ಪ್ರಧಾನ ಸುದ್ದಿ

ಗೋವಾ ಟ್ರಯಲ್ ರೂಮ್ ಪ್ರಕರಣ: ಪ್ರಾದೇಶಿಕ ಪೊಲೀಸರೇ ಹೊಣೆ ಎಂದ ಉತ್ತರಪ್ರದೇಶ ಮುಖ್ಯಮಂತ್ರಿ

Guruprasad Narayana

ಲಕನೌ: ಬಟ್ಟೆಯಂಗಡಿಯೊಂದರ ಟ್ರಯಲ್ ರೂಮಿನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಡವಿಟ್ಟಿದ್ದ ಕ್ಯಾಮರಾ ಪತ್ತೆ ಹಚ್ಚಿದ ಹಿನ್ನಲೆಯಲ್ಲೇ, ಉತ್ತರಪ್ರದೇಶದ ಮಾಲ್ ಗಳಲ್ಲಿ ಅಥವಾ ಶೋ ರೂಮುಗಳಲ್ಲಿ ಇಂತಹ ಘಟನೆಗಳಾದರೆ ಪ್ರಾದೇಶಿಕ ಪೊಲೀಸರನ್ನೆ ಹೊಣೆ ಮಾಡುವುದಾಗಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಎಚ್ಚರಿಸಿದ್ದಾರೆ.

ಇಂತಹ ಘಟನೆಗಳು ಸಮಾಜದ ಮೇಲೆ ಕಪ್ಪುಚುಕ್ಕೆಗಳು ಎಂದು ಹೇಳಿರುವ ಮುಖ್ಯಮಂತ್ರಿ, ಇಂತಹ ಘಟನೆಗಳು ತಮ್ಮ ರಾಜ್ಯದಲ್ಲಿ ಸಂಭವಿಸಿದರೆ ಆಯಾ ಪ್ರದೇಶದ ಪೊಲೀಸ್ ಠಾಣೆಯ ಮುಖ್ಯಸ್ಥನನ್ನೇ ಹೊಣೆ ಮಾಡಿ, ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ನೆನ್ನೆ ನಡೆದ ಘಟನೆಯಲ್ಲಿ ಗೋವಾದ ಫ್ಯಾಬ್ ಇಂಡಿಯಾ ಬಟ್ಟೆ ಅಂಗಡಿಯ ಟ್ರಯಲ್ ರೂಮಿನಲ್ಲಿ ಹಿಡ್ಡನ್ ಕ್ಯಾಮರಾ ಪತ್ತೆ ಹಚ್ಚಿದ್ದ ಕೆಂದ್ರ ಸಚಿವೆ ಸ್ಮೃತಿ ಇರಾನಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಫ್ಯಾಬ್ ಇಂಡಿಯಾ ಅಂಗಡಿಯ ನಾಲ್ವರನ್ನು ಬಂಧಿಸಲಾಗಿದೆ.

SCROLL FOR NEXT