ಕಾಂಗ್ರೆಸ್ ಅಭ್ಯರ್ಥಿ ಯುವರಾಜ್, ಜೆಡಿಎಸ್ ಅಭ್ಯರ್ಥಿ ಹೇಮಲತಾ ಗೋಪಾಲಯ್ಯ, ಬಿಜೆಪಿ ಅಭ್ಯರ್ಥಿ ವಾಣಿಶ್ರೀ ವಿಶ್ವನಾಥ್ ಹಾಗೂ ಜೆಡಿಎಸ್ ಅಭ್ಯರ್ಥಿ, ಕ್ರಿಯಾ ಶೈಲಜಾ 
ಪ್ರಧಾನ ಸುದ್ದಿ

ಆಗರ್ಭ ಶ್ರೀಮಂತೆಯರು ಶಾಸಕರ ಈ ಪತ್ನಿಯರು

ಬಿಬಿಎಂಪಿ ಚುನಾವಣೆಗೆ ಶಾಸಕರು ತಮ್ಮ ಪತ್ನಿಯರನ್ನು ಕಣಕ್ಕಿಳಿಸಿ ಮತ್ತೊಂದು ದರ್ಜೆಯ ಅಧಿಕಾರವನ್ನು ಮನೆಯಲ್ಲೇ ಉಳಿಸಿಕೊಳ್ಳಲು ಬಯಸಿದ್ದಾರೆ...

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಶಾಸಕರು ತಮ್ಮ ಪತ್ನಿಯರನ್ನು ಕಣಕ್ಕಿಳಿಸಿ ಮತ್ತೊಂದು ದರ್ಜೆಯ ಅಧಿಕಾರವನ್ನು ಮನೆಯಲ್ಲೇ ಉಳಿಸಿಕೊಳ್ಳಲು ಬಯಸಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಜೆಡಿಎಸ್ ಎಲ್ಲಕ್ಕಿಂತ ಮುಂದು. ಜೆಡಿಎಸ್ ನ ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪತ್ನಿ ಕ್ರಿಯಾ ಶೈಲಜಾ ಅವರನ್ನು ಹಾಗೂ ಮಹಾಲಕ್ಷ್ಮಿ
ಬಡಾವಣೆ ಶಾಸಕ ಗೋಪಾಲಯ್ಯ ಅವರು ಪತ್ನಿ ಎಚ್ .ಪಿ. ಹೇಮಲತಾ ಅವರನ್ನು ಕಣಕ್ಕಿಳಿಸಿದ್ದಾರೆ. ಬಿಜೆಪಿಯ ಎಸ್.ಆರ್. ವಿಶ್ವನಾಥ್ ಅವರು ಪತ್ನಿ ವಾಣಿಶ್ರೀ ಅವರನ್ನು ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್‍ನ ಆರ್ .ವಿ. ದೇವರಾಜ್ ಅವರು ಪುತ್ರ ಯುವರಾಜನಿಗೆ ಕಾರ್ಪೊರೇಟರ್ ಪಟ್ಟ ಕಟ್ಟಲು ಹೊರಟಿದ್ದಾರೆ.

ಇವರೆಲ್ಲರೂ ಕೋಟ್ಯಾಧಿಪತಿಗಳೇ ಎಂಬುದು ಇನ್ನೊಂದು ವಿಶೇಷ. ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಪತ್ನಿ ವಾಣಿಶ್ರೀ ವಿಶ್ವನಾಥ್ ಈ `ಪತ್ನಿಯರ ಸವಾಲಿ'ನಲ್ಲಿ ಆರ್ಥಿಕವಾಗಿ ಸಾಕಷ್ಟು ಮುಂದಿದ್ದಾರೆ. ವೈಯಕ್ತಿಕವಾಗಿ ಅವರಲ್ಲೇ ಕೋಟ್ಯಂತರ ಮೌಲ್ಯದ ನಗದು, ಆಸ್ತಿ ಇದೆ. ಶಾಸಕರಾಗಿರುವ ಪತಿ ವಿಶ್ವನಾಥ್ ಅವರ ಆಸ್ತಿಯನ್ನೂ ಸೇರಿಸಲಾಗಿ ಇವರ ಕುಟುಂಬದ ಆಸ್ತಿ-ಪಾಸ್ತಿ ಮೌಲ್ಯ ರು.25 ಕೋಟಿ ಮೀರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!