ಲೋಕಯುಕ್ತ ಭಾಸ್ಕರ್ ರಾವ್ ಅವರ ಪುತ್ರ ಬಂಧನದಲ್ಲಿರುವ ಯೆರಭಾಟಿ ಅಶ್ವಿನ್ 
ಪ್ರಧಾನ ಸುದ್ದಿ

ಭ್ರಷ್ಟ ಲೋಕಾ: ಅಶ್ವಿನ್ ಮತ್ತು ಸಹಚರನಿಂದ 10.91 ಲಕ್ಷ ವಂಚನೆ: ಹೊಸ ಎಫ್ಐಆರ್

ಲೋಕಯುಕ್ತ ಭಾಸ್ಕರ್ ರಾವ್ ಅವರ ಪುತ್ರ ಯೆರಭಾಟಿ ಅಶ್ವಿನ್ ವಿರುದ್ಧ ವಿಶೇಷ ತನಿಖಾ ದಳ ನೂತನ ಎಫ್ ಐ ಆರ್ ದಾಖಲು ಮಾಡಿದೆ.

ಬೆಂಗಳೂರು: ಲೋಕಯುಕ್ತ ಭಾಸ್ಕರ್ ರಾವ್ ಅವರ ಪುತ್ರ ಯೆರಭಾಟಿ ಅಶ್ವಿನ್ ವಿರುದ್ಧ ವಿಶೇಷ ತನಿಖಾ ದಳ ನೂತನ ಎಫ್ ಐ ಆರ್ ದಾಖಲು ಮಾಡಿದೆ.

ಅಮಾನತುಗೊಂಡಿರುವ ಲೋಕಾಯುಕ್ತದ ಸಾರ್ವಜನಿಕ ಸಂಪರ್ಕಾಧಿಕಾರಿ ಸಯ್ಯದ್ ರಿಯಾಜ್, ದಲ್ಲಾಳಿ ಭಾಸ್ಕರ್, ಅಶ್ವಿನ್ ಮತ್ತು ಅವನ ಸಹಚರ ನರಸಿಂಹ ರಾವ್ ಅವರನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಲಾಗಿದೆ.

ಇದು ಅಶ್ವಿನ್ ವಿರುದ್ಧ ಮೂರನೆ ಎಫ್ ಐ ಆರ್ ಆಗಿದ್ದು, ಭಾಸ್ಕರ್ ಮತ್ತು ರಿಯಾಜ್ ವಿರುದ್ಧ ಎರಡನೆ ಎಫ್ ಐ ಆರ್ ಮತ್ತು ಈ ಮೂವರೂ ಸದ್ಯಕ್ಕೆ ಪೊಲೀಸರ ಬಂಧನದಲ್ಲಿದ್ದಾರೆ.

ಮಾಜಿ ಜಿಲ್ಲ ಪಂಚಾಯಿತಿ ಸದಸ್ಯ, ಉದ್ಯಮಿ ಪಿ ಎನ್ ಕೃಷ್ಣಮೂರ್ತಿ ಅವರ ದೂರಿನ ಮೇಲೆ ಈ ಎಫ್ ಐ ಆರ್ ದಾಖಲಿಸಲಾಗಿದೆ. ಈ ದೂರಿನ ಪ್ರಕಾರ ನರಸಿಂಹ ರಾವ್ ಎನ್ನುವವರು ಕೃಷ್ಣ ಮೂರ್ತಿ ಅವರನ್ನು ಅಶ್ವಿನ್ ಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಇದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರೊಂದಿಗಿನ ಹಣಕಾಸು ವಿವಾವದವನ್ನು ಬಗೆಹರಿಸಿಕೊಡುವುದಾಗಿ ಅಶ್ವಿನ್ ತಿಳಿಸಿದ್ದು, ಯು ಬಿ ಸಿಟಿ ಹೋಟೆಲ್ ಒಂದರಲ್ಲಿ ಭೇಟಿಯಾಗಿದ್ದಾರೆ. ನಂತರ ಕೋರಮಮಂಗಲದ ಆಸ್ತಿಯ ಖಾತೆಯನ್ನು ಮಾಡಿಸಿಕೊಡುವುದಾಗಿ ಕೃಷ್ಣಮೂರ್ತಿಯವರಿಗೆ ಅಶ್ವಿನ್ ತಿಳಿಸಿದ್ದಾನೆ.

ಇದಕ್ಕಾಗಿ 20 ಲಕ್ಷ ಹಣವನ್ನು ಅಶ್ವಿನ್ ಬೇಡಿಕೆಯಿಟ್ಟಿದ್ದು ಅದರಲಿ 10.91 ಲಕ್ಷ ದುಡ್ಡನ್ನು ಹಲವು ಕಂತುಗಳಲ್ಲಿ ಅಶ್ವಿನ್ ಮತ್ತು ನರಸಿಂಹ ರಾವ್ ಅವರಿಗೆ ಕೃಷ್ಣಮೂರ್ತಿ ಪಾವತಿಸಿದ್ದಾರೆ. ಈ ಹಣ ಪಾವತಿಸಿದ ಮೇಲು ಖಾತೆಯನನ್ನು ಮಾಡಲಾಗಿಲ್ಲ ಎಂದು ಕೃಷ್ಣಮೂರ್ತಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇದರ ನಂತರ ಅಶ್ವಿನ್ ಅವರನ್ನು ಮತ್ತೆ ಭೇಟಿ ಮಾಡಿದ ಮೇಲೆ, ಲೋಕಾಯುಕ್ತ ಕಚೇರಿಗೆ ಕೃಷ್ಣಮೂರ್ತಿ ಅವರಿಗೆ ಬರುವಂತೆ ಹೇಳಿ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು, ಕೆಲಸ ಮಾತ್ರ ಆಗಲಿಲ್ಲ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT