ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥ ಅಬು ಬಕ್ರ್ ಅಲ್-ಬಾಗ್ದಾದಿ 
ಪ್ರಧಾನ ಸುದ್ದಿ

ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥ ಬಾಗ್ದಾದಿ ಮೃತ, ರೇಡಿಯೋ ಇರಾನ್ ವರದಿ

ಇಸ್ಲಾಮಿಕ್ ಸ್ಟೇಟ್ ಜಿಹಾದಿ ಸಂಸ್ಥೆಯ ನಿಗೂಢ ಮುಖ್ಯಸ್ಥ ಅಬು ಬಕ್ರ್ ಅಲ್-ಬಾಗ್ದಾದಿ ಮೃತನಾಗಿದ್ದಾನೆ ಎಂದು ರೇಡಿಯೋ ಇರಾನ್

ಇಸ್ಲಾಮಿಕ್ ಸ್ಟೇಟ್ ಜಿಹಾದಿ ಸಂಸ್ಥೆಯ ನಿಗೂಢ ಮುಖ್ಯಸ್ಥ ಅಬು ಬಕ್ರ್ ಅಲ್-ಬಾಗ್ದಾದಿ ಮೃತನಾಗಿದ್ದಾನೆ ಎಂದು ರೇಡಿಯೋ ಇರಾನ್ ಸೋಮವಾರ ವರದಿ ಮಾಡಿದೆ.

ಗಾರ್ಡಿಯನ್ ಪತ್ರಿಕೆಯ ವರದಿಯ ಪ್ರಕಾರ ಮಾರ್ಚ್ ನಲ್ಲಿ ನಡೆದ ಅಮೇರಿಕಾ ಮುಂದಾಳತ್ವದ ಮಿತ್ರರಾಷ್ಟ್ರಗಳ ವೈಮಾನಿಕ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು, ಜಿಹಾದಿ ಸಂಸ್ಥೆಯ ದೈನಂದಿನ ಚಟುವಟಿಕೆಗಳಿಂದ ಬಾಗ್ದಾದಿ ಹೊರಗುಳಿದಿದ್ದ. ೪೦ ವಯಸ್ಸಿನ ಆಸುಪಾಸಿನವನು ಎಂದು ನಂಬಲಾಗಿದ್ದ ಬಾಗ್ದಾದಿ ತಲೆದಂಡಕ್ಕೆ ಅಮೇರಿಕಾ ೧೦ ಮಿಲಿಯನ್ ಯು ಎಸ್ ಡಾಲರ್ಗಳ ಬಹುಮಾನವನ್ನು ಘೋಷಿಸಿತ್ತು.

ಕಳೆದ ತಿಂಗಳು ಪಶ್ಚಿಮ ಇರಾಕಿನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಬು ಬಕ್ರ್ ಅಲ್-ಬಾಗ್ದಾದಿ ಗಾಯಗೊಂಡ ನಂತರ, ಇಸ್ಲಾಮಿಕ್ ಸ್ಟೇಟ್ ನಿವೃತ್ತ ಭೌತಶಾಸ್ತ್ರ ಅಧ್ಯಾಪಕ ಅಬು ಅಲಾ ಆಫ್ರಿಯನ್ನು ತಾತ್ಕಾಲಿಕವಾಗಿ ಮುಖ್ಯಸ್ಥನಾಗಿ ಬದಲಿಸಿತ್ತು ಎಂದು ರಾಷ್ಟ್ರೀಯ ದಿನಪತ್ರಿಕೆಯೊಂದು ವರದಿ ಮಾಡಿತ್ತು.

ಈಗ ಈ ಭೌತಶಾಸ್ತ್ರ ಅಧ್ಯಾಪಕನನ್ನು ಶಾಶ್ವತವಾಗಿ ಇಸ್ಲಾಮಿಕ್ ಸ್ಟೇಟ್ ಸಂಸ್ಥೆಯ ಅಧ್ಯಕ್ಷನನ್ನಾಗಿ ನೇಮಿಸಿದೆಯೇ ಎಂಬುದರ ಬಗ್ಗೆ ಅಧಿಕೃತ ವರದಿ ಬಂದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದರೆ 5 ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ': ಸಿದ್ದರಾಮಯ್ಯ ಮಾರ್ಮಿಕ ಹೇಳಿಕೆ!

ಮತ್ತೊಬ್ಬ ಏಕನಾಥ ಶಿಂಧೆ ಹುಟ್ಟಲು ಸಾಧ್ಯವಿಲ್ಲ; 'ನವೆಂಬರ್ ಕ್ರಾಂತಿ'ಗೆ ಕಾಂಗ್ರೆಸ್ ಅವಕಾಶ ನೀಡಲ್ಲ!

ನಾಳೆಯಿಂದಲೇ ರಾಷ್ಟ್ರವ್ಯಾಪಿ SIR: ಮೊದಲ ಹಂತದಲ್ಲಿ ಕೇರಳ, ತಮಿಳುನಾಡು, ಬಂಗಾಳ ಸೇರಿ 12 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ಶುದ್ಧೀಕರಣ

ಜಗತ್ತಿನ ಯಾವುದೇ ಭಾಗ ತಲುಪಿ ಧ್ವಂಸ ಮಾಡಬಲ್ಲ ರಷ್ಯಾದ ಬ್ಯೂರೆವೆಸ್ಟ್ನಿಕ್ ಪರಮಾಣು ಕ್ಷಿಪಣಿ ಪರೀಕ್ಷೆ ಯಶಸ್ವಿ; ಅಮೆರಿಕಾಗೆ ಢವ ಢವ, ತಣ್ಣಗಾದ ಟ್ರಂಪ್!

ಕೇಜ್ರಿವಾಲ್ ಗೆ ಬೇಲ್, SIR, ಆರ್ಟಿಕಲ್ 370, ವಾಕ್ ಸ್ವಾತಂತ್ರ್ಯದ ಬಗ್ಗೆ ತೀರ್ಪು..: ನೂತನ ಸಿಜೆಐ ಟ್ರ್ಯಾಕ್ ರೆಕಾರ್ಡ್ ಹೀಗಿದೆ...

SCROLL FOR NEXT