ನಾವೇದ್ 
ಪ್ರಧಾನ ಸುದ್ದಿ

ನಾವೇದ್ ಪಾಕಿಸ್ತಾನದ ಪ್ರಜೆ ಎಂಬುದುಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ: ಎನ್ಐಎ

ಉಧಾಂಪುರ ದಾಳಿಯ ವೇಳೆ ಜೀವಂತವಾಗಿ ಸೇರೆ ಸಿಕ್ಕ ಉಸ್ಮಾನ್ ಖಾನ್ ಅಲಿಯಾಸ್ ಮೊಹಮ್ಮದ್ ನಾವೇದ್ ನನ್ನು ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ಹೆಚ್ಚಿನ...

ನವದೆಹಲಿ: ಉಧಾಂಪುರ ದಾಳಿಯ ವೇಳೆ ಜೀವಂತವಾಗಿ ಸೇರೆ ಸಿಕ್ಕ ಉಸ್ಮಾನ್ ಖಾನ್ ಅಲಿಯಾಸ್ ಮೊಹಮ್ಮದ್ ನಾವೇದ್ ನನ್ನು ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ಹೆಚ್ಚಿನ ವಿಚಾರಣೆಗಾಗಿ ಗುರುವಾರ ದೆಹಲಿಗೆ ಕರೆತಂದಿದ್ದು, ಉಗ್ರ ಪಾಕಿಸ್ತಾನದೊಂದಿಗೆ ಹೊಂದಿರುವ ಸಂಬಂಧವನ್ನು ಸಾಭೀತುಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗಿವೆ ಎಂದು ಹೇಳಿದೆ.

ವಿಚಾರಣೆ ವೇಳೆ ಉಗ್ರ ನಾವೇದ್ ಸಾಕಷ್ಟು ವಿಷಯಗಳನ್ನು ಬಾಯಿಬಿಟ್ಟಿದ್ದು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆಯೂ ನಂಟು ಹೊಂದಿರುವುದಾಗಿ ಹೇಳಿದ್ದಾನೆ ಎಂದು ಎನ್ಐಎ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇದೊಂದು ಅಂತರಾಷ್ಟ್ರೀಯ ಮತ್ತು ಅತಿ ಸೂಕ್ಷ್ಮ ಪ್ರಕರಣವಾಗಿದ್ದು, ವಿಚಾರಣೆ ವೇಳೆ ಆರೋಪಿ ನೀಡಿದ ಎಲ್ಲಾ ಹೇಳಿಕೆಗಳಿಗೂ ನಾವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ ಮತ್ತು ಆತ ಪಾಕಿಸ್ತಾನ ಬೆಂಬಲಿತ ವ್ಯಕ್ತಿ ಎಂದು ಎನ್ಐಎ ನಿರ್ದೇಶಕರು ಹೇಳಿದ್ದಾರೆ.

ಕಳೆದ ಆಗಸ್ಟ್ 3ರಂದು ಜಮ್ಮು ಮತ್ತು ಕಾಶ್ಮೀರದ ಉಧಾಂಪುರದಲ್ಲಿ ನಡೆದ ಉಗ್ರರ ದಾಳಿಯ ವೇಳೆ ಭಾರತೀಯ ಸೇನಾಪಡೆ ನಾವೇದ್ ನನ್ನು ಬಂಧಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಮೇಲೆ ಅಮೆರಿಕ ದಾಳಿಗೆ 'ಆಪರೇಷನ್ ಎಪಿಕ್ ಫ್ಯೂರಿ' ಎಂದು ಹೆಸರು; ಇಸ್ಲಾಮಿಕ್ ಸರ್ಕಾರ ಉರುಳಿಸುವುದು ನಮ್ಮ ಗುರಿ ಎಂದ ಟ್ರಂಪ್

ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿ: ಇರಾನ್ ನ 36 ಶಾಲಾ ವಿದ್ಯಾರ್ಥಿನಿಯರ ಸಾವು!

ಇರಾನ್ ಮೇಲೆ ಇಸ್ರೇಲ್, ಅಮೆರಿಕದಿಂದ ದಾಳಿ: ರಾಜಧಾನಿ ತೊರೆದ ಅಯತೊಲ್ಲಾ ಖಮೇನಿ

ಕಾಂಗ್ರೆಸ್ MMC ಆಗಿ ಮಾರ್ಪಟ್ಟಿದೆ: ಪ್ರಧಾನಿ ಮೋದಿ ಹೀಗೆ ಹೇಳಿದ್ದೇಕೆ?

ರೇಣುಕಾಸ್ವಾಮಿ‌ ಕೊಲೆ: ನಟ ದರ್ಶನ್ ವಿರುದ್ಧ ನಕಲಿ ದಾಖಲೆ ಸೃಷ್ಟಿ, ಕನ್ನಡಪರ ಸಂಘಟನೆಗಳ ಪ್ರತಿಭಟನೆ

SCROLL FOR NEXT