ಬೆಂಗಳೂರು: ದೂರು ದಾಖಲಿಸಿಕೊಳ್ಳಲು ದೇಶದಲ್ಲೇ ಮೊದಲ ಬಾರಿಗೆ ಎಫ್ಐಆರ್ ಕಿಯೋಸ್ಕ್ ಸ್ಥಾಪನೆ, ಸಾಮಾಜಿಕ ಜಾಲ ತಾಣ ಮೂಲ ಕ ನಾಗರಿಕರ ತಲುಪುವುದು ಸೇರಿದಂತೆ ಸ್ಮಾರ್ಟ್ ಪೋಲಿಸಿಂಗ್ ವಿಚಾರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ನಗರ ಪೊಲೀಸ್ ಘಟಕ ಮತ್ತೊಂದು ಪ್ರಥಮಕ್ಕೆ ಪಾತ್ರವಾಗಲಿದೆ.
ಡಿಜಿಟಲ್ ಇಂಡಿಯಾಗೆ ಪ್ರೊತ್ಸಾಹ ನೀಡುತ್ತಿರುವ ಪ್ರಧಾನಮಂತ್ರಿ ಮೋದಿ ಇದೇ ಆ. 26ರಂದು ವಿಡಿಯೋ ಕಾನ್ಫೆರೆನ್ಸ್‍ನಲ್ಲಿ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯ ತಂತ್ರಜ್ಞಾನ ಅಳವಡಿಕೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ಏನು ವಿಶೇಷ?: ಕಾನೂನು ಸುವ್ಯವಸ್ಥೆ ಗೆಂದು ಠಾಣೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾಗಳ ನಿರ್ವಹಣೆ, ಎಫ್ಐಆರ್, ಚಾರ್ಜ್‍ಶೀಟ್, ಪೊಲೀಸ್ ಪರಿಶೀಲನಾ ಪತ್ರ ಹಾಗೂ ಪ್ರಕರಣಗಳ ತನಿಖಾ ಪ್ರಗತಿ ಕುರಿತು ಆನ್‍ಲೈನ್‍ನಲ್ಲೇ ಮಾಹಿತಿ ಅಪ್‍ಲೋಡ್ ಮಾಡುವ ವ್ಯವಸ್ಥೆಗೆ ಕಬ್ಬನ್‍ಪಾರ್ಕ್ ಠಾಣೆಯಲ್ಲಿ ಒತ್ತು ನೀಡಲಾಗಿದೆ. ಅದಕ್ಕಾಗಿ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಈ ಬಗ್ಗೆ ಮೋದಿ ಮಾಹಿತಿ ಪಡೆಯಲಿದ್ದಾರೆ.