ಮತದಾನಕ್ಕಾಗಿ ಕಾದು ನಿಂತಿರುವ ಜನ ಮತದಾರರು (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

"ಬೃಹತ್" ಮತದಾನ ಆರಂಭ, ಎಲ್ಲೆಡೆ ಬಿಗಿ ಭದ್ರತೆ

ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿರುವ, ಸರ್ಕಾರದ ಪ್ರತಿಷ್ಠೆಯೂ ಆಗಿರುವ ಬಿಬಿಎಂಪಿಗೆ ಶನಿವಾರ ಬೆಳಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ...

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿರುವ, ಸರ್ಕಾರದ ಪ್ರತಿಷ್ಠೆಯೂ ಆಗಿರುವ ಬಿಬಿಎಂಪಿಗೆ ಶನಿವಾರ ಬೆಳಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಿದ್ದು, ಎಲ್ಲೆಡೆ  ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಶಾಸಕರ ಪತ್ನಿ, ಪುತ್ರ, ಮಾಜಿ ಮೇಯರ್, ಹಾಗೂ ಮಾಜಿ ಸದಸ್ಯರೂ ಸ್ಪರ್ಧಿಸಿರುವ ಬಿಬಿಎಂಪಿಯ 197 ವಾರ್ಡ್‍ಗಳಿಗೆ ಮತದಾನ ನಡೆಯುತ್ತಿದ್ದು, ಕಣದಲ್ಲಿರುವ 1,121 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಬೃಹತ್ ಬೆಂಗಳೂರಿನಲ್ಲಿ 73,88,256 ಮತದಾರರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಇತರ ಪಕ್ಷ ಹಾಗೂ  ಪಕ್ಷೇತರರೂ ಸೇರಿದಂತೆ 1,121 ಅಭ್ಯರ್ಥಿಗಳ ಹಣೆ ಬರಹ ಬರೆಯಲಿದ್ದಾರೆ.

ಈಗಾಗಲೇ ಹೊಂಗಸಂದ್ರ ವಾರ್ಡ್‍ನಿಂದ ಬಿಜೆಪಿಯ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ಬರು ಮಾಜಿ ಮೇಯರ್‍ಗಳು, ಮಾಜಿ ಮೇಯರ್‍ಗಳ ಪತ್ನಿಯರು, 20ಕ್ಕೂ  ಹೆಚ್ಚು ರಾಜಕಾರಣಿಗಳ ಕುಟುಂಬದವರು, 13 ಮಾಜಿ ಕಾರ್ಪೊರೇಟರ್‍ಗಳ ಪತ್ನಿಯರು, ಇಬ್ಬರು ಶಾಸಕರ ಪುತ್ರರು ಹಾಗೂ 30 ಮಾಜಿ ಕಾರ್ಪೊರೇಟರ್‍ಗಳು ಚುನಾವಣಾ ಕಣದಲ್ಲಿ ಅದೃಷ್ಟ ಪರೀಕ್ಷೆ  ನಡೆಸಿದ್ದಾರೆ.

ಇವರೊಂದಿಗೆ ಹಂಪಿ ನಗರ ವಾರ್ಡ್‍ನಲ್ಲಿ ಗಾಯತ್ರಿ ಎಂಬ ಮಂಗಳಮುಖಿ ಕೂಡ ಕಣದಲ್ಲಿದ್ದು ಗಮನ ಸೆಳೆದಿದ್ದಾರೆ.

ಶೇ.60ರ ಮತದಾನದ ಗುರಿ: ಚುನಾವಣೆ ಮುಂದೂಡಿಕೆ ಸರ್ಕಸ್‍ಗಳ  ನಡುವೆಯೂ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ವಿವಿಧ ಹಂತದಲ್ಲಿ ಕಸರತ್ತು ನಡೆಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಇದಕ್ಕೆ ತಕ್ಕಂತೆ ರಾಜ್ಯ ಚುನಾವಣಾ ಆಯೋಗ ಕೂಡ  ಮುಂದೂಡಿಕೆ ಗೊಂದಲದ ನಡುವೆಯೇ ಎಲ್ಲಾ ಸಿದ್ಧತೆಗಳನ್ನು ನಡೆಸಿದೆ. ಅಷ್ಟೇ ಅಲ್ಲ. ಪ್ರತಿ ಚುನಾವಣೆಯಲ್ಲೂ ಶೇ.46 ಮೀರದ ಮತದಾನ ಪ್ರಮಾಣವನ್ನು ಈ ಬಾರಿ ಹೇಗಾದರೂ ಮಾಡಿ ಶೇ. 60ಕ್ಕೆ ಮುಟ್ಟಿಸಲು ಸಕಲ ಪ್ರಯತ್ನ ನಡೆಸಿದೆ.

ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಇದರಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೂ ರಜೆ ಘೋಷಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!