು ಉಚ್ಛಾಟಿಸಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ನನ್ನನು ಅಸಂವಿಧಾನಿಕವಾಗಿ ಹೊರಗೆ ಹಾಕಲಾಗಿದೆ" ಎಂದು ಅವರು ತಿಳಿಸಿದ್ದಾರೆ.
ಮಾಧ್ಯಮದಿಂದಲೇ ನನಗೆ ವಿಷಯ ತಿಳಿದದ್ದು ಎಂದು ಕೂಡ ಅವರು ತಿಳಿಸಿದ್ದಾರೆ.